Gandhada Gudi Twitter Review: `ಇಲ್ಲಿ ಪ್ರಕೃತಿಯೇ ದೇವರಲ್ಲ, ದೇವರೊಂದಿಗೆ ಪ್ರಕೃತಿ` ಎಂದ ನೆಟ್ಟಿಜನ್ಸ್
Gandhada Gudi Twitter Review: ಇದೀಗ ಪುನೀತ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಜನರು ತಮ್ಮ ಟ್ವಿಟ್ಟರ್‌ನಲ್ಲಿ ಈ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಗಂಧದ ಗುಡಿಯ ಬಗ್ಗೆ ಟ್ವಿಟ್ಟರ್ ವಿಮರ್ಶೆ ಏನು ಹೇಳುತ್ತೆ ನೋಡೋಣ.
Gandhada Gudi Twitter Review: ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ಗಂಧದ ಗುಡಿ ಸ್ಯಾಂಡಲ್‌ವುಡ್ ತಾರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ. ನಾಳೆ ಅಪ್ಪು ಅವರ ಮೊದಲ ಪುಣ್ಯತಿಥಿ. ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. ಅಪ್ಪು ಈ ಹೆಸರು ಕನ್ನಡಿಗರಿಗೆ ಅಚ್ಚುಮೆಚ್ಚು. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಪುನೀತ್ ಅಂದ್ರೆ ಇಷ್ಟ. ಆದರೆ ಒಂದು ವರ್ಷದ ಹಿಂದೆ ಈ ಯುವರತ್ನ ಎಲ್ಲರನ್ನೂ ಅಗಲಿದರು. ಆ ನೋವು ಇಂದಿಗೂ ಕಾಡುತ್ತಿದೆ. ಇದೀಗ ಪುನೀತ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಜನರು ತಮ್ಮ ಟ್ವಿಟ್ಟರ್‌ನಲ್ಲಿ ಈ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಗಂಧದ ಗುಡಿಯ ಬಗ್ಗೆ ಟ್ವಿಟ್ಟರ್ ವಿಮರ್ಶೆ ಏನು ಹೇಳುತ್ತೆ ನೋಡೋಣ.
ಇದನ್ನೂ ಓದಿ : ನಿಮ್ಮನ್ನ ನಂಬಿ ಬಂದಿದ್ದೀನಿ,ಹೆಂಡ್ತಿ-ಮಕ್ಕಳು ಮನೇಲಿದ್ದಾರೆ" - "ಗಂಧದಗುಡಿ"ಯ ರಾಜಕುಮಾರ ಪುನೀತ್
ಗಂಧದ ಗುಡಿಯ ಘಮ ಇದೀಗ ಇಡೀ ವಿಶ್ವವನ್ನೇ ಆವರಿಸಿದೆ. ಗಂಧದ ಗುಡಿಯ ರಾಜಕುಮಾರ ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು ಕರುನಾಡಿನ ಶ್ರೀಮಂತಿಕೆಯನ್ನ ಗಂಧದ ಗುಡಿ ಸಿನಿಮಾ ಮೂಲಕ ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದಾರೆ. ಪ್ರತಿಯೊಬ್ಬರು ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ ಅಂದ್ರೆ ಅದು ಗಂಧದ ಗುಡಿ. ಸುಮಾರು ಒಂದೂವರೆ ಗಂಟೆಗಳ ಕಾಲ ಇರೋ ಈ ಡಾಕ್ಯುಮೆಂಟರಿಯಲ್ಲಿ ಪುನೀತ್ ಪವರ್ ಸ್ಟಾರ್ ಆಗಿಲ್ಲ, ಬದಲಾಗಿ ನಮ್ಮ ನಾಡಿನ ಪ್ರಾಣಿಸಂಕುಲ, ಜಲಚರ, ಬೆಟ್ಟ ಗುಡ್ಡ, ನದಿ, ಸಮುದ್ರಗಳ ಸೌಂದರ್ಯವನ್ನ ಕಂಡು ಆ ಖುಷಿಯ ಕ್ಷಣಗಳನ್ನ ನಮ್ಮೊಂದಿಗೆ ಶೇರ್ ಮಾಡುತ್ತಿದ್ದಾರೇನೋ ಅಂತ ಅನಿಸೋದು ಪಕ್ಕಾ.
ಇದನ್ನೂ ಓದಿ : Kantara : ಕಾಂತಾರಗಿಂತ ಮೊದಲೇ ಬಂದಿತ್ತು ಪಿಂಗಾರ ಎಂಬ ತುಳುನಾಡ ದೈವಗಳ ಸಿನಿಮಾ
ಇದೀಗ ಈ ಸಿನಿಮಾ ವೀಕ್ಷಿಸಿದ ಜನರು ಗಂಧದ ಗುಡಿಯ ಪರಿಮಳಕ್ಕೆ ಮನಸೋತಿದ್ದಾರೆ. "ಇದು ಪ್ರಕೃತಿಯೇ ದೇವರು ಅಲ್ಲ, ಇದು ದೇವರೊಂದಿಗೆ ಪ್ರಕೃತಿ" ಎಂದು ಟ್ವಿಟ್ಟರ್ ಬಳಕೆದಾರರು ಬರೆದುಕೊಂಡಿದ್ದಾರೆ. "ಮೊದಲ ಬಾರಿಗೆ ಅಂತಿಮ ಕ್ರೆಡಿಟ್‌ಗಳು ಬಂದ ನಂತರವೂ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಸಿನಿಮಾ ಹಾಲ್‌ನಿಂದ ಹೊರಬರಲು ಸಿದ್ಧರಿರಲಿಲ್ಲ" ಎಂದು ಮತ್ತೊಬ್ಬ ನೆಟ್ಟಿಜನ್ ಬರೆದುಕೊಂಡಿದ್ದಾರೆ. "ಗಂಧದ ಗುಡಿ ವಾವ್ ವಿಭಿನ್ನ ಅನುಭವ ಮತ್ತು ಬಾಸ್ ಅನ್ನು ನೋಡಲು ಭಾವನಾತ್ಮಕವಾಗಿದೆ" ಎಂದು ಇನ್ನೊಬ್ಬ ಟ್ವಿಟ್ಟರ್ ಬಲಕೆದಾರರು ಪೋಸ್ಟ್ ಮಾಡಿದ್ದಾರೆ. ಹೀಗೆ ಅನೇಕ ಟ್ವಿಟ್ಟರ್ ಬಳಕೆದಾರರು ಗಂಧದ ಗುಡಿಯ ಬಗ್ಗೆ ಬರೆದುಕೊಂಡಿದ್ದು, ಸಿನಿಮಾವನ್ನು ಹಾಡು ಹೊಗಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.