ಅಪ್ಪು ʼಗಂಧದಗುಡಿʼಯಿಂದ ಡಾಲಿ ʼಹೆಡ್‌ಬುಷ್‌ʼಗೆ ಎದುರಾಗುತ್ತಾ ಸಂಕಷ್ಟ...!.

ಡಾಲಿ ಧನಂಜಯ್‌ ಅಭಿನಯದ ಹೆಡ್‌ಬುಷ್‌ ಸಿನಿಮಾ ಸದ್ಯ ಕರ್ನಾಟದ ತುಂಬ ಆವರಿಸಿಕೊಳ್ಳುತ್ತಿದೆ. ಇನ್ನು ಇದೇ ಹೊತ್ತಿನಲ್ಲಿ  ಈ ತಿಂಗಳ 28 ರಂದು ಪುನೀತ್‌ ರಾಜಕುಮಾರ್‌ ಅವರ ಗಂಧದಗುಡಿ ಸಿನಿಮಾ ರಿಲೀಸ್‌ ಅಗಲಿದ್ದು, ಎರಡೂ ಸಿನಿಮಾಗೆ ಚಿತ್ರಮಂದಿರಗಳ ಕೊರತೆ ಉಂಟಾಗುತ್ತಾ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. 

Written by - Krishna N K | Last Updated : Oct 26, 2022, 01:15 PM IST
  • ಕರ್ನಾಟಕದಲ್ಲಿ ಕಾಂತಾರ ಅಬ್ಬರ ಕಡಿಮೆಯಾಗಿಲ್ಲ
  • ಹೆಡ್‌ಬುಷ್‌ ಸಿನಿಮಾ ಸದ್ಯ ಕರ್ನಾಟದ ತುಂಬ ಆವರಿಸಿಕೊಳ್ಳುತ್ತಿದೆ
  • ಇದೇ ಹೊತ್ತಿನಲ್ಲಿ ಪುನೀತ್‌ ರಾಜಕುಮಾರ್‌ ಅವರ ಗಂಧದಗುಡಿ ಸಿನಿಮಾ ರಿಲೀಸ್‌ ಅಗಲಿದೆ
ಅಪ್ಪು ʼಗಂಧದಗುಡಿʼಯಿಂದ ಡಾಲಿ ʼಹೆಡ್‌ಬುಷ್‌ʼಗೆ ಎದುರಾಗುತ್ತಾ ಸಂಕಷ್ಟ...!. title=

ಬೆಂಗಳೂರು : ಈಗಾಗಲೇ ಕರ್ನಾಟಕದಲ್ಲಿ ಕಾಂತಾರ ಅದ್ಭುತ ಪ್ರದರ್ಶನ ಕಂಡು ಜನ ಮೆಚ್ಚಿನ ಸಿನಿಮಾ ಆಗಿ ಹೊರಹೊಮ್ಮಿದೆ. ಇದುವರೆಗೂ ಕಾಂತಾರ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಈ ನಡುವೆ ಬಿಡುಗಡೆಯಾದ ಡಾಲಿ ಧನಂಜಯ್‌ ಅಭಿನಯದ ಹೆಡ್‌ಬುಷ್‌ ಸಿನಿಮಾ ಸದ್ಯ ಕರ್ನಾಟದ ತುಂಬ ಆವರಿಸಿಕೊಳ್ಳುತ್ತಿದೆ. ಇನ್ನು ಇದೇ ಹೊತ್ತಿನಲ್ಲಿ  ಈ ತಿಂಗಳ 28 ರಂದು ಪುನೀತ್‌ ರಾಜಕುಮಾರ್‌ ಅವರ ಗಂಧದಗುಡಿ ಸಿನಿಮಾ ರಿಲೀಸ್‌ ಅಗಲಿದ್ದು, ಎರಡೂ ಸಿನಿಮಾಗೆ ಚಿತ್ರಮಂದಿರಗಳ ಕೊರತೆ ಉಂಟಾಗುತ್ತಾ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. 

ಹೌದು... ಕಾಂತಾರ ಸದ್ಯ ಚಿತ್ರಮಂದಿರದಿಂದ ಮರೆಯಾಗಿ ಹೆಡ್‌ಬುಡ್‌ ಪ್ರದರ್ಶನ ಕಾಣುತ್ತಿದೆ. ಹೆಡ್‌ಬುಷ್‌ ಬಿಡುಗಡೆಯಾಗಿ ಕೇವಲ ಒಂದು ವಾರ ಆಗುತ್ತಾ ಬರುತ್ತಿದೆ. ಇನ್ನು ಪ್ರಾರಂಭದಲ್ಲಿ ಕಾಂತಾರ ಅಬ್ಬರದಿಂದ ಡಾಲಿ ಸಿನಿಮಾಗೆ ಚಿತ್ರಮಂದಿರ ಕೊರತೆ ಉಂಟಾಗಿತ್ತು. ಸದ್ಯ ಎಲ್ಲವೂ ಸರಿಯಾಗುವ ಹೊತ್ತಿನಲ್ಲಿ ಇದೇ 28 ರಂದು ಪುನೀತ್‌ ರಾಜಕುಮಾರ್‌ ಅವರ ಗಂಧದಗುಡಿ ಸಿನಿಮಾ ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ: 

ಗಂಧದಗುಡಿ ಸಿನಿಮಾ ನೋಡಲು ಕರ್ನಾಟಕದ ಜನತೆ ತುದಿಗಾಲಿನಲ್ಲಿ ಕುಳಿತು ಕಾಯುತ್ತಿದ್ದಾರೆ. ಇನ್ನು ಸಿನಿಮಾ ಬಿಡುಗಡೆಯಾದರೆ ಥಿಯೇಟರ್‌ನಿಂದ ಹೆಡ್‌ಬುಷ್‌ ವಾಷ್‌ ಔಟ್‌ ಆಗುತ್ತಾ ಎನ್ನುವ ಸಂದೇಹ ಮೂಡಿದೆ. ಇದಲ್ಲದೆ ಹೆಡ್‌ಬುಷ್‌ ಚಿತ್ರತಂಡದ ಮೇಲೆ ಕರಗ ಹಾಗೂ ವೀರಭದ್ರದೇವರ ಗುಗ್ಗುಳದಲ್ಲಿ ಅಪಚಾರ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಾರಂಭದಲ್ಲಿಯೇ ವಿಘ್ನ ಎನ್ನುವಂತೆ ಡಾಲಿ ಸಿನಿಮಾಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News