'ಗಂಧದಗುಡಿ'ಯ ಸುಗಂಧದ ಪರಿಮಳ ಭೂಲೋಕವನ್ನೇ ಆವರಿಸಿದೆ. 'ಗಂಧದಗುಡಿ'ಯ ರಾಜಕುಮಾರ ಅಂದ್ರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು ನಮ್ಮ ನಾಡಿನ ಶ್ರೀಮಂತಿಕೆಯನ್ನ 'ಗಂಧದಗುಡಿ' ಸಿನಿಮಾ ಮೂಲಕ ಪ್ರಪಂಚಕ್ಕೆ ಸಾರಿ ಸಾರಿ ಹೇಳಿದ್ದಾರೆ.
ನಾಡಿನ ಪ್ರೀತಿಯ ದೊರೆ ಅಪ್ಪು
ಪ್ರತಿಯೊಬ್ಬ ಅಪ್ಪು ಅಭಿಮಾನಿಯೂ ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ ಅಂದ್ರೆ ಅದು 'ಗಂಧದಗುಡಿ'. 'ಗಂಧದಗುಡಿ' ಸುಮಾರು ಒಂದುವರೆ ಗಂಟೆಗಳ ಕಾಲ ಇರೋ ಡಾಕ್ಯುಮೆಂಟರಿ. ಇಲ್ಲಿ ಪುನೀತ್ ಪವರ್ ಸ್ಟಾರ್ ಆಗಿಲ್ಲ, ಬದಲಾಗಿ ನಮ್ಮ ನಾಡಿನ ಪ್ರಾಣಿಸಂಕುಲ,ಜಲಚರ,ಬೆಟ್ಟ ಗುಡ್ಡ,ನದಿ,ಸಮುದ್ರಗಳ ಸೌಂದರ್ಯವನ್ನ ಪುಟ್ಟಮಗುವಿನಂತೆ ವೀಕ್ಷಿಸಿ ಆ ಖುಷಿಯ ಕ್ಷಣಗಳನ್ನ ನಮ್ಮೊಂದಿಗೆ ಶೇರ್ ಮಾಡುತ್ತಿದ್ದಾರೇನೋ ಅಂತ ಅನಿಸೋದು ಪಕ್ಕಾ.
'ಗಂಧದಗುಡಿ' ಸಿನಿಮಾ ಪ್ರಾರಂಭದಲ್ಲಿ 'ಬೆಟ್ಟದಹೂವು' ಸಿನಿಮಾದ ಒಂದು ಸೀನ್ ಮೂಲಕ ಶುರುವಾಗುತ್ತೆ. ನಂತರ ಅಶ್ವಿನಿ ಪುನೀತ್ ಅಪ್ಪು ಬಗ್ಗೆ ಒಂದಷ್ಟು ವಿಚಾರ ಗಳನ್ನ ತಮ್ಮ ಧ್ವನಿಯ ಮೂಲಕ ನಿರೂಪಣೆ ಮಾಡುತ್ತಾರೆ.ಆ ಕ್ಷಣ ಯಾಕೋ ಎಲ್ಲರನ್ನೂ ಕಾಡಿ ಕಣ್ಣಂಚಲ್ಲಿ ನೀರು ಬರಿಸುತ್ತೆ. ನಂತರ ಡೈರೆಕ್ಟರ್ ಅಮೋಘ ವರ್ಷ ಮತ್ತು ಪುನೀತ್ ಜರ್ನಿ ಶುರುವಾಗುತ್ತೆ. ಆ ಜರ್ನಿಯನ್ನ ನೋಡುತ್ತಿದ್ದರೆ ಛೇ..! ಅಪ್ಪು ಇರಬೇಕಿತ್ತು ಅಂತ ಪ್ರತಿಯೊಬ್ಬರೂ ದೇವರಿಗೆ ಹಿಡಿಹಿಡಿ ಶಾಪ ಹಾಕೋದು ಕೂಡ ಅಷ್ಟೇ ಸತ್ಯ.
ಇದನ್ನೂ ಓದಿ: Team Indiaದ ‘ತ್ರಿಮೂರ್ತಿ’ಗಳ ಅಬ್ಬರ: ರೋಹಿತ್, ಕೊಹ್ಲಿ, ಯಾದವ್ ಆಟಕ್ಕೆ ನಲುಗಿತು ನೆದರ್ಲ್ಯಾಂಡ್
ಅಣ್ಣಾವ್ರು ಹುಟ್ಟಿ ಬೆಳೆದ ಗಾಜಾನೂರಿನ ಮನೆಗೆ ಅಪ್ಪು ಡೈರೆಕ್ಟರ್ ಅಮೋಘವರ್ಷ ಅವರೊಂದಿಗೆ ಭೇಟಿ ನೀಡಿ ಅಣ್ಣಾವ್ರ ಬಗ್ಗೆ ಹೇಳೋ ಮಾತು ಕೇಳ್ಬೇಕು ಅಂದ್ರೆ ಈ ಕೂಡಲೇ ಗಂಧದಗುಡಿ ಸಿನಿಮಾ ನೋಡಲು ರೆಡಿಯಾಗಿ. ಇಲ್ಲಿ ಒಂದು ಮಾತನ್ನ ಅಪ್ಪು ಹೇಳ್ತಾರೆ, ಅದು ಏನಂದ್ರೆ ನಂಗೆ ಎರಡು ಕನಸಿದೆ.ಅದು ಹುಲಿ ಮತ್ತು ಆನೆಯನ್ನ ನೋಡೋದು ಬೇಗ ತೋರಿಸಿ ಅಂತ ಕೇಳಿಕೊಳ್ಳುತ್ತಾರೆ.ಅಂತೆಯೇ ಆನೆಯನ್ನ ನೋಡಿ 'ಭಕ್ತ ಪ್ರಹ್ಲಾದ' ಸಿನಿಮಾದ ಒಂದು ಸ್ಟೋರಿಯನ್ನ ಹೇಳಿ ನಿಮ್ಮನ್ನ ನಗಿಸುತ್ತಾರೆ. ಹೀಗೆ ಸಾಗೋ ಜರ್ನಿಯಲ್ಲಿ ಮುಂದೆ ಒಂದು ಅದ್ಭುತ ವಿಚಾರ ನಿಮ್ಮನ್ನ ಕಾಡುತ್ತೆ.ಅದೇನು ಅಂತ ನೀವು ಸಿನಿಮಾನಾ ಥೀಯೇಟರ್ ಗೆ ಬಂದು ನೋಡಿ. ಇಲ್ಲಿ ಪುನೀತ್ ಪುನೀತಾಗೇ ಕಾಣಸಿಗುತ್ತಾರೆ.ಬಣ್ಣ ಹಚ್ಚಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯೋ ರೀತಿಯೇ ಒಂದು ರೀತಿ ಅದ್ಬುತವೆನಿಸುತ್ತದೆ. ಹಾವು ಅಂದ್ರೆ ಪುನೀತ್ ಗೆ ತುಂಬಾ ಭಯ. ಹಾವಿನ ಶಬ್ಧಕ್ಕೆ ಅಮೋಘವರ್ಷ ಅವರಿಗೆ ಅಪ್ಪು ಹೇಳೋ ಮಾತು ಏನಂದ್ರೆ 'ಹೆಂಡ್ತಿ ಮಕ್ಕಳನ್ನ ಬಿಟ್ಟು ನಿಮ್ಮನ್ನ ನಂಬಿ ಬಂದಿದ್ದೀನಿ' ಅಂತ.
ಇದನ್ನೂ ಓದಿ: Love Proposal: ಇಂಡೋ-ಡಚ್ಚ್ ಪಂದ್ಯದ ವೇಳೆ ‘ಲವ್ ಪ್ರಪೋಸ್’: ಪ್ರಿಯಕರನ ತಬ್ಬಿಕೊಂಡು ‘ಒಕೆ’ ಅಂದ್ಳು ಚೆಲುವೆ
ಗಾಳಿ,ಮಳೆ ಯಾವುದನ್ನೂ ಲೆಕ್ಕಿಸದೆ ಇಲ್ಲಿ ಓಡಾಡಿದ್ದಾರೆ ಅಪ್ಪು.ಕಾಡಲ್ಲೇ ವಾಕ್,ಟಾಕ್ ಮತ್ತು ಊಟ ಒಂಥರಾ ಮಜಾವಾಗಿದೆ ಅಂತ ಇಲ್ಲಿ ಪುನೀತ್ ಹೇಳೋ ಮಾತು ಕೇಳೋದೇ ಥ್ರಿಲ್ ಬಿಡಿ. ಇನ್ಯಾಕೆ ತಡ ಓಡೋಡಿ ಬನ್ನಿ ಗಂಧದ ಗುಡಿ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ