ಹೈದರಾಬಾದ್: ಬಾಲಿವುಡ್‌ ಸಿನಿ ರಂಗದ ಮಾಸ್‌ ಸ್ಟಾರ್‌ ಬಾಲಯ್ಯ ಅವರು 'ಅಖಂಡ' ಸಿನಿಮಾದಲ್ಲಿ ಮಿಂಚಿದ್ದರು.'ಅಖಂಡ' ಚಿತ್ರದಲ್ಲಿ ಬಾಲಯ್ಯ ನಟನೆಗೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದರು.ಬೋಯಾಪಟಿ ಶ್ರೀನು ಹಾಗೂ ನಂದಮೂರಿ ಬಾಲಕೃಷ್ಣ ಅವರ ಕಾಂಬಿನೇಷನ್‌ನಲ್ಲಿ ಚಿತ್ರ ಭರ್ಜರಿ ಹಿಟ್‌ ಕಂಡಿತ್ತು.ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಬೋಯಾಪಟಿ ಶ್ರೀನು ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.


COMMERCIAL BREAK
SCROLL TO CONTINUE READING

ಅಂದಹಾಗೆ ಇಸ್ಮಾರ್ಟ್ ಶಂಕರ್ ಸಿನಿಮಾ ಖ್ಯಾತಿಯ ಹೀರೋ ರಾಮ್ ಪೋತಿನೇನಿ, ಬೋಯಾಪಾಟಿ ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಈ ತ್ರಿವಳಿಗಳು ಜೊತೆಗೂಡಿ ಪ್ಯಾನ್ ಇಂಡಿಯಾ ಸಿನಿಮಾಗೆ ಇದೀಗ ಮುನ್ನುಡಿ ಬರೆದಿದ್ದಾರೆ. ಇದು ಬೋಯಾಪಟಿ ಶ್ರೀನು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.


ಇದನ್ನೂ ಓದಿ: By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!


ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್..!
ಅಷ್ಟಕ್ಕೂ ನಿರ್ಮಾಪಕ ಶ್ರೀನಿವಾಸ ಚಿತ್ತೂರಿ  ಶ್ರೀನಿವಾಸ ತಮ್ಮದೇ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನ ಅಡಿಯಲ್ಲಿ ಈಗಾಗಲೇ ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದು,  ಸದ್ಯ ರಾಮ್ ಪೋತಿನೇನಿ ಅಭಿನಯದ ಹಾಗೂ ಎನ್.ಲಿಂಗುಸ್ವಾಮಿ ನಿರ್ದೇಶನದ 'ದಿ ವಾರಿಯರ್'  ಚಿತ್ರ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾಗಳ ರಿಲೀಸ್‌ಗೆ ಮುನ್ನ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಡಬಲ್‌ ಧಮಾಖಾ ಎನ್ನಬಹುದು.


ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!


ಟಾಲಿವುಡ್‌ ಅಂದ್ರೆ ಮಾಸ್‌ ಸಿನಿಮಾಗಳಿಗೆ ಹೆಸರುವಾಸಿ. ಅದರಲ್ಲೂ ರಾಮ್ ಪೋತಿನೇನಿ ತೆಲುಗು ಚಿತ್ರರಂಗದ ಕ್ರೇಜಿ ಹೀರೋಗಳಲ್ಲಿ ಒಬ್ಬರು. ಈಗಾಗಲೇ ಹಲವು ಹಿಟ್ ಸಿನಿಮಾ ನೀಡಿರುವ ರಾಮ್ ಈಗ ಬೋಯಾಪಟಿ ಶ್ರೀನು ಜೊತೆ ಕೈಜೋಡಿಸಿದ್ದು, ಮೆಗಾ ಪ್ರಾಜೆಕ್ಟ್ ತಯಾರಾಗಲಿದೆ. ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಿರುವ ಚಿತ್ರತಂಡ, ಸದ್ಯದಲ್ಲಿಯೇ ಸಿನಿಮಾದ ಟೈಟಲ್ ಹಾಗೂ ಪಾತ್ರವರ್ಗದ ಮಾಹಿತಿ ನೀಡಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.