By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!

ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದ್ದ 'ಬೈ ಟು ಲವ್' (By2Love) ಸಿನಿಮಾ ಇವತ್ತು ರಿಲೀಸ್‌ ಆಗಿದೆ. 

Written by - Malathesha M | Edited by - Zee Kannada News Desk | Last Updated : Feb 18, 2022, 05:48 PM IST
  • 'ಬೈ ಟು ಲವ್' ಸಿನಿಮಾ ಇವತ್ತು ರಿಲೀಸ್‌ ಆಗಿದೆ
  • ಮೇಕಿಂಗ್‌ ಹಾಗೂ ಹಾಡುಗಳ ಮೂಲಕವೇ ಎಲ್ಲರ ಗಮನ ಸೆಳೆದಿತ್ತು
  • ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!
By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.! title=
ಬೈ ಟು ಲವ್

ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದ್ದ 'ಬೈ ಟು ಲವ್' (By2Love) ಸಿನಿಮಾ ಇವತ್ತು ರಿಲೀಸ್‌ ಆಗಿದೆ. ತನ್ನ ಮೇಕಿಂಗ್‌ ಹಾಗೂ ಹಾಡುಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದ 'ಬೈ ಟು ಲವ್' ಇವತ್ತು ಗ್ರ್ಯಾಂಡ್‌ ರಿಲೀಸ್‌ ಕಂಡಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಮೊದಲ ಶೋ ಹೌಸ್‌ಫುಲ್‌ ಆಗುವ ಮೂಲಕ 'ಬೈ ಟು ಲವ್' ಭರ್ಜರಿ ಓಪನಿಂಗ್‌ ಪಡೆಯಿತು.

ಇದನ್ನೂ ಓದಿ:  ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!

ಕಳೆದ ಶುಕ್ರವಾರ ಬಹುನಿರೀಕ್ಷಿತ 'ಲವ್‌ ಮಾಕ್ಟೇಲ್-2‌' (Love Mocktail 2) ರಿಲೀಸ್‌ ಆಗಿತ್ತು. ಇದೀಗ 'ಬೈ ಟು ಲವ್'  ಹವಾ ಶುರುವಾಗಿದೆ. ಈ ಮೂಲಕ ಒಂದೇ ವಾರದಲ್ಲಿ ಎರಡೆರಡು ಡಿಫರೆಂಟ್ ಪ್ರೇಮ್‌ ಕಹಾನಿಗಳನ್ನು ಕನ್ನಡ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.

By2Love

ಚಂದನವನದಲ್ಲಿ ಲವ್‌ ಸ್ಟೋರಿಗಳಿಗೆ ಕೊರತೆ ಏನಿಲ್ಲ. ಆದ್ರೆ ಈ ಬಾರಿ ಡಿಫರೆಂಟ್‌ ಲವ್‌ ಸ್ಟೋರಿಯೊಂದನ್ನು ಹೇಳೋದಕ್ಕೆ 'ಬೈ ಟು ಲವ್' ಟೀಂ ತೆರೆಗೆ ಬಂದಿದೆ. 'ಬಜಾರ್' ಹೀರೋ ಧನ್ವೀರ್ (Dhanveer) , 'ಭರಾಟೆ' ಚಿತ್ರದ ಶ್ರೀಲೀಲಾ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರಿಗೆ ಪ್ರೀತಿಯ ಕಥೆ ಹೇಳಿದ್ದು, ಪ್ರೇಕ್ಷಕ ಪ್ರಭುವಿಗೆ ಸಖತ್‌ ಇಷ್ಟವಾಗಿದೆ.

ಇದನ್ನೂ ಓದಿ:  #ArabicKuthuChallenge:ವಿಮಾನ ನಿಲ್ದಾಣದಲ್ಲಿ 'ಹಲಮಿಟಿ ಹಬಿಬೋ' ಹಾಡಿಗೆ ಸಮಂತಾ ಸ್ಟೆಪ್ಸ್.!

ಇನ್ನು ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಚಿತ್ರದ ನಾಯಕ ಧನ್ವೀರ್‌ ಪ್ರೇಕ್ಷಕರ ರಿಯಾಕ್ಷನ್‌ ನೋಡಿ ಫುಲ್‌ ಖುಷ್‌ ಆಗಿದ್ರು. ಹಾಗೇ ಚಿತ್ರದ ನಾಯಕಿ ಶ್ರೀಲೀಲಾ (Shrileela) ಕೂಡ ಹ್ಯಾಪಿಯಾಗಿದ್ರು. ಚಿತ್ರದ ಸಕ್ಸಸ್‌ ಕುರಿತು ಸಂತಸ ಹಂಚಿಕೊಂಡ್ರು. ಒಟ್ನಲ್ಲಿ ಬಹುನಿರೀಕ್ಷಿತ ಮತ್ತೊಂದು ಕನ್ನಡ ಸಿನಿಮಾ ಇಂದು ತೆರೆ ಕಂಡಿದೆ. ಈ ಮೂಲಕ ಬೈ2ಲವ್‌ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಭರವಸೆಯನ್ನೂ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News