ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!

Drushya 2: ಕ್ರೇಜಿಸ್ಟಾರ್ ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ'ನಾಗಿ ಕಮಾಲ್ ಮಾಡಿದ್ದ ದೃಶ್ಯ-2 ಥಿಯೇಟರ್ ‌ನಲ್ಲಿ ಸಖತ್ ಸೌಂಡ್ ಮಾಡಿತ್ತು. 

Written by - Malathesha M | Edited by - Zee Kannada News Desk | Last Updated : Feb 18, 2022, 03:32 PM IST
  • ಕ್ರೇಜಿಸ್ಟಾರ್ ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ'ನಾಗಿ ಕಮಾಲ್ ಮಾಡಿದ್ದ ದೃಶ್ಯ-2
  • ದೃಶ್ಯ-2 ಥಿಯೇಟರ್ ‌ನಲ್ಲಿ ಸಖತ್ ಸೌಂಡ್ ಮಾಡಿತ್ತು
  • ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್
ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್! title=
ದೃಶ್ಯ-2

ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತಿರುವ ಕನ್ನಡದ ಪ್ರತಿಷ್ಠಿತ ಒಟಿಟಿ ಫ್ಲಾರ್ಟ್ ಫಾರಂ ZEE5 ಈಗ ಮತ್ತೊಂದು ಸೂಪರ್ ಹಿಟ್ ಹೊಸ ಸಿನಿಮಾವನ್ನು ಚಿತ್ರರಸಿಕರ ಮಡಿಲಿಗೆ ಹಾಕ್ತಿದೆ. 

ಇದನ್ನೂ ಓದಿ: #ArabicKuthuChallenge:ವಿಮಾನ ನಿಲ್ದಾಣದಲ್ಲಿ 'ಹಲಮಿಟಿ ಹಬಿಬೋ' ಹಾಡಿಗೆ ಸಮಂತಾ ಸ್ಟೆಪ್ಸ್.!

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) 'ರಾಜೇಂದ್ರ ಪೊನ್ನಪ್ಪ'ನಾಗಿ ಕಮಾಲ್ ಮಾಡಿದ್ದ ದೃಶ್ಯ-2 ಥಿಯೇಟರ್ ‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕಳೆದ ವರ್ಷ ಡಿಸೆಂಬರ್ 10ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದ ದೃಶ್ಯ-2 ಸಿನಿಮಾ ಚಿತ್ರರಸಿಕರ ಮನಸು ಗೆದ್ದಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. 

Drushya 2:

ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ದೃಶ್ಯ2 (Drushya 2) ಸಿನಿಮಾದ ಕ್ಲೈಮ್ಯಾಕ್ಸ್​ ಸಖತ್ ಥ್ರಿಲ್​ ನೀಡಿತ್ತು. ಮಲಯಾಳಂ ದೃಶ್ಯಂ ಸಿನಿಮಾವನ್ನು  ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು. ಥಿಯೇಟರ್ ಅಂಗಳದಲ್ಲಿ ಮ್ಯಾಜಿಕ್ ಮಾಡಿದ್ದ ದೃಶ್ಯ ಸಿನಿಮಾ ಈಗ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಫೆಬ್ರವರಿ 25ರಿಂದ ZEE5 ಯಲ್ಲಿ ದೃಶ್ಯ2 ಸಿನಿಮಾದ ಪ್ರಿಮಿಯರ್ ಆರಂಭವಾಗಲಿದೆ.

ಇದನ್ನೂ ಓದಿ: Bachchhan Paandey Trailer: ಖತರ್ನಾಕ್ ಅವತಾರದಲ್ಲಿ ಕಾಣಿಸಿಕೊಂಡ Akshay Kumar

ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ ದೃಶ್ಯ2 ಸಿನಿಮಾಕ್ಕಿದೆ.

ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿರುವ ಸಿನಿಮಾ:

ZEE5 ಒಟಿಟಿಯಲ್ಲೀಗ ಕನ್ನಡಿಗ, ಭಜರಂಗಿ-2 ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಧೂಳೆಬ್ಬಿಸುತ್ತಿವೆ. ಈ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ದೃಶ್ಯ-2 ಸಿನಿಮಾ ಜೀ5 ಅಂಗಳ ಪ್ರವೇಶಿಸ್ತಿದ್ದು, ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡ್ಕೊಂಡವರು ಮನೆಯಲ್ಲಿ ಕುಳಿತು ನೋಡಿ ಎಂಜಾಯ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News