ಬೆಂಗಳೂರು: ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ದಂಪತಿ ಯಶ್-ರಾಧಿಕಾರ ಮುದ್ದಿನ ಮಗಳು 'ಐರಾ ಯಶ್' ಮುದ್ದಿನ ಮಗಳ ಮೊದಲ ವರ್ಷದ ಜನ್ಮದಿನ ಅದ್ಧೂರಿಯಾಗಿ ಆಚರಿಸಲಾಯಿತು. ಮುದ್ದು ಮಗಳ ಚೊಚ್ಚಲ ಹುಟ್ಟುಹಬ್ಬಕ್ಕಾಗಿ ಇಡೀ ಫನ್‌ವಲ್ಡ್ ಅನ್ನು ಒಂದು ದಿನದ ಮಟ್ಟಿಗೆ ಬುಕ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಮಗಳಿಗಾಗಿ ಡಿಸ್ನಿಲ್ಯಾಂಡ್‌ನಂತೆ 'ವಂಡರ್ ಲ್ಯಾಂಡ್' ಕ್ರಿಯೇಟ್ ಮಾಡಿದ್ದರು.


COMMERCIAL BREAK
SCROLL TO CONTINUE READING

'ಐರಾ' ಜನ್ಮದಿನದ ಇನ್ನೊಂದು ವಿಶೇಷ ಎಂದರೆ ಇಡೀ ಸ್ಯಾಂಡಲ್ ವುಡ್ ಈ ಸಂಭ್ರಮದಲ್ಲಿ ಭಾಗಿಯಾಗಿತ್ತು. ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು 'ಐರಾ ಯಶ್' ಹುಟ್ಟುಹಬ್ಬದ ವಿಡಿಯೋ ತುಣುಕನ್ನು ಹಂಚಿಕೊಳ್ಳುವಂತೆ ಅಭಿಮಾನಿಗಳು ಕೋರಿದ್ದರು.


ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕೋರಿಕೆಯನ್ನು ನೆರವೇರಿಸಿದ್ದಾರೆ. ಯಶ್ ತಮ್ಮ ಅಭಿಮಾನಿಗಳಿಗಾಗಿ 3 ನಿಮಿಷ 28 ಸೆಕೆಂಡ್ ಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದು, ನಿಮ್ಮೆಲ್ಲರ ವಿನಂತಿಗೆ ನಾನು ಇಲ್ಲಾ ಎಂದು ಹೇಗೆ ಹೇಳಬಲ್ಲೆ? ನೀವು ಕೇಳಿದ್ದೀರಿ ಮತ್ತು ಅದು ಇಲ್ಲಿದೆ - ನಮ್ಮ ಲಿಲ್ ಪ್ರಿನ್ಸೆಸ್‌ನ ಒನ್‌ಡೆರ್ಲ್ಯಾಂಡ್ ಜನ್ಮದಿನದ ಬ್ಯಾಷ್‌ನ ಒಂದು ನೋಟ!
ಎಂದು ಯಶ್ ಬರೆದಿದ್ದಾರೆ.


ಐರಾ ಯಶ್ ಜನ್ಮದಿನದ ಸಂಭ್ರಮ ಹೇಗಿತ್ತು... ನೀವೂ ನೋಡಿ...