ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್. ನಮ್ಮ ನಾಡಿನ ದೊರೆ.ನಮ್ಮ ಜನ ಆರಾಧಿಸೋ ದೇವ್ರು.ಪ್ರತಿಯೊಬ್ಬ ಕನ್ನಡಿಗನ ಮನ ಮತ್ತು ಮನೆಗಳಲ್ಲಿ ಶಾಶ್ವತವಾಗಿ ನಮ್ಮ ಪ್ರೀತಿಯ ಅಪ್ಪು ಬಾಸ್ ಸದಾ ನೆಲೆಸಿರುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಿಂದೂ ಪದ ಕುರಿತ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಬಹಿರಂಗ ಸವಾಲು!


ಅದು  ಅಕ್ಟೋಬರ್ 29, 2021 ಕ್ಕೆ ನಮ್ಮ ಬೆಟ್ಟದ ಹೂವನ್ನ ದೇವರು ನನಗೆ ಬೇಕು ಅಂತ ನಮ್ಮಿಂದ ಕಿತ್ತುಕೊಂಡು ಬಿಟ್ಟರು.ಭೂಮಿ ಮೇಲೆ ಆ ದೇವರು ಓಡಾಡಿಕೊಂಡು ಇದ್ದ ದಿನಗಳು ಯಾವತ್ತಿಗೂ ಹಸಿರೇ. ಅದೆಷ್ಟೋ ಜೀವಗಳಿಗೆ ಆಸರೆಯಾಗಿ,ಅನ್ನದಾತನಾಗಿ,ದೊರೆಯಾಗಿ,ರಾಜನಾಗಿ,ಕೊಡುಗೈದಾನಿಯಾಗಿ ಇದ್ದವರು. ಈ ಭೂಮಿ,ಆಕಾಶ ಇರೋವರೆಗೂ ಅಪ್ಪು ಹೆಸ್ರು ಮಾತ್ರ ಶಾಶ್ವತವಾಗಿರುತ್ತೆ.ಕ್ಷಣಕ್ಷಣಕ್ಕೂ ಪ್ರತಿಯೊಬ್ಬರ ಎದೆಬಡಿತದಲ್ಲಿ ಅಪ್ಪು ಹೆಸ್ರು ಗುನುಗುತ್ತಲೇ ಇರುತ್ತೆ. ಅಂತಹ ಅಪ್ಪು ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಭಾವನೆ ಎಲ್ಲರಲ್ಲೂ ಇತ್ತು.ಆದ್ರೆ ಅಪ್ಪುವಿನಂತೆ ಎಲ್ಲರನ್ನೂ ನಗಿಸುತ್ತಾ,ಎಲ್ಲರೊಂದಿಗೆ ಸಾಧಾರಣದಲ್ಲಿ ಸಾಧಾರಣ ಎಂಬಂತೆ ಚಂದನವನದಲ್ಲಿ ಒಬ್ಬ ಸ್ಟಾರ್ ನಟರಿದ್ದಾರೆ.ಯಾರಪ್ಪಾ ಅವ್ರು ಅನ್ನೋ ಪ್ರಶ್ನೆಗೆ ಉತ್ತರ ಗೋಲ್ಡನ್ ಸ್ಟಾರ್ ಗಣೇಶ್.


ಇದನ್ನೂ ಓದಿ:"ನಾನು ಪ್ರಾರಂಭಿಸಿದ ಕೆಲಸಗಳು ನನ್ನ ಕಾಲದಲ್ಲೇ ಕಂಪ್ಲೀಟ್ ಆಗಬೇಕು"


 ಗೋಲ್ಡನ್ ಸ್ಟಾರ್ ಗಣೇಶ್ ಅವರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗುಣಗಳಿವೆ ಅಂತ ಈಗಾಗ್ಲೇ ನಟ ರಂಗಾಯಣ ರಘು ಅವರು ಗಣಿಯನ್ನ ಹಾಡಿಹೊಗಳಿದ್ದಾರೆ. ಗಣಿ ದೊಡ್ಡ ನಟನಾದರೂ ಎಲ್ಲರೊಂದಿಗೆ ನಗುನಗುತ್ತಾ ಕಾಲಕಳೆಯುತ್ತಾರೆ.ಕೈಯಲ್ಲಿ ಅದಷ್ಟು ಸಮಾಜಮುಖಿಸೇವೆಗಳನ್ನ ಆಗಾಗ ಮಾಡುತ್ತಿರುತ್ತಾರೆ ಅನ್ನೋದು ಅವರನ್ನ ಹತ್ತಿರದಿಂದ ಬಲ್ಲವರು ಹೇಳುತ್ತಾರೆ.ಜೊತೆಗೆ ಇವರ ಸಮಾಜಮುಖಿ ಕಾರ್ಯಕ್ರಮಕ್ಕೆ ಪತ್ನಿ ಶಿಲ್ಪಾ ಗಣೇಶ್ ಅವರ ಸಾಥ್ ಕೂಡ ಇರುತ್ತೆ ಅನ್ನೋ ವಿಚಾರ ಎಷ್ಟೋ ಮಂದಿಗೆ ಗೊತ್ತಿರಲಿಕ್ಕೆ ಇಲ್ಲ.


ಗೋಲ್ಡನ್ ಸ್ಟಾರ್ ಗಣೇಶ್ ಕೇವಲ ಸಿನಿಮಾದಲ್ಲಿ ಮಾತ್ರ ಸ್ಟಾರ್ ಆಗಿಲ್ಲ ಬದಲಾಗಿ ರಿಯಲ್ ಲೈಫ್ ನಲ್ಲೂ ಹೀರೋನೇ. ಅಪ್ಪು ಸರ್ ಕೂಡ ಹಾಗೇ ಇದ್ದಿದ್ದು.ಸಿನಿಮಾದಲ್ಲಿ ಹೀರೋ ಆಗೋ ಬದಲು ರಿಯಲ್ ಲೈಫ್ ನಲ್ಲಿ ನಿಜವಾದ ದೇವರಾಗಿದ್ದವರು.. ಅಪ್ಪು ಹಾದಿಯಲ್ಲಿ ಇದೀಗ ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ ಇರೋದು ನಮ್ಮ ನಿಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ಕ್ಕೆ ರಿಲೀಸ್ ಆಗುತ್ತಿದೆ.ಎಲ್ಲಾರು ನೋಡಿ ಆಶೀರ್ವಾದ ಮಾಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.