"ನಾನು ಪ್ರಾರಂಭಿಸಿದ ಕೆಲಸಗಳು ನನ್ನ ಕಾಲದಲ್ಲೇ ಕಂಪ್ಲೀಟ್ ಆಗಬೇಕು"

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವೇರಿಪುರ ಕೈಗಾರಿಕಾ ಪ್ರದೇಶದಲ್ಲಿರುವ ಬೆಂಗಳೂರು ಉತ್ತರ ಸಣ್ಣ ಕೈಗಾರಿಕೆಗಳ ಸಂಘ ಬಾನ್ಶಿಯಾ ಸಮುದಾಯ ಭವನದ ಭೂಮಿ ಪೂಜೆಯನ್ನು ಮಾನ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರು ನೆರವೇರಿಸಿದರು.

Written by - Zee Kannada News Desk | Last Updated : Nov 16, 2022, 06:53 PM IST
  • ನನ್ನ ಸ್ವಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕೆಂಬ ಕನಸು ನನಸಾಗಿದೆ.
  • ನನ್ನ ಕ್ಷೇತ್ರಕ್ಕೆ ಸುಮಾರು 20,000 LED ದೀಪಗಳನ್ನು ಅಳವಡಿಸುವ ಕೆಲಸ ಪ್ರಾರಂಭವಾಗಿದೆ.
  • ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜಿಕೆಡಬ್ಲ್ಯೂ ಲೇಔಟ್‌ನಲ್ಲಿ ಆಸ್ಪತ್ರೆಯೊಂದನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಉದ್ಘಾಟನೆ ಮಾಡಿದ್ದರು.
"ನಾನು ಪ್ರಾರಂಭಿಸಿದ ಕೆಲಸಗಳು ನನ್ನ ಕಾಲದಲ್ಲೇ ಕಂಪ್ಲೀಟ್ ಆಗಬೇಕು" title=

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವೇರಿಪುರ ಕೈಗಾರಿಕಾ ಪ್ರದೇಶದಲ್ಲಿರುವ ಬೆಂಗಳೂರು ಉತ್ತರ ಸಣ್ಣ ಕೈಗಾರಿಕೆಗಳ ಸಂಘ ಬಾನ್ಶಿಯಾ ಸಮುದಾಯ ಭವನದ ಭೂಮಿ ಪೂಜೆಯನ್ನು ಮಾನ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರು ನೆರವೇರಿಸಿದರು.

ಇದನ್ನೂ ಓದಿ: ಕಬ್ಬಿಗೆ ಸೂಕ್ತ ಬೆಲೆ ನಿರ್ಣಯ ಸಂಧಾನ ಸಭೆ ವಿಫಲ- ಇಂದು ಮುಧೋಳ ನಗರ ಬಂದ್

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಸಣ್ಣ ಕೈಗಾರಿಕೆಗಳು ಈ ದೇಶದ ಬೆನ್ನೆಲುಬು, ಈ ರಾಷ್ಟ್ರದ ಬೆನ್ನೆಲುಬು, ಸಣ್ಣ ಕೈಗಾರಿಕೆಗಳಿಂದಲೇ ದೊಡ್ಡ ಕೈಗಾರಿಕೆಗಳು ನೆಲೆನಿಂತಿವೆ. ಅಧಿಕಾರಿಗಳ ಒತ್ತಡ, ಮೇಲ್ವಿಚಾರಣೆ, ಗುಣಮಟ್ಟ ಕಾಯ್ದುಕೊಂಡು ಕೆಲಸ ಮಾಡುವುದು ಕಷ್ಟಕರ. ನಿಮ್ಮ ದುಡಿಮೆ ನಿಮ್ಮ ಕುಟುಂಬಕ್ಕೆ ಅಲ್ಲ, ನಿಮ್ಮ ಜೊತೆ ಅವಲಂಬಿತರಾದವರಿಗೆ ದಾರಿತೋರುವ ಕೆಲಸವಾಗಿದೆ. ಸಣ್ಣ ಕೈಗಾರಿಕೆಗಳು ಸಾವಿರಾರು ಜನರಿಗೆ ಜೀವನೋಪಾಯ ನಡೆಸಲು ಅನುವು ಮಾಡಿಕೊಟ್ಟಿವೆ. ಉತ್ತಮ ರೀತಿಯ ಕಟ್ಟಡ ನಿರ್ಮಾಣ ಆಗಬೇಕು. ಅದರಿಂದ ಬಡ ಜನರಿಗೆ ಅನುಕೂಲವಾಗಬೇಕು. ಮುಖ್ಯಮಂತ್ರಿಗಳೇ ಈ ಸಮುದಾಯ ಭವನವನ್ನು ಉದ್ಘಾಟನೆಗೊಳಿಸುವ ಸುಸಂದರ್ಭ ಬರಲಿ, ನಾನು ಪ್ರಾರಂಭಿಸಿದ ಕೆಲಸಗಳು ನನ್ನ ಕಾಲದಲ್ಲೇ ಕಂಪ್ಲೀಟ್ ಮಾಡಬೇಕು ಅನ್ನೋದು ಈ ಸೋಮಣ್ಣನ ಕಾನ್ಸೆಪ್ಟ್, ನಿರಂತರವಾಗಿ ಈ ಬಡಾವಣೆಗೆ, ಕೈಗಾರಿಕೆಗಳಿಗೆ  ಆಗಬೇಕಾದ ಕೆಲಸವನ್ನು ಸರ್ಕಾರದಿಂದ ಮಾಡಿಕೊಡುವ ಕೆಲಸ ನಾನು ಮಾಡುತ್ತೇನೆ, ನಾನು ನಿಮ್ಮ ಜೊತೆಗಿದ್ದೇನೆ ಎಂದು ಭರವಸೆ ನೀಡಿದರು.

ಇದನ್ನು ಓದಿ : ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್

ಬಡವರಿಗೆ ಶಕ್ತಿ ತುಂಬಿದ್ದೇನೆ ಎಂಬ ತೃಪ್ತಭಾವ ನನ್ನಲ್ಲಿದೆ,  ಅಷ್ಟು ಸಾಕು

ನನ್ನ ಸ್ವಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕೆಂಬ ಕನಸು ನನಸಾಗಿದೆ. ನನ್ನ ಕ್ಷೇತ್ರಕ್ಕೆ ಸುಮಾರು 20,000 LED ದೀಪಗಳನ್ನು ಅಳವಡಿಸುವ ಕೆಲಸ ಪ್ರಾರಂಭವಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜಿಕೆಡಬ್ಲ್ಯೂ ಲೇಔಟ್‌ನಲ್ಲಿ ಆಸ್ಪತ್ರೆಯೊಂದನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರು ಉದ್ಘಾಟನೆ ಮಾಡಿದ್ದರು. ಮಾರ್ಚ್ 22 ರಿಂದ ಅಕ್ಟೋಬರ್ 22 ರೊಳಗೆ 10,000ಕ್ಕೂ ಹೆಚ್ಚು ಜನರು ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದಾಗ ಸಾರ್ಥಕತೆ ಎನ್ನಿಸಿತು. ಬಡವರಿಗೆ ಒಂದು ಶಕ್ತಿ ತುಂಬಿದ್ದೇನೆ ಎಂಬ ತೃಪ್ತಭಾವ ನನ್ನಲ್ಲಿ ಮೂಡಿತ್ತು. ಚುನಾವಣೆ ಬರುತ್ತೆ, ಹೋಗುತ್ತೆ, ರಾಜಕಾರಣಿಗಳು ಬರುತ್ತೇವೆ, ಹೋಗುತ್ತೇವೆ. ನನ್ನದೊಂದು ಅಳಿಲು ಸೇವೆ ಅಷ್ಟೇ. ಮಾತೊಂದು, ಕೃತಿಯೊಂದು, ನಡವಳಿಕೆಯೊಂದು ಆಗಬಾರದು, ನಿಮ್ಮ ಒಗ್ಗಟ್ಟು ಪ್ರೀತಿ, ವಿಶ್ವಾಸ, ನಿಮ್ಮ ದೊಡ್ಡತನಕ್ಕೆ ನಾನು ಅಬಾರಿಯಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಾನ್ಶಿಯಾ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಜಯಕುಮಾರ್, ಜಮೀನ್ದಾರರಾದ ಸಂಪತ್ ಕುಮಾರ್, ಕಾಶಿಯಾ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಶಶಿಧರ್, ಹನುಮಂತೇಗೌಡ, ಪೀಣ್ಯ, ರಾಜಾಜಿನಗರ, ಮಾಚೋಹಳ್ಳಿ ಕೈಗಾರಿಕಾ ಪ್ರದೇಶದವರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News