ಇದು 'ಕೊರೊನಾ' ಕಾಲ.. ಎಲ್ಲವೂ ಅಲ್ಲೋಲ ಕಲ್ಲೋಲ.. ಆದರೂ ಧೈರ್ಯ ಮಾಡಿ ಸ್ಯಾಂಡಲ್‌ವುಡ್‌ ಮಂದಿ ಸಿನಿಮಾ ರಿಲೀಸ್‌ ಮಾಡುತ್ತಿದ್ದಾರೆ. ಆದರೆ ದಿಢೀರ್‌ ಅಂತಾ ಈ ಹೊತ್ತಲ್ಲೇ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದು ತೀವ್ರ ಆತಂಕ ತಂದೊಡ್ಡುತ್ತಿದೆ. ಇನ್ನು ಈ ಹೊತ್ತಲ್ಲೇ ನಟ ಗೋಲ್ಡನ್‌ ಸ್ಟಾರ್‌ ಗಣೇಶ್ ತೆಗೆದುಕೊಂಡಿರುವ ಆ ಒಂದು ನಿರ್ಧಾರ ಎಲ್ಲರ ಗಮನ ಸೆಳೆಯುತ್ತಿದೆ.


COMMERCIAL BREAK
SCROLL TO CONTINUE READING

ಮುಂಗಾರು ಮಳೆ ನಂತರ ಗೋಲ್ಡನ್‌ ಸ್ಟಾರ್‌ ಗಣೇಶ್ ಹಿಂದಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಹಿಟ್‌ ಸಿನಿಮಾ ನೀಡುತ್ತಾ ಗಣೇಶ್ ದೊಡ್ಡ ಸ್ಟಾರ್‌ ಆಗಿ ಬೆಳೆದಿದ್ದಾರೆ. ಕರುನಾಡು ಮಾತ್ರವಲ್ಲ ಜಗತ್ತಿನಾದ್ಯಂತ ನಟ ಗಣೇಶ್‌ ಅವರಿಗೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಇನ್ನೇನು‌ ನಟ ಗಣೇಶ್‌ ಅವರ ಹುಟ್ಟುಹಬ್ಬ ಹತ್ತಿರ ಬರುತ್ತಿದ್ದು, ಈ ಹೊತ್ತಲ್ಲೇ ಅಭಿಮಾನಿ ದೇವರಿಗೆ ಅಭಿಮಾನದ ಪತ್ರ ಬರೆದಿದ್ದಾರೆ ಗೋಲ್ಡನ್‌ ಸ್ಟಾರ್‌ ಗಣೇಶ್.


ದಯವಿಟ್ಟು ಬರಬೇಡಿ..!


ಇನ್ನು ನಟ ಗಣೇಶ್‌ ಬರೆದಿರುವ ಪತ್ರದಲ್ಲಿ ಏನಿದೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ, 'ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲಾ ಖುಷಿಪಟ್ಟಿದ್ದೀರಿ. ಪ್ರತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಖುಣಿ' ಎಂದಿದ್ದಾರೆ ಗೋಲ್ಡನ್‌ ಸ್ಟಾರ್‌ ಗಣೇಶ್.


ಟೀಂ ಇಂಡಿಯಾದ ಮತ್ತೊಂದು ವಿದೇಶಿ ಪ್ರವಾಸ ಘೋಷಣೆ: ಇಲ್ಲಿದೆ ಸಂಪೂರ್ಣ ಮಾಹಿತಿ


ಪತ್ರದಲ್ಲಿ ತಮ್ಮ ಮಾತು ಮುಂದುವರಿಸಿ, 'ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಅಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಅನಿವಾರ್ಯ ಕಾರಣ ನಾನು ಹುಟ್ಟುಹಬ್ಬದಂದು, ಅಂದ್ರೆ ಜುಲೈ 2ಕ್ಕೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ' ಎಂದು ‌ನಟ ಗಣೇಶ್ ತಿಳಿಸಿದ್ದಾರೆ.


ಜೊತೆಗೆ 'ನೀವೆಲ್ಲರೂ ಅಭಿಮಾನದಿಂದ ಪ್ರತೀ ಬಾರಿ ನನಗಾಗಿ ತರುವ ಹಾರ, ಕೇಕ್‌ ಇತ್ಯಾದಿ ಬದಲಿಗೆ, ಅಗತ್ಯವಿರುವ ಕಡೆ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ' ಎಂದು ಮನವಿ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಈ ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ನಟ ಗಣೇಶ್.


ಒಟ್ಟಾರೆ ಹೇಳುವುದಾದ್ರೆ ನಟ ಗೋಲ್ಡನ್‌ ಸ್ಟಾರ್‌ ಗಣೇಶ್ ಬರೆದಿರುವ ಪತ್ರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದು, ತಮ್ಮ ನೆಚ್ಚಿನ ನಟನ ಮಾತನ್ನು ಪಾಲಿಸುವುದಕ್ಕಾಗಿ ಸಿದ್ಧರಾಗಿದ್ದಾರೆ. ಇನ್ನೇನು 3 ದಿನದಲ್ಲಿ ಬರ್ತ್‌ ಡೇ ಬಾಯ್‌ ನಟ ಗೋಲ್ಡನ್‌ ಗಣೇಶ್‌ ಅವರ ಹುಟ್ಟುಹಬ್ಬವನ್ನ ವಿಶಿಷ್ಟವಾಗಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದು, ಸಂಭ್ರಮಾಚರಣೆಗೆ ಕೌಂಟ್‌ಡೌನ್‌ ಶುರುವಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.