ಈ ವರ್ಷ ಟೀಮ್ ಇಂಡಿಯಾದ ವೇಳಾಪಟ್ಟಿ ತುಂಬಾ ಆಕ್ಟೀವ್ ಆಗಿದ್ದು, ಸತತವಾಗಿ ಟೂರ್ನಿಗಳಲ್ಲಿ ಭಾಗಿಯಾಗುತ್ತಿದೆ. ಸದ್ಯ ಭಾರತ ತಂಡ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸದಲ್ಲಿದ್ದು, ಈ ನಡುವೆ ಮತ್ತೊಂದು ಬಿಗ್ ಟೂರ್ ಘೋಷಣೆಯಾಗಿದೆ. 2022ರ ಟಿ 20 ವಿಶ್ವಕಪ್ ನಂತರ ಟೀಂ ಇಂಡಿಯಾ ಮತ್ತೊಂದು ವಿದೇಶಿ ಪ್ರವಾಸಕ್ಕೆ ಹೋಗಲಿದ್ದು, ಅಲ್ಲಿ ಒಟ್ಟು 6 ಪಂದ್ಯಗಳ 2 ಸರಣಿಗಳನ್ನು ಆಡಬೇಕಾಗಿದೆ.
ಇದನ್ನೂ ಓದಿ: ಇದೇ ಜಗತ್ತಿನ ಕೊನೆಯ ರಸ್ತೆ: ಈ ಹೆದ್ದಾರಿಯ ವಿಶೇಷತೆ ಕೇಳಿದ್ರೆ ದಂಗಾಗ್ತೀರಾ
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ತಂಡ ಹಲವು ವಿದೇಶಿ ಪ್ರವಾಸಗಳನ್ನು ಕೈಗೊಳ್ಳಬೇಕಿದೆ. ಇನ್ನು ಈ ವಿಶ್ವಕಪ್ ನಂತರ, ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ ಹಾರಲಿದೆ. ಈ ಸಂಬಂಧ ನ್ಯೂಜಿಲೆಂಡ್ ದಿನಾಂಕ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ಪ್ರಕಟಿಸಿದೆ. ಇದು ಭಾರತದ ವಿರುದ್ಧ ಸೀಮಿತ ಓವರ್ ಸರಣಿಯನ್ನು ಸಹ ಒಳಗೊಂಡಿದೆ. ಭಾರತ ತಂಡವು ಕಿವೀಸ್ ತಂಡದ ವಿರುದ್ಧ ಸಮಾನ ಸಂಖ್ಯೆಯ ಪಂದ್ಯಗಳ ಮೂರು ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ.
ಇದನ್ನೂ ಓದಿ: Amazon Fab Phones Fest: 16GB RAM, 6000mAh ಬ್ಯಾಟರಿಯ Samsung Galaxy M33 5G ಮೇಲೆ ಬಂಪರ್ ರಿಯಾಯಿತಿ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿ (ಭಾರತ ಮತ್ತು ನ್ಯೂಜಿಲೆಂಡ್) T20 ವಿಶ್ವಕಪ್ 2022 ಮುಗಿದ ಕೇವಲ 5 ದಿನಗಳಲ್ಲಿ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನವೆಂಬರ್ 18 ರಂದು ನಡೆಯಲಿದ್ದು, ಪ್ರವಾಸವು ನವೆಂಬರ್ 30 ರಂದು ಕೊನೆಗೊಳ್ಳಲಿದೆ. ಟೀಂ ಇಂಡಿಯಾ ಮೊದಲ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ನಂತರ 3 ಏಕದಿನ ಪಂದ್ಯಗಳನ್ನು ಆಡಲಿದೆ.
ಪ್ರವಾಸದ ವೇಳಾಪಟ್ಟಿ ಹೀಗಿದೆ:
- 1ನೇ T20 ಇಂಟರ್‌ನ್ಯಾಷನಲ್= ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ
- 2ನೇ T20 ನವೆಂಬರ್ 20ರಂದು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ
- 3ನೇ ಟಿ20 ನವೆಂಬರ್ 22ರಂದು ನೇಪಿಯರ್ನಲ್ಲಿ ನಡೆಯಲಿದೆ
- 1 ನೇ ODI ನವೆಂಬರ್ 25ರಂದು ಆಕ್ಲೆಂಡ್‌ನಲ್ಲಿ ಆಯೋಜನೆಗೊಂಡಿದೆ
- 2ನೇ ODI ನವೆಂಬರ್ 27ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ
- 3ನೇ ODI ನವೆಂಬರ್ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.