ಬೆಂಗಳೂರು: ಎಸ್.ಎಸ್.ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಇದೇ 20ರಂದು ಜೀ5 ಒಟಿಟಿಗೆ ಲಗ್ಗೆ ಇಡ್ತಿದೆ. ವಿಶ್ವ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದ ತ್ರಿಬಲ್ ಆರ್ ಸಿನಿಮಾದಲ್ಲಿ ರಾಮ್-ಭೀಮ್ ಖದರ್‌ನಲ್ಲಿ ರಾಮ್‌ ಚರಣ್​ ಹಾಗೂ ಜೂ.ಎನ್‌ಟಿಆರ್​ ಜೋಡಿ ಕಮಾಲ್ ಮಾಡಿತ್ತು.ಬರೋಬ್ಬರಿ 1000ಕ್ಕೂ ಹೆಚ್ಚು ಕೋಟಿ ಹಣ ಲೂಟಿ ಮಾಡಿರುವ ರೌದ್ರ, ರಣ, ರುಧೀರ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲಾಗದವರು ಈಗ ಮನೆಯಲ್ಲಿಯೇ ಕುಳಿತು ನೋಡುವ ಅವಕಾಶವನ್ನು ಜೀ5 ಒಟಿಟಿ ಒದಗಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’


ಹೆಚ್ಚುವರಿ ದುಡ್ಡು ಕೊಡಬೇಕಿಲ್ಲ


ಜೀ5 ಅಂಗಳಕ್ಕೆ ಆರ್‌ಆರ್‌ಆರ್ ಸಿನಿಮಾ ಬಿಡುಗಡೆ ಆಗ್ತಿದೆ.ಆದ್ರೆ ಇದಕ್ಕೂ ಮುನ್ನ ಜೀ5 ಒಂದು ಟ್ವಿಸ್ಟ್ ಇಟ್ಟಿತ್ತು.ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾವನ್ನು ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿತ್ತು. ಹೀಗಾಗಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲವನ್ನೂ ಅರಿತ ಜೀ5 ಈ ಅಪ್ಷನ್ ತೆಗೆದು ಹಾಕಿದೆ. ಜೀ5 ಒಟಿಟಿಯಲ್ಲಿ ಚಂದಾದಾರರಾದ ಎಲ್ಲರಿಗೂ ಸಿನಿಮಾ ನೋಡುವ ಅವಕಾಶ ನೀಡಿದೆ.ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?


ಯಂಗ್ ಟೈಗರ್ ಬರ್ತ್ ಡೇ ದಿನ RRR ಅಬ್ಬರ


ಆರ್‌ಆರ್‌ಆರ್ ಸಿನಿಮಾ ರಿಲೀಸ್ ಆಗಿ ಐವತ್ತಕ್ಕೂ ಹೆಚ್ಚು ದಿನ ಕಳೆದಿದ್ದು, ಇದೇ 20ರಂದು ಯಂಗ್ ಟೈಗರ್ ಬರ್ತ್ ಡೇ ದಿನವೇ ಜೀ5 ಒಟಿಟಿಯಲ್ಲಿ ಆರ್‌ಆರ್‌ಆರ್ ಅಬ್ಬರ ಶುರುವಾಗಲಿದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲಿ ರಾಜಮೌಳಿಯ ದೃಶ್ಯ ವೈಭವ ಪ್ರದರ್ಶನವಾಗಲಿದೆ. ಇತ್ತೀಚೆಗೆ ಜೀ5 ರಿಲೀಸ್ ಮಾಡಿದ್ದ ಸ್ಪೆಷಲ್ ಟ್ರೇಲರ್‌ಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಜೀ5 ಒಟಿಟಿ ಇಂಗ್ಲಿಷ್ ಸಬ್ ಟೈಟಲ್ ಬಳಸಿ RRR ಸಿನಿಮಾ ರಿಲೀಸ್ ಮಾಡ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.