ಬೆಂಗಳೂರು: ಸಾಮಾನ್ಯವಾಗಿ ನಟರ ಮಧ್ಯೆ ಬಾಂಧವ್ಯ ಚೆನ್ನಾಗಿದ್ದರೂ ಸಹಿತ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ ವಾರ್ ಗಳನ್ನು ಮಾಡುತ್ತಿರುತ್ತಾರೆ.ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದಲೂ ಕಿಚ್ಚ ಸುದೀಪ್ ಅವರು ಈ ಚಿತ್ರದ ವಿಚಾರವಾಗಿ ಟ್ವೀಟ್ ಮಾಡಿಲ್ಲ ಎಂದು ಅಭಿಮಾನಿಗಳು ದೂರುತ್ತಿದ್ದರು.
ಆದರೆ ವಾಸ್ತವವಾಗಿ ನಮ್ಮ ಕಿಚ್ಚ ಸುದೀಪ್ ಮಾತ್ರ ಕನ್ನಡ ಚಿತ್ರರಂಗ ಅಂತಾ ಬಂದಾಗ ಎಲ್ಲಾ ರೀತಿಯಲ್ಲೂ ಅದು ನಮ್ಮದೇ ಎನ್ನುವಂತಹ ಹೆಮ್ಮೆಯನ್ನು ಯಾವಾಗಲೂ ವ್ಯಕ್ತಪಡಿಸುತ್ತಾ ಬಂದಿದ್ದಾರೆ.ಇತ್ತೀಚಿಗೆ ಅವರು ದಕ್ಷಿಣ ಭಾರತದ ಯಶಸ್ವಿ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಎಂದು ಬಾಲಿವುಡ್ ನ ನಿರ್ಮಾಪಕರು ಕರೆಯುತ್ತಿರುವುದಕ್ಕೆ ತಕರಾರು ವ್ಯಕ್ತಪಡಿಸುತ್ತಾ ನಾವು ಎಲ್ಲೆಗಳನ್ನು ಮೀರಿ ಸಿನಿಮಾಗಳನ್ನು ಮಾಡುತ್ತಿದ್ದೇವೆ ಅದರಲ್ಲಿಯೂ ಯಶಸ್ವಿ ಕೂಡ ಆಗಿದ್ದೇವೆ.ಆದರೆ ಹಿಂದಿ ಸಿನಿಮಾದವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ.ಆದರೆ ಅವರು ಅದರಲ್ಲಿ ಯಶಸ್ವಿಯಾಗುತ್ತಿಲ್ಲ ಒದ್ದಾಡುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’
ಇತ್ತೀಚಿಗೆ ಆರ್ ಜೆ ವಿಕಿ ಎಸ್ ದುಬೈ ಯುಟ್ಯೂಬ್ ಚಾನೆಲ್ ನಲ್ಲಿ ಸುದೀಪ್ ತಮ್ಮ 26 ವರ್ಷಗಳ ಚಲನಚಿತ್ರದ ಪ್ರಯಾಣವನ್ನು ಮೆಲುಕು ಹಾಕಿದರು, ಅಷ್ಟೇ ಅಲ್ಲದೆ ಮುಂಬರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಕುರಿತಾಗಿ ಮಾತನಾಡುತ್ತಾ ಇದೊಂದು ಮಿಸ್ಟರಿ ಥ್ರಿಲರ್ ಸಿನಿಮಾ, ಚಿತ್ರದ ಕಥೆ ತುಂಬಾ ಎಮೋಷನಲ್ ಆಗಿದೆ. ಇದು ಬಹಳ ದಿನಗಳ ಕಾಲ ಈ ಚಿತ್ರದ ಬಗ್ಗೆ ಮಾತನಾಡುವಂತ ಕಥೆಯನ್ನು ಹಾಗೂ ವೈಭವನ್ನು ಈ ಚಿತ್ರ ಒಳಗೊಂಡಿದೆ ಎಂದು ಹೇಳುವ ಮೂಲಕ ಕನ್ನಡದಲ್ಲಿ ಮತ್ತೊಂದು ಸಿನಿಮಾ ಈಗ ವಿಶ್ವದಾದ್ಯಂತ ಸದ್ದು ಮಾಡುವ ಭರವಸೆಯನ್ನು ಅವರು ಸೂಚ್ಯವಾಗಿ ವ್ಯಕ್ತಪಡಿಸಿದರು.
My Conversation with @KicchaSudeep #vikrantrona #KicchaSudeephttps://t.co/cjwUPhmVXW
— Vivek Sanil (@rjvickysdubai) May 18, 2022
ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?
ಇದೇ ಸಂದರ್ಭದಲ್ಲಿ ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಸಂದರ್ಭದಲ್ಲಿ ಆರ್ ಆರ್ ಆರ್ ಮತ್ತು ಕೆಜಿಎಫ್ 2 ನಡುವೆ ನಿಮ್ಮ ಫೇವರಿಟ್ ಸಿನಿಮಾ ಎಂದು ಕೇಳಿದ್ದಕ್ಕೆ ಸುದೀಪ್ ಕೆಜಿಎಫ್ 2 ಎಂದು ಉತ್ತರಿಸಿದರು.ಈ ಹಿಂದೆ ಬಾಲಿವುಡ್ ಹಂಗಾಮಾದಲ್ಲಿನ ಸಂದರ್ಶನವೊಂದರಲ್ಲಿಯೂ ಕೂಡ ಅವರು ನಮ್ಮ ಕನ್ನಡ ಸಿನಿಮಾಗಳ ದಂತಕಥೆಗಳನ್ನು ಅವರು ಆಗಾಗ ಪ್ರಸ್ತಾಪಿಸುವ ಮೂಲಕ ಕನ್ನಡ ಚಿತ್ರರಂಗ ಅಂತಾ ಬಂದಾಗ ಅವರದ್ದು ಏಕತೆಯ ಮಂತ್ರ ಎನ್ನುವುದನ್ನು ನಾವು ತಿಳಿಯಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.