ಬೆಂಗಳೂರು: ಬಿಬಿಎಂಪಿ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡನ್ನ ಸರ್ಕಾರ ತಿರಸ್ಕರಿಸಿದೆ.  ಸುಪ್ರಿಂ ಕೋರ್ಟ್ ಸೂಚನೆ ಮೇರೆಗೆ ಪಟ್ಟಿ ಸಿದ್ದಪಡಿಸಿದ್ದರೂ ಹತ್ತಾರು ತಪ್ಪುಗಳನ್ನ ಅದ್ರಲ್ಲಿ ಸರ್ಕಾರ ಹುಡುಕಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಹೊಸ ಕರಡು ಸಲ್ಲಿಕೆಗೆ ಡೆಡ್ ಲೈನ್ ಕೊಟ್ಟಿದ್ರೂ ಬಿಬಿಎಂಪಿ ಮಾತ್ರ ನಾವು ಕರಡು ಪ್ರತಿಯನ್ನ ಸಲ್ಲಿಕೆನೇ ಮಾಡಿಲ್ಲ ಅಂತ ಅಡ್ಡಗೋಡೆ ಮೇಲೆ ದೀಪ ಇಡೋ ಕೆಲ್ಸ ಮಾಡ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Matador Movie : ಊರು ಸುತ್ತೋದಕ್ಕೆ 'ಮೆಟಡೋರ್' ರೆಡಿ : ಪ್ರಚಾರದ ಮೂಲಕ ಗಮನ ಸೆಳೆದ ಚಿತ್ರತಂಡ!


ಹೌದು, ಬಹು ನಿರೀಕ್ಷಿತ ಬಿಬಿಎಂಪಿ ವಾರ್ಡ್ ಮರುವಿಂಗಡನಾ ಕರಡು ಪ್ರತಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 198 ವಾರ್ಡ್ ನಿಂದ 243ಕ್ಕೆ ಏರಿಕೆ ಮಾಡಿರೋ ಈ ಕರಡನ್ನ ಬಿಬಿಎಂಪಿ ಸಲ್ಲಿಸಿದ ವೇಗದಲ್ಲಿಯೇ ಸರ್ಕಾರ ತಿರಸ್ಕಾರ ಮಾಡಿದೆ. ಸುಪ್ರಿಂ ಆದೇಶವನ್ನ ಧಿಕ್ಕರಿಸಿ ವಾರ್ಡ್ ಸಮಿತಿ ವಾರ್ಡ್ ಗಳನ್ನ ವಿಂಗಡನೆ ಮಾಡಿದೆ ಅಂತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ ಅಂತ ಹೇಳಲಾಗ್ತಿದೆ.


ಮಾಧ್ಯಮಗಳಲ್ಲಿ ಬಿಬಿಎಂಪಿ ಸಲ್ಲಿಕೆಮಾಡಿರೋ ಕರಡು ಪ್ರತಿಗಳು ಹರಿದಾಡ್ತಿದ್ದರೂ ಬಿಬಿಎಂಪಿ ಮಾತ್ರ ನಾವಿನ್ನೂ ಕರಡು ಪ್ರತಿ ಸಲ್ಲಿಕೆ ಮಾಡಿಲ್ಲ, ಇನ್ನೆರಡು ದಿನಗಳಲ್ಲಿ ಸಲ್ಲಿಕೆ ಮಾಡ್ತೀವಿ ಬಿಬಿಎಂಪಿ ತಪ್ಪಿಸಿಕೊಳ್ಳೋ ಯತ್ನ ಮಾಡ್ತಿದೆ.


ಸಲ್ಲಿಕೆಯಾದ ಕರಡಲ್ಲಿನ ಲೋಪಗಳೇನು..?


  • ಒಂದು ವಾರ್ಡ್ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತೆ ವಿಂಗಡಿಸಿಲ್ಲ

  • ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್​ಗಳ ಚಿಕ್ಕದಾಗಿ ಮಾಡಲಾಗಿದೆ

  • ಕಡಿಮೆ ಆದಾಯ ಬರುವ ವಾರ್ಡ್ ಗಳ ಗಾತ್ರವನ್ನ ಹೆಚ್ಚಿಸಲಾಗಿದೆ

  • ಕನ್ನಡ & ಇಂಗ್ಲಿಷ್ ಭಾಷೆಯಲ್ಲಿ ಕರಡು ಪಟ್ಟಿ ಸಲ್ಲಿಸುವಂತೆ ಸೂಚನೆ

  • ಹೊಸ ವಾರ್ಡ್​ಗಳಿಗೆ ಇತಿಹಾಸ ಹೊಂದಿದ ಹಳೆಯ ಹೆಸರು ಇಡದಿರೋದು

  • ಮತ್ತೆ 3 ದಿನಗಳಲ್ಲಿ ಮರು ಕರಡು ಪಟ್ಟಿ ಸಲ್ಲಿಸುವಂತೆ ಆದೇಶ


ಇನ್ನು ಬಿಬಿಎಂಪಿ ವಾರ್ಡ್ ವಿಂಗಡನೆ ವಿಚಾರದಲ್ಲಿ ಬಿಬಿಎಂಪಿ ಪಕ್ಷಾತೀತವಾಗಿ ನಡೆದುಕೊಂಡಿಲ್ಲ ಅನ್ನೋದು ಸರ್ಕಾರದ ವಾದ. ಹೀಗಾಗಿ ಸರ್ಕಾರ ಬಿಬಿಎಂಪಿ ಸಲ್ಲಿಸಿದ ಕರಡು ಪ್ರತಿಯಲ್ಲಿ ಕೆಲ ದೋಷಗಳನ್ನ ಪತ್ತೆ ಹಚ್ಚಿದೆ. 


ಅವುಗಳನ್ನ ನೋಡೋದಾದ್ರೆ, ಒಂದು ವಾರ್ಡ್ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತೆ ವಿಂಡಗನೆ ಮಾಡಿಲ್ಲ ಅನ್ನೋದು ಮೊದಲ ದೋಷ ಆದ್ರ, ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್​ಗಳ ಚಿಕ್ಕದಾಗಿ ಹಾಗೆನೇ ಕಡಿಮೆ ಆದಾಯ ಬರುವ ವಾರ್ಡ್ ಗಳ ಗಾತ್ರವನ್ನ ಹೆಚ್ಚಿಸಲಾಗಿದೆ ಅಂತ ಪತ್ತೆ ಹಚ್ಚಿದೆ. ಜತೆಗೆ ಕನ್ನಡ & ಇಂಗ್ಲಿಷ್ ಭಾಷೆಯಲ್ಲಿ ಕರಡು ಪಟ್ಟಿ ಸಲ್ಲಿಸುವಂತೆ ಸೂಚನೆಯನ್ನ ಸರ್ಕಾರ ಕೊಟ್ಟಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಹೊಸ ವಾರ್ಡ್​ಗಳಿಗೆ ಇತಿಹಾಸ ಹೊಂದಿದ ಹಳೆಯ ಹೆಸರು ಇಟ್ಟಿಲ್ಲವಂತೆ. ಇದನ್ನೆಲ್ಲಾ ಗಮನಿಸಿದ್ರೆ ಕರಡು ವಾಪಾಸ್ ಬರೋದಕ್ಕೆ ಬೆಂಗಳೂರಿನ ಸಚಿವರ ಕೈವಾಡ ಇದೆ ಅನ್ನೋ ಅನುಮಾನವನ್ನ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳು ಮಾಡ್ತಿದ್ದಾರೆ. ಏನೇ ಎಡವಟ್ಟುಗಳನ್ನ ಮಾಡಿದ್ರೂ ಸುಪ್ರೀಂ ಕೋರ್ಟ್ ಕೊಟ್ಟಿರೋ ದಿನಾಂಕದ ಒಳಗೇ ಚುನಾವಣೆ ನಡೆಯುತ್ತೆ ಅಂತ ವಿಶ್ವಾಸವನ್ನೂ ವ್ಯಕ್ತಪಡಿಸ್ತಿದೆ.


ಇದನ್ನೂ ಓದಿ: ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್‌ ಸ್ಟಾರ್‌ ಯಶ್‌! ವೈರಲ್‌ ಆಗ್ತಿರುವ ಪೋಸ್ಟರ್‌ ಅಸಲಿಯತ್ತೇನು?


ಚುನಾವಣೆಗೆ ಆರೇ ವಾರಗಳು ಬಾಕಿ


ಈಗಾಗಲೇ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರಿಂ ಕೊಟ್ಟ ಗಡುವಿನಲ್ಲಿ ಎರಡುವಾರ ಕಳೆದಿದೆ. ಆರು ವಾರಗಳಲ್ಲಿ ಚುನಾವಣಾ ಸಿದ್ಧತೆಗಳು ಪೂರ್ಣಗೊಳ್ಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಯಾವ ರೀತಿಯ ಕ್ರಮಗಳನ್ನ ಕೈಗೊಳ್ಳುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.