ನವದೆಹಲಿ : ಅಲ್ಲು ಅರ್ಜುನ್ (Allu Arjun) ಅವರ ಚಿತ್ರ 'ಪುಷ್ಪ: ದಿ ರೈಸ್' ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದೆ. ಈ ಚಿತ್ರ ಬಿಡುಗಡೆಯಾದ ನಂತರ ಹಲವು ಚಿತ್ರಗಳು ತೆರೆಕಂಡಿದ್ದರೂ, ಅಭಿಮಾನಿಗಳಲ್ಲಿ 'ಪುಷ್ಪ' ಕ್ರೇಜ್ ಕಡಿಮೆಯಾಗುತ್ತಿಲ್ಲ (Pushpa Film). ಅಲ್ಲು ಅರ್ಜುನ್ ಅಭಿಮಾನಿಗಳು ಪುಷ್ಪ ಚಿತ್ರದ ಹಾಡುಗಳನ್ನು ರೀಲ್ ಗಳಲ್ಲಿ ಬಳಸುತ್ತಲೇ ಇದ್ದಾರೆ. ಇದೇ ವೇಳೆ ಔರಂಗಾಬಾದ್‌ನ ವ್ಯಕ್ತಿಯೊಬ್ಬರು ಚಿತ್ರದ ಬಗ್ಗೆ ಚಿತ್ರದ ನಟ ಅಲ್ಲು ಅರ್ಜುನ್ ಬಗ್ಗೆ ವಿಶೇಷ ಅಭಿಮಾನ ತೋರಿದ್ದಾರೆ. 


COMMERCIAL BREAK
SCROLL TO CONTINUE READING

ಅಭಿಮಾನಿ ನಿರ್ಮಿಸಿದ ಪುಷ್ಪ ಪ್ರತಿಮೆ :
ಔರಂಗಾಬಾದ್ ನಿವಾಸಿ ಸೋಹನ್ ಕುಮಾರ್ ಎಂಬ ವ್ಯಕ್ತಿ, ಅಲ್ಲು ಅರ್ಜುನ್ (Allu Arjun) ಅವರ 'ಪುಷ್ಪ ಫೇಮ್' ಮೂರ್ತಿಯನ್ನು ತಯಾರಿಸಿದ್ದಾರೆ. ಪುಷ್ಪ ಸ್ಟೈಲ್ ನಲ್ಲಿ ಅಲ್ಲು ಅರ್ಜುನ್ ಕುಳಿತಿರುವ ಪ್ರತಿಮೆಯನ್ನು ಈ ಅಭಿಮಾನಿ ರಚಿಸಿದ್ದಾರೆ. ಈ ವಿಗ್ರಹದಲ್ಲಿ ಅಲ್ಲು ಅರ್ಜುನ್ ಗನ್ ಹಿಡಿದಿರುವುದನ್ನು ತೋರಿಸಲಾಗಿದೆ. ಸೋಹನ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು  ಅವರಿಗೆ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡುವ ಯೋಚನೆಯಲ್ಲಿದ್ದಾರೆ. 


ಇದನ್ನೂ ಓದಿ : Bachchan Pandey: ಬಚ್ಚನ್ ಪಾಂಡೆ ಹೊಸ ಪೋಸ್ಟರ್ ರಿಲೀಸ್.. ಅಕ್ಷಯ್ ಕುಮಾರ್ ಲುಕ್ ಗೆ ಫ್ಯಾನ್ಸ್ ಫಿದಾ


ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗೆ ಫಹದ್ ಫಾಸಿಲ್ಚಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರದ ಎರಡನೇ ಭಾಗ ಬಿಡುಗಡೆಯಾಗಲಿದೆ. ಕೆಲವು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಕೆಂಪು ಚಂದನದ ಮರವನ್ನು ಕಳ್ಳಸಾಗಣೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು ಎಂಬುದು ಗಮನಾರ್ಹ. ಸುಕುಮಾರ್ ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆ ಮಾಡಲು ಆರು ತಿಂಗಳು ಬೇಕಾಯಿತು ಎಂದು ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಮೊದಲು ಅದರ ಮೇಲೆ ವೆಬ್ ಸರಣಿಯನ್ನು (Web Series) ಮಾಡಲು ಹೊರಟಿದ್ದರು. ಆದರೆ ನಂತರ ಈ ವಿಷಯವನ್ನು ಇಟ್ಟುಕೊಂಡು ಸಿನೆಮಾ ಮಾಡಲು ನಿರ್ಧರಿಸಿದರು.


ಡಿಸೆಂಬರ್ 17 ರಂದು  ಬಿಡುಗಡೆಯಾದ ಪುಷ್ಪಾ : 
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ (Pushpa Film) ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಂದಿನಿಂದ, ಚಿತ್ರ ಧೂಳೆಬ್ಬಿಸುತ್ತಿದೆ. ಈ ಚಿತ್ರ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳ ಸಂಖ್ಯೆಯಲ್ಲಿ ಕೂಡಾ ಭಾರೀ ಹೆಚ್ಚಳವಾಗಿದೆ. ಚಿತ್ರದಲ್ಲಿ ಇವರಿಬ್ಬರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ (Pushpa Box office record) ಗಳಿಕೆಯ ಹಲವು ದಾಖಲೆಗಳನ್ನು ಮುರಿದಿದೆ.


ಇದನ್ನೂ ಓದಿ : ಹೇಗಿತ್ತು ಗೊತ್ತಾ ಕೃಷ್ಣ-ಮಿಲನಾ ಮದುವೆ ವಾರ್ಷಿಕೋತ್ಸವ ಸಂಭ್ರಮ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.