ಮತ್ತೊಬ್ಬ ನಟಿಗೆ ಕ್ಯಾನ್ಸರ್: ಶಾಕಿಂಗ್ ಫೋಟೋ ಶೇರ್ ಮಾಡಿ ನೋವು ವ್ಯಕ್ತಪಡಿಸಿದ ಹಂಸ!
ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಮಿಂಚಿದ್ದ ಹಂಸ ನಂದಿನಿ (Hamsa Nandini) ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆ ಆಗಿದೆ.
ನವದೆಹಲಿ: ಕೆಲವು ಕಾಯಿಲೆಗಳು ಬಗ್ಗೆ ತಿಳಿದರೆ ನಮಗೆ ನಡುಕವುಂಟಾಗುತ್ತದೆ. ಇಂತಹ ಒಂದು ರೋಗವೆಂದರೆ ಕ್ಯಾನ್ಸರ್(Cancer). ಇದರ ಹಿಡಿತಕ್ಕೆ ಸಿಲುಕಿ ಬಾಲಿವುಡ್‌ನ ಅನೇಕ ತಾರೆಯರು ನೋವನ್ನು ಅನುಭವಿಸಿದ್ದಾರೆ. ಈ ರೋಗವನ್ನು ಸೋಲಿಸಿ ಅನೇಕರು ಜೀವನದ ಯುದ್ಧವನ್ನು ಗೆದ್ದಿದ್ದಾರೆ. ಆದರೆ ಈಗ ಈ ಪಟ್ಟಿಯಲ್ಲಿ ಮತ್ತೊಬ್ಬ ನಟಿಯ ಹೆಸರು ಸೇರ್ಪಡೆಯಾಗಿದೆ. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಈ ನಟಿಯ ಹೆಸರು ಹಂಸ ನಂದಿನಿ. ಕೀಮೋಥೆರಪಿ ಸಮಯದಲ್ಲಿ ತನ್ನ ಬೋಳು ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ನಟಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೇಗೆ ಗೆಲ್ಲುವುದು ಎಂಬುದರ ಬಗ್ಗೆ ಅವರು ಸುದೀರ್ಘ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಹಂಸ
ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಮಿಂಚಿದ್ದ ಹಂಸ ನಂದಿನಿ (Hamsa Nandini) ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆ ಆಗಿದೆ. ಅವರಿಗೆ ಕ್ಯಾನ್ಸರ್ ಈಗ 3ನೇ ಹಂತದಲ್ಲಿದೆ. ಇತ್ತೀಚೆಗಷ್ಟೇ ಅವರು ತಾವು ಕ್ಯಾನ್ಸರ್ ನಿಂದ ಬಳಲುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ(Social Media)ದಲ್ಲಿ ಮಾಹಿತಿ ನೀಡಿದ್ದರು. ನಟಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳಿಗೆ ಶಾಕ್ ಆಗಿದೆ. ಏಕೆಂದರೆ ಕೆಲವೇ ಕೆಲವು ದಿನಗಳ ಹಿಂದೆ ನಟಿ ತಮ್ಮ 37ನೇ ಹುಟ್ಟುಹಬ್ಬದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ನಗು ನಗುತ್ತಲೇ ಜನ್ಮದಿನವನ್ನು ಆಚರಿಸಿದ್ದ ನಟಿಯ ಸ್ಥಿತಿ ಕಂಡು ಅಭಿಮಾನಿಗಳು ಮರುಕವ್ಯಕ್ತಪಡಿಸಿದ್ದಾರೆ.
Panama Papers Case: ಇ.ಡಿ ವಿಚಾರಣೆಗೆ ಹಾಜರಾದ ನಟಿ ಐಶ್ವರ್ಯಾ ರೈ ಬಚ್ಚನ್
ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ನಟಿ
ಹಂಸ ನಂದಿನಿ ತಾವು ಸ್ತನ ಕ್ಯಾನ್ಸರ್(Breast Cancer)ನಿಂದ ಬಳಲುತ್ತಿರುವ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘4 ತಿಂಗಳಲ್ಲಿ ಎದೆಯ ಮೇಲೆ ಸ್ವಲ್ಪ ಗಡ್ಡೆ ಕಂಡುಬಂದಿತ್ತು. ಆ ಸಮಯದಲ್ಲಿ ನನಗೆ ತಿಳಿದಿತ್ತು, ನನ್ನ ಜೀವನವು ಮತ್ತೆ ಸರಿಯಾಗುವುದಿಲ್ಲವೆಂದು. 18 ವರ್ಷಗಳ ಹಿಂದೆ ನಾನು ಈ ಸ್ತನ ಕ್ಯಾನ್ಸರ್‌ನಿಂದ ನನ್ನ ತಾಯಿಯನ್ನು ಕಳೆದುಕೊಂಡೆ. ಗಡ್ಡೆಯ ವಿಷಯ ತಿಳಿದ ತಕ್ಷಣ ನಾನು ವೈದ್ಯರನ್ನು ಭೇಟಿಯಾದೆ. ನಂತರ ಬಯಾಪ್ಸಿ ಮಾಡಿಸಿದಾಗ ನನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇಲ್ಲಿಯವರೆಗೆ ನಾನು 9 ಕಿಮೊಥೆರಪಿ ಮಾಡಿಸಿಕೊಂಡಿದ್ದೇನೆ, ಇನ್ನೂ 7 ಮಾಡಬೇಕಾಗಿದೆ. ಈ ಖಾಯಿಲೆ ಎದುರು ನಾನು ಛಲ ಬಿಡುವುದಿಲ್ಲವೆಂಬ ಭರವಸೆ ಹೊಂದಿದ್ದೇನೆ. ಮುಖದಲ್ಲಿ ನಗು, ಗೆಲುವಿನ ವಿಶ್ವಾಸದೊಂದಿಗೆ ಹೋರಾಡುತ್ತೇನೆ’ ಅಂತಾ ನಟಿ ಬರೆದುಕೊಂಡಿದ್ದಾರೆ.
ಆತ್ಮಸ್ಥೈರ್ಯ ತುಂಬಿ ಬದುಕಿನ ಬಗ್ಗೆ ಧೈರ್ಯ ಹೇಳಬೇಕಾಗಿದೆ
ಸ್ತನ ಕ್ಯಾನ್ಸರ್(Breast Cancer Diagnosis)ನಿಂದ ಬಳುತ್ತಿರುವ ನಟಿ ಹಂಸ ನಂದಿನಿ, ‘ಮತ್ತೆ ನಾನು ಆರೋಗ್ಯವಾಗಿ ಬರುತ್ತೇನೆ ಎನ್ನುವ ವಿಶ್ವಾಸವಿದೆ. ನಾನು ನನ್ನ ಕಥೆಯನ್ನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಇದರಿಂದ ನಾನು ಇತರರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ಸಹಾಯವಾಗಬಹುದು. ಮಾರಕ ಕ್ಯಾನ್ಸರ್ ವಿರುದ್ಧ ಹೇಗೆ ಹೋರಾಡುವುದು ಎನ್ನುವುದರ ಬಗ್ಗೆ ನಾನು ಅನೇಕರಿಗೆ ತಿಳಿಸಬೇಕಾಗಿದೆ. ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಬದುಕಿನ ಬಗ್ಗೆ ಧೈರ್ಯವನ್ನು ಹೇಳಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ
ನಟಿಯ ಚೇತರಿಕೆಗಾಗಿ ಅಭಿಮಾನಿಗಳ ಪ್ರಾರ್ಥನೆ
2004ರಲ್ಲಿ ಹಂಸ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 2006ರಲ್ಲಿ ತೆರೆಗೆ ಬಂದ ಕನ್ನಡದ ‘ಮೋಹಿನಿ 9886788888’ ಮೂಲಕ ಕನ್ನಡ ಚಿತ್ರರಂಗ(Sandalwood) ಪ್ರವೇಶಿಸಿದ್ದ ಈ ನಟಿ ಪ್ರಭಾಸ್ ನಟನೆಯ ‘ಮಿರ್ಚಿ’ ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಸ್ತನ ಕ್ಯಾನ್ಸರ್ ನಿಂದ ಬಳುತ್ತಿರುವ ನಟಿ ಆದಷ್ಟು ಶೀಘ್ರವೇ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.