1983ರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡ ಜಯಶಾಲಿಯಾದ ಘಟನೆಯನ್ನು ಆಧರಿಸಿ '83' ಸಿನಿಮಾ ತಯಾರಾಗಿದೆ. ಕನ್ನಡಕ್ಕೂ ಡಬ್ ಆಗಿ ಈ ಚಿತ್ರ ಡಿ.24ರಂದು ಬಿಡುಗಡೆಗೊಳ್ಳಲಿದೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ '83' ಸುದ್ದಿಗೋಷ್ಠಿಯಲ್ಲಿ ರಣವೀರ್ ಸಿಂಗ್ ಮತ್ತು ಕಿಚ್ಚ ಸುದೀಪ್, 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ (Kapil Dev) ಸೇರಿದಂತೆ ತಂಡದಲ್ಲಿದ್ದ ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಕೆ.ಶ್ರೀಕಾಂತ್ ಪಾಲ್ಗೊಂಡಿದ್ದರು.
ಈ ವೇಳೆ ರಣವೀರ್ ಸಿಂಗ್ (Ranveer Singh) ಹಾಗೂ ಕ್ರಿಕೆಟರ್ ಶ್ರೀಕಾಂತ್ (Cricketer Srikanth) ಅವರಿಗೆ ಸುದೀಪ್ ಕೆಲವು ಕನ್ನಡ ಡೈಲಾಗ್ ಹೇಳಿಕೊಟ್ಟರು. ಸುದೀಪ್ ತಾವು ನಟಿಸಿದ ಕೆಂಪೇಗೌಡ ಸಿನಿಮಾದ ಡೈಲಾಗ್ ಹೇಳಿ ಕೊಟ್ಟರು. ಅದನ್ನು ಹೇಳಿದ ಇವರಿಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು.
'83' ಸಿನಿಮಾ ಟ್ರೇಲರ್ನಿಂದಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಇದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ.
Latest Video From #1983WorldCup Movie #1983PressMeet @KicchaSudeep #KicchaBoss #KicchaSudeep #VikrantRonaOnFeb24 #VikrantRonaTeaser #VikrantRona pic.twitter.com/DrS9xjuhqF
— Chandan | ಚಂದನ್ (@chandanravi13) December 18, 2021
ಇದನ್ನೂ ಓದಿ: ಈ ಒಂದು ಫೋಟೋಗಾಗಿ ಅತ್ತಿದ್ದರಂತೆ.. 36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.