ನವದೆಹಲಿ: ಹರ್ನಾಜ್ ಸಂಧು (Harnaaz Sandhu) ಅವರು ಮಿಸ್ ಯೂನಿವರ್ಸ್ 2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಯಾರು ಈ ಹರ್ನಾಜ್ ಸಂಧು?:


ಚಂಡೀಗಢದ 21 ವರ್ಷದ ಯುವತಿ ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ಅವರನ್ನು ಹಿಂದಿಕ್ಕಿದರು. 


ಹರ್ನಾಜ್ ಚಂಡೀಗಢದಲ್ಲಿ ಶಿಕ್ಷಣ ಪಡೆದಿದ್ದಾರೆ.  ಚಂಡೀಗಢದಲ್ಲಿರುವ ಶಿವಾಲಿಕ್ ಪಬ್ಲಿಕ್ ಸ್ಕೂಲ್ ಮತ್ತು ಬಾಲಕಿಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಹರ್ನಾಜ್ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.


ಇದನ್ನೂ ಓದಿ: Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ


ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ 2017 (Times Fresh Face Miss Chandigarh 2017), ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ 2018 (Miss Max Emerging Star India 2018), ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 (Femina Miss India Punjab 2019) ಮತ್ತು LIVA ಮಿಸ್ ದಿವಾ ಯೂನಿವರ್ಸ್ 2021 (LIVA Miss Diva Universe 2021) ಸೇರಿದಂತೆ ಹಲವಾರು ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.


 


 Harnaaz Sandhu Photos:'ಮಿಸ್ ಯೂನಿವರ್ಸ್ 2021' ಹರ್ನಾಜ್ ಸಂಧು ಫಿನಾಲೆ ಫೋಟೋಗಳು


70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತ ಈ ಹಿಂದೆ 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಎರಡು ಬಾರಿ ಭುವನ ಸುಂದರಿ (Miss Universe)ಪ್ರಶಸ್ತಿ ಗೆದ್ದಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.