ಬೆಂಗಳೂರು: ಈ ಮಣ್ಣಿನ ಹೆಮ್ಮೆಯ ಕಲೆಯಾದ ವೀರಗಾಸೆಯ ಕುರಿತಾದ ಜೊತೆಗೆ ತಂದೆ ಮಗನ ನಡುವಿನ ಭಾವನಾತ್ಮಕ ಪಯಣದ ಕುರಿತು ಮೂಡಿಬಂದಿರುವ ಸಂತೋಷ್ ಕೈದಾಳರವರ ನಿರ್ದೇಶನದ "ಪರಂವಃ" ಚಲನಚಿತ್ರದ 'ಕಿರುದೀಪ ನೀ' ಎಂಬ ಮೂರನೇ ಲಿರಿಕಲ್ ಹಾಡು 'Sa re ga ma Kannada' ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಈ ಹಾಡನ್ನು ಗಾಯಕ ಮೆಹಬೂಬ್ ಸಾಬ್ ಹಾಡಿದ್ದು, ನಾಗೇಶ್ ಕುಂದಾಪುರ, ಸಂಕೇತ್ ಅಂಬಲಿ ಹಾಗೂ ಕಿರಣ್ ಎನ್ ಆರ್ ಪುರ ಸೇರಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ನಿರ್ಮಿಸಿರುವ, ಪ್ರೇಮ್ ಸಿಡೇಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪರಂವಃ" ಚಲನಚಿತ್ರ.


ಇದನ್ನೂ ಓದಿ: Saptami Gowda: ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ಸಪ್ತಮಿ ಗೌಡ; ಫೋಟೊಸ್‌ ನೋಡಿ..!


ಮಾನ್ಯ ಮಾಜಿಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಈ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ವೀಕ್ಷಿಸಿದ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರು ಹಾಡನ್ನು ಮೆಚ್ಚಿ,ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ.


ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಜನರಿಂದ ಮನ್ನಣೆಗಳಿಸುತ್ತಿರೊ ಟೀಸರ್ ಹಾಗೂ ಮೊದಲೆರಡು ಲಿರಿಕಲ್ ಹಾಡುಗಳಿಗೆ ಮಾಧ್ಯಮ ಮಿತ್ರರಾದ ನೀವುಗಳು ಪ್ರೀತಿಯಿಂದ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದಂತೆ,ಈ ಹಾಡನ್ನು ಸಹ ಹೆಚ್ಚಿನ ಹೃದಯಗಳಿಗೆ ತಲುಪಿಸಲು ಸಹಕರಿಸಬೇಕೆಂದು ಚಿತ್ರತಂಡ ವಿನಂತಿ ಮಾಡಿದೆ.


ಇದನ್ನೂ ಓದಿ:Rajnikant Jailer: ವೀಕ್ಷಣೆಯಲ್ಲಿ ದಾಖಲೆ ಬರೆದ ರಜನಿಕಾಂತ್ ನಟನೆಯ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್..! https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.