Amala Paul: ನಯನತಾರಾ ಮತ್ತು ಕೀರ್ತಿ ಸುರೇಶ್‌ರಂತೆ, ಮಲಯಾಳಂ ಚಿತ್ರರಂಗದಿಂದ ಕಾಲಿವುಡ್‌ನಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಅಮಲಾ ಪೌಲ್ ಕೂಡ ಒಬ್ಬರು. ಸಿಂಧು ಸಮವೇಲಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೂ ಅವರಿಗೆ ಮನ್ನಣೆ ತಂದುಕೊಟ್ಟ ಚಿತ್ರ ಮೈನಾ. ಈ ಚಿತ್ರವು ಅಮಲಾ ಪೌಲ್ ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ಕೂಡ ಆಗಿತ್ತು.


COMMERCIAL BREAK
SCROLL TO CONTINUE READING

ಮೈನಾ ಚಿತ್ರದ ಯಶಸ್ಸಿನ ನಂತರ ಅಮಲಾ ಪೌಲ್‌ಗೆ ಕಾಲಿವುಡ್‌ನಲ್ಲಿ ಸಿನಿಮಾ ಅವಕಾಶಗಳು ಬರಲಾರಂಭಿಸಿದವು. ಒಂದೆರಡು ಚಿತ್ರಗಳಲ್ಲಿ ನಟಿ ಅಮಲಾ ಎ.ಎಲ್. ವಿಜಯ್ ಅವರೊಂದಿಗೆ ಕೆಲಸ ಮಾಡಿದ್ದರು. ನಂತರ ಅವರ ಸಂಬಂಧ ಪ್ರೀತಿಯಾಗಿ ತಿರುಗಿತ್ತು.. 


ಇದನ್ನೂ ಓದಿ-Parineethi Chopra: ಮದುವೆಯ ಬಳಿಕ ಮೊದಲ ಕರ್ವ ಚೌತ್‌ ಆಚರಿಸಿದ ಬಾಲಿವುಡ್‌ ನಟಿ


ಈ ಪ್ರಣಯ ಜೋಡಿ 2013 ರಲ್ಲಿ ಮನೆಯವರ ಒಪ್ಪಿಗೆಯೊಂದಿಗೆ ವಿವಾಹವಾದರು. ತಮಿಳು ಚಿತ್ರರಂಗದ ಹಲವು ಗಣ್ಯರು ಇವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯ ನಂತರವೂ ಸಿನಿಮಾದಲ್ಲಿ ನಟಿಸುತ್ತಿದ್ದ ಅಮಲಾ ಪೌಲ್ ನಾಲ್ಕು ವರ್ಷಗಳ ನಂತರ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದು ವಿಜಯ್ ರಿಂದ ಬೇರ್ಪಟ್ಟರು.


ಅಮಲಾ ಪೌಲ್‌ನಿಂದ ವಿಚ್ಛೇದನ ಪಡೆದ ಎರಡು ವರ್ಷಗಳಲ್ಲಿ ವಿಜಯ್ ಮತ್ತೆ ಮದುವೆಯಾದರು. ಆದರೆ ಅಮಲಾ ಪೌಲ್ ಎರಡನೇ ಮದುವೆಯಾಗದೇ ಸಿನಿಮಾದತ್ತ ಗಮನ ಹರಿಸತೊಡಗಿದರು. ವಿಚ್ಛೇದನದ ನಂತರ ರತ್ನಕುಮಾರ್ ನಿರ್ದೇಶನದ ಆಕಾಶೈ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿ ಶಾಕ್ ಕೊಟ್ಟಿದ್ದಾರೆ.


ಇದಾದ ನಂತರ ಅಮಲಾ ಪೌಲ್ ಬಾಲಿವುಡ್ ಗೆ ಹೋಗಿ ಅಜಯ್ ದೇವಗನ್ ನಿರ್ದೇಶನದ ಬೋಲಾ ಚಿತ್ರದಲ್ಲಿ ನಟಿಸಿದ್ದರು. ಇದು ಲೋಕೇಶ್ ಕನಕರಾಜ್ ನಿರ್ದೇಶನದ ಬ್ಲಾಕ್ಬಸ್ಟರ್ ಹಿಟ್ ಚಿತ್ರದ ರಿಮೇಕ್‌ ಆಗಿದೆ.. ಇದಲ್ಲದೇ ತೆಲುಗಿನಲ್ಲೂ ನಟಿಸುತ್ತಾ ಪ್ಯಾನ್ ಇಂಡಿಯಾ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.


ಹೀಗಿರುವಾಗ ಕಳೆದ ತಿಂಗಳು ಅಕ್ಟೋಬರ್ 26ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಮಲಾ ಪೌಲ್ ಗೆ ಅಂದು ಗೆಳೆಯ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದ. ಅಮಲಾ ಪಾಲ್ ಸಿನಿಮೀಯ ಶೈಲಿಯಲ್ಲಿ ಅವರ ಪ್ರಸ್ತಾಪವನ್ನು ಲಿಪ್ಲಾಕ್ ಕಿಸ್ ನೀಡುವ ಮೂಲಕ ಗ್ರೀನ್‌ ಸಿಗ್ನಲ್‌ ನೀಡಿದ್ದರು.


ಇದನ್ನೂ ಓದಿ-LEO OTT: ಬಿಡುಗಡೆಯಾದ ಒಂದು ತಿಂಗಳೊಳಗೆ ಡಿಜಿಟಲ್‌ ವೇದಿಕೆ ಪ್ರವೇಶಿಸಿದ ವಿಜಯ್‌ ಸಿನಿಮಾ!  


ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇಂದು ಅಮಲಾ ಪೌಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಮದುವೆಯಾಗಿದ್ದಾರೆ ಎನ್ನುವುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. 


ನಟಿ ಅಮಲಾ ಪೌಲ್ ಪ್ರಪೋಸಲ್ ಮಾಡಿದ ಒಂದೇ ವಾರದಲ್ಲಿ ಗೆಳೆಯನ ಕೈ ಹಿಡಿದಿರುವುದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೊಚ್ಚಿಯ ಸ್ಟಾರ್ ಹೋಟೆಲ್‌ನಲ್ಲಿ ಇವರ ಮದುವೆ ನಡೆದಿದ್ದು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ