ಬೆಂಗಳೂರು: ಅದೆಷ್ಟೋ ಸಿನಿಮಾಗಳಲ್ಲಿ ವಿಲನ್‌ ಪಾತ್ರಧಾರಿಗಳು ಖಳ ನಟನಾಗಿ ಅಭಿನಯಿಸಿದ್ದರೂ ತಮ್ಮ ನಿಜ ಜೀವನದಲ್ಲಿ ವಿಭಿನ್ನನಿಲುವು  ಮೂಲಕ ಎಲ್ಲರಿಗೂ ಮಾದರಿಯಾಗಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸ್ಯಾಂಡಲ್ವುಡ್‌ ನಲ್ಲಿ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ವಿಲನ್‌ ಆಗಿ ಗುರುತಿಸಿಕೊಂಡ ರವಿ ಕಿಶನ್ ಉದಾಹರಣೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಅನೇಕ ಸಿನಿಮಾ ನಟರು, ರಾಜಕಾರಣಿ ಮಕ್ಕಳು ತಮ್ಮ ತಂದೆ ತಾಯಿಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಆದರೆ ನಟ ರವಿ ಕಿಶನ್ ಮಗಳ ಉತ್ತಮ ನಿರ್ಧಾರದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ.


ಇದನ್ನೂ ಓದಿ: Aishwarya Arjun: Aishwarya Arjun: ಅರ್ಜುನ್ ಸರ್ಜಾ ಪುತ್ರಿ ಮದುವೆ ಡೇಟ್‌ ಫಿಕ್ಸ್; ಹಾಸ್ಯ ನಟನ ಪುತ್ರನ ಜತೆ ಐಶ್ವರ್ಯಾ ಕಲ್ಯಾಣ!


ಹೌದು,


ನಟ, ಸಂಸದ ರವಿ ಕಿಶನ್ ಮಗಳು, ಸೇನೆ ಸೇರಿ ದೇಶ ಸೇವೆ ಮಾಡಲು ಮುಂದಾಗಿದ್ದಾರೆ. ಇತ್ತೀಚೇಗೆ ಅಷ್ಟೆ ಕೇಂದ್ರ ಸರ್ಕಾರದಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ನಟನ ಮಗಳು ಇಶಿತಾ  ಭಾರತೀಯ ಸೇನೆ ಸೇರಿದ್ದಾರೆ. ಸದ್ಯ 21 ವರ್ಷದ ಯುವತಿಯ ನಡೆಯನ್ನು ಆಕೆಯ ಪೋಷಕರ ಜೊತೆಗೆ ಅನೇಕರು ಮೆಚ್ಚಿದ್ದಾರೆ.


ಇದನ್ನೂ ಓದಿ: Tamannaah Bhatia : ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ..!


ಇನ್ನು ನಟ ರವಿ ಕಿಶನ್ 2017ರಲ್ಲಿ ತೆರೆ ಕಂಡ  ‘ಹೆಬ್ಬುಲಿ’ ,ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ‘ರೇಸ್ ಗುರ್ರಂ’ ಸೇರಿದಂತೆ ಅನೇಕ  ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಲನ್‌ ಪಾತ್ರಧಾರಿಯ ಹೀರೋ ಗುಣಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.  ರವಿ ಕಿಶನ್ ನಟ ಮಾತ್ರವಲ್ಲದೇ  ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಕೂಡ ಆಗಿದ್ದಾರೆ.  https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.