ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ, ತಮಿಳು ಚಿತ್ರರಂಗದ ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿಯವರ ಜೊತೆ ವಿವಾಹ ಆಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಪ್ರೇಮ ಬರಹ ಸಿನಿಮಾ ಬಳಿಕ ಖ್ಯಾತಿ ಪಡೆದ ನಟಿ ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ಮದುವೆ ಬಗ್ಗೆ ಮಾತುಕತೆ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ 2013 ರಲ್ಲಿ ವಿಶಾಲ್ ನಟನೆಯ ಪತ್ತು ಯಾನೈ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಇವರು, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಇವರ ವಿವಾಹ ವಿಷಯವಾಗಿ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ:Tamannaah Bhatia : ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ..!
ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಮೊದಲಿನಿಂದಲೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ಇವರ ಪ್ರೀತಿಗೆ ಇಬ್ಬರು ಕುಟುಂಬದ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದೆ. ಸದ್ಯ ಇವರ ವಿವಾಹ ಸಂಬಂಧಿಸಿದಂತೆ 2024ರಲ್ಲಿ ಅರ್ಜುನ ಸರ್ಜಾ ಮಗಳ ಮದುವೆ ತಮಿಳು ಯುವ ನಟ ಉಮಾಪತಿ ರಾಮಯ್ಯ ಜೊತೆ ನಡೆಯಲಿ ಎನ್ನಲಾಗ್ತಿದೆ.
ಇದನ್ನೂ ಓದಿ:Anupama Gowda: ನಿರೂಪಕಿ ಅನುಪಮ ಗೌಡ ಟ್ರೆಡಿಷನ್ ಲುಕ್ಗೆ ಫ್ಯಾನ್ಸ್ ಫಿದಾ; ಇಲ್ಲಿವೆ ನೋಡಿ ಫೋಟೊಸ್..!
2024ರಲ್ಲಿ ಫೆಬ್ರವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಮದುವೆ ಬಗ್ಗೆ ಸರ್ಜಾ ಕುಟುಂಬವಾಗಲಿ ರಾಮಯ್ಯ ಕುಟುಂಬವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ ನವೆಂಬರ್ನಲ್ಲಿ ಮದುವೆಯ ಡೇಟ್ ಅನೌನ್ಸ್ ಮಾಡಲಿದ್ದಾರೆ ಎಂದು ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.