ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಗುಣಗಾನ ಮಾಡುವ ಪಾತ್ರದಲ್ಲಿ ಮಿಂಚಿದ್ದ ಹೆಸರಾಂತ ಹಾಸ್ಯ ಕಲಾವಿದ ಮೋಹನ್‌ ಜುನೇಜಾ ಇಂದು ಕೊನೆಯುಸಿರೆಳೆದಿದ್ದಾರೆ. ಕೆಜಿಎಫ್ ಮೊದಲ ಭಾಗದಲ್ಲಿ ಅವರ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇವರು ತಮ್ಮ ವಿಭಿನ್ನ ಬಾಡಿ ಲಾಂಗ್ವೇಜ್‌ ಮತ್ತು ಅದ್ಭುತ ನಟನೆಯಿಂದ ಜನಮನಸೂರೆಗೊಂಡಿದ್ದರು. 


COMMERCIAL BREAK
SCROLL TO CONTINUE READING

ಇದನ್ನು ಓದಿ: 'ಕೆಜಿಎಫ್' ಮುಟ್ಟಿದ್ದೆಲ್ಲಾ ಚಿನ್ನ: ಭಾರತದ ನಂ.1 ಚಿತ್ರವಾಗಲು ಒಂದೇ ಹೆಜ್ಜೆ ಬಾಕಿ..!


ಮೋಹನ್‌ ಜುನೇಜ ಸಿನಿಮಾದಲ್ಲಿದ್ದಾರೆ ಅಂದ್ರೆ ಸಿನಿಮಾ ಮುಗಿಯುವವರೆಗೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಬಹುದು. ಆದ್ರೆ ಇದೀಗ ವಿಧಿಯಾಟವೇ ಬೇರೆಯಾಗಿತ್ತು. ಇನ್ನೂ ಮೋಹನ್‌ ಜುನೇಜ ಕೇವಲ ನೆನಪು ಮಾತ್ರ. ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್ ಜುನೇಜ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. 


ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಆದ ಹಿನ್ನೆಲೆಯಲ್ಲಿ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಶುಕ್ರವಾರ ಮೇ 6ರ  ರಾತ್ರಿ ಮೋಹನ್ ಜುನೇಜ ವಿಧಿವಶರಾದರು. 


ಇವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲೂ ಕೂಡ ಬಣ್ಣ ಹಚ್ಚಿದ್ದರು. ಸಿನಿಮಾ ಮಾತ್ರವಲ್ಲದೆ ಅನೇಕ ಧಾರಾವಾಹಿಗಳಲ್ಲೂ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಹೆಣ್ಣು ಮಕ್ಕಳಿಗೆ ತಾಳಿ ಮಹತ್ವ ಸಾರಿದ್ದರು. 


ಮೋಹನ್  ಅವರ ಆರ್ಥಿಕ ಜೀವನ ತುಂಬಾ ಕಷ್ಟದಲ್ಲಿತ್ತು. ಲಾಕ್‌ಡೌನ್ ಸಮಯದಲ್ಲಿ ಅವರು ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆ ಸಮಯದಲ್ಲಿ ಅವರಿಗೆ ನಟ ಉಪೇಂದ್ರ ಸಹಾಯ ಮಾಡಿದ್ದರು. ರಿಯಲ್ ಸ್ಟಾರ್ ಮಾಡಿದ ಸಹಾಯವನ್ನು ಮೋಹನ್ ವಿಡಿಯೋ ಮೂಲಕ ಬಹಿರಂಗಪಡಿಸಿ ಉಪೇಂದ್ರ ಅವರಿಗೆ ಧನ್ಯವಾದ ತಿಳಿಸಿದ್ದರು. ಅನೇಕ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ತೆರೆಮೇಲೆ ಮಿಂಚಿದ್ದ ಮೋಹನ್ ಇನ್ನು ನೆನಪು ಮಾತ್ರ.


ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಗುಣಗಾನ ಮಾಡುವ ಪಾತ್ರದಲ್ಲಿ ಮಿಂಚಿದ್ದರು. ಕೆಜಿಎಫ್ ಮೊದಲ ಭಾಗದಲ್ಲಿ ಅವರ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಸಿನಿಮಾದಲ್ಲಿ ರಾಕಿ ಭಾಯ್ ಬಗ್ಗೆ ಮಾಹಿತಿ ನೀಡುವ ಪಾತ್ರ ಮಾಡಿದ್ದರು. ಪತ್ರಕರ್ತ ಆನಂದ್ ಇಂಗಳಿಗಿಗೆ ರಾಕಿ ಭಾಯ್‌ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯಾಗಿ ಮಿಂಚಿದ್ದರು. ರಾಕಿ ಭಾಯ್ ಬಗ್ಗೆ ವಿವರಣೆ ನೀಡುತ್ತಾ "ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್‌ಸ್ಟರ್. ಅವನು ಒಬ್ಬನೇ ಬರೋನು ಮಾನ್‌ಸ್ಟರ್" ಎಂದು ಡೈಲಾಗ್ ಹೇಳಿ ಖ್ಯಾತಿಗಳಿಸಿದ್ದರು. ಕೆಜಿಎಫ್-2ನಲ್ಲೂ ಕಾಣಿಸಿಕೊಂಡಿದ್ದರು. 


ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲ್ಲಾಟ ಸಿನಿಮಾ ಪಾತ್ರ ಕೂಡ ಫೇಮಸ್ ಆಗಿತ್ತು. ಮದುಮಗ ಎನ್ನುವ ಪಾತ್ರದಲ್ಲಿ ಮೋಹನ್ ಕಾಣಿಸಿಕೊಂಡಿದ್ದರು. ಇನ್ನು ಜೋಗಿ ಸಿನಿಮಾದಲ್ಲೂ ಮಿಂಚಿದ್ದರು. ಹೀಗೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೋಹನ್ ನಟಿಸಿದ್ದಾರೆ. ಮೋಹನ್ ಅವರ ಮೊದಲ ಸಿನಿಮಾ 'ವಾಲ್ ಪೋಸ್ಟರ್' ಮತ್ತು ಅವರ ಮೊದಲ ಧಾರಾವಾಹಿ 'ವಠಾರ'. ಅವರ ಮೊದಲ ಸಿನಿಮಾ ಮೂರ್ನಾಲ್ಕು ಪ್ರಶಸ್ತಿ ಪಡೆದುಕೊಂಡಿತ್ತು.


ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಇದಾದ ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ ಹಾಸ್ಯ ನಟನಾಗಿ ಮಿಂಚಿದ್ದರು. 


ಇದನ್ನು ಓದಿ: KGF Chapter 2 OTT Rights Deal: KGF 2 ಓಟಿಟಿ ರೈಟ್ಸ್ ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತಾ ? 


ಮೋಹನ್‌ ಜುನೇಜ ಸರ್‌ ವಿ ಮಿಸ್‌ ಯೂ...‌ ನಿಮ್ಮಂತ ಅದ್ಭುತ ಕಲಾವಿದನನ್ನ ಕಳೆದುಕೊಂಡ ಕರುನಾಡು ಮತ್ತು ಚಿತ್ರರಂಗ ಬಡವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.