Motherʼs Day 2022: ʼಮಮತಾಮಯಿʼ ದಿನಾಚರಣೆಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕಾದಲ್ಲಿ 1908ರಲ್ಲಿ ಪ್ರಾರಂಭವಾದ ಈ ವಿಶೇಷ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ. ಈ ದಿನದ ಪ್ರಮುಖ ಉದ್ದೇಶವೆಂದರೆ ತಾಯಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡುವುದು. 

Written by - Bhavishya Shetty | Last Updated : May 7, 2022, 11:30 AM IST
  • ವಿಶ್ವ ತಾಯಂದಿರ ದಿನದ ಮಹತ್ವ ಇಲ್ಲಿದೆ
  • ತಾಯಂದಿರ ದಿನ ಆಚರಿಸಲು ಕಾರಣ ಏನು ಗೊತ್ತಾ?
  • ಮದರ್ಸ್‌ ಡೇ ಪ್ರಾರಂಭಿಸಿದ ಕುರಿತು ಇಲ್ಲಿದೆ ಮಾಹಿತಿ
Motherʼs Day 2022: ʼಮಮತಾಮಯಿʼ ದಿನಾಚರಣೆಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ  title=
Motherʼs Day 2022

ತಾಯಿ ಎಂದಾಗ ಮೊದಲು ನೆನಪಾಗೋದು ಮಮತೆ, ಪ್ರೀತಿ, ವಾತ್ಸಲ್ಯ. ಆಕೆಯ ಪ್ರೀತಿಗೆ ಸರಿಸಾಟಿಯಾದ ವಿಚಾರ ಈ ಪ್ರಪಂಚದಲ್ಲಿಯೇ ಇರಲು ಸಾಧ್ಯವಿಲ್ಲ. ಆಕೆಯ ವಾತ್ಸಲ್ಯಕ್ಕೆ ಹೊಂದಾಣಿಕೆಯಾಗುವ ಪ್ರೇಮ ಮತ್ತೊಂದಿಲ್ಲ. ಈ ಮಮತಾಮಯಿಯ ಪ್ರೀತಿಗೆ ದಿನಾಚರಣೆಗಳು ಸರಿಹೊಂದದಿದ್ದರೂ ಸಹ, ಆಕೆಯ ಮೌಲ್ಯ, ಮಹತ್ವವನ್ನು ನೆನೆಯಲು ವಿಶೇಷ ದಿನ ಮೀಸಲಿರಿಸುವುದು ಅಗತ್ಯ ಹಾಗೂ ಕರ್ತವ್ಯ ಎನ್ನಬಹುದು. 

ಇದನ್ನು ಓದಿ: Mango Eating Tips: ಮಾವು ತಿನ್ನುವ ಮುನ್ನ ಈ ಕೆಲಸ ಮಾಡಿ, ಇಲ್ಲವೇ ಲಾಭದ ಬದಲು ನಷ್ಟವಾದೀತು

ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕಾದಲ್ಲಿ 1908ರಲ್ಲಿ ಪ್ರಾರಂಭವಾದ ಈ ವಿಶೇಷ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ. ಈ ದಿನದ ಪ್ರಮುಖ ಉದ್ದೇಶವೆಂದರೆ ತಾಯಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡುವುದು. 

ಪ್ರಪಂಚದಾದ್ಯಂತ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇನ್ನು ಭಾರತದಲ್ಲಿ ತಾಯಿ-ಮಕ್ಕಳ ಬಾಂಧವ್ಯ ವಿಶೇಷವಾಗಿದ್ದು, ಈ ಹಿನ್ನೆಲೆಯಲ್ಲಿ ತಾಯಂದಿರ ದಿನಾಚರಣೆಗೆ ವಿಭಿನ್ನ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗವನ್ನು ಎಲ್ಲರೂ ಗೌರವಿಸಲೇಬೇಕು. ತನ್ನ ಕಂದಮ್ಮನ ಪ್ರತೀ ಬೆಳವಣಿಗೆಯಲ್ಲಿ ಮೊದಲ ಗುರುವಾಗಿ ಆಕೆ ನೀಡುವ ಶಿಕ್ಷಣ ಜೀವನದುದ್ದಕ್ಕೂ ಸಹಕಾರಿಯಾಗಿರುತ್ತದೆ. 

ಇದನ್ನು ಓದಿ: ಕತಾರ್‌ನಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವ-ಒಡಿಶಾ ಸಂಸ್ಥಾಪನಾ ದಿನ ಆಚರಣೆ

1914ರ ಮೇ 9ರಂದು ಅಮೆರಿಕಾದ ರಾಷ್ಟ್ರಪತಿಯಾಗಿದ್ದ ವುಡ್ರೋ ವಿಲ್ಸನ್‌ ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುವುದು ಎಂದು ನೂತನ ಕಾನೂನನ್ನು ಜಾರಿಗೊಳಿಸಿದರು. ಆ ಬಳಿಕ ಅಮೆರಿಕಾ, ಭಾರತ ಸೇರಿ ಇದೇ ಕಾನೂನನ್ನು ಅನುಸರಿಸುತ್ತಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News