ಇಷ್ಟೆಲ್ಲ ಅವಮಾನ ಸಹಿಸದೇ ಬಿಗ್ ಬಾಸ್ ತೊರೆದರೆ ನಟ ಸುದೀಪ್? ಇಲ್ಲಿದೆ ರಿಯಾಲಿಟಿ ಶೋನ ʻರಿಯಲ್ʼ ಮ್ಯಾಟರ್ !
Baadshah Kichcha Sudeep: ಕನ್ನಡ ಶೋನಲ್ಲಿ ಪರಭಾಷಿಗರ ದರ್ಬಾರ್ ಸಹಿಸದೇ ಬಿಗ್ ಬಾಸ್ ನಿಂದ ಹೊರಬರಲು ಸುದೀಪ್ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Baadshah Kichcha Sudeep: ಕಿಚ್ಚ ಸುದೀಪ್ ಬಿಗ್ ಬಾಸ್ 11ನೇ ಸೀಸನ್ ಬಳಿಕ ಶೋನಿಂದ ಹರಬರುವ ನಿರ್ಧಾರ ಘೋಷಿಸಿದ್ದಾರೆ. ಬಿಗ್ ಬಾಸ್ ತೊರೆಯುವ ಈ ಬಹುದೊಡ್ಡ ನಿರ್ಧಾರದ ಹಿಂದೆ ಒಂದಷ್ಟು ಕಾರಣಗಳಿವೆ ಎನ್ನಲಾಗಿದೆ.
ಆಪ್ತ ಮೂಲಗಳ ಪ್ರಕಾರ, ಬಿಗ್ ಬಾಸ್ ಶೋನಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಸುದೀಪ್ ಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ನಟ ಸುದೀಪ್ ಬಿಗ್‌ಬಾಸ್ ತೊರೆದರು ಎಂಬ ಸಂಗತಿ ರಿವೀಲ್ ಆಗಿದೆ.
ಸುದೀಪ್ ಹೇಳುವ ಸಣ್ಣ ಪುಟ್ಟ ಚೇಂಜಸ್ ಗೆ ಶೋ ಆಯೋಜಕರು ಸಹಕರಿಸುತ್ತಿರಲಿಲ್ಲ ಎನ್ನಲಾಗುತ್ತಿದೆ. ಇದು ಹೆಸರಿಗಷ್ಟೇ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಆಗಿದ್ದು, ತಮಿಳು ಹಾಗೂ ಮರಾಠಿಗರ ಕಪಿಮುಷ್ಠಿಯಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಶೋ ಡೈರೆಕ್ಟರ್ ಪ್ರಕಾಶ್ ತಮಿಳಿಗರು. ಶೋ ಆಯೋಜಕರಾದ ಸುಶ್ಮಾ ಮರಾಠಿಗರು. ಈ ಬಾರಿಯ ಶೋನಲ್ಲಿ ಕನ್ನಡ ತನಕ್ಕೆ ಧಕ್ಕೆ ಉಂಟಾಗಿರುವ ಆರೋಪವಿದೆ. ಕಂಟೆಸ್ಟೆಂಟ್ ಗಳಿಗೆ ಕನ್ನಡ ಬಳಕೆಗೆ ಸುದೀಪ್ ಮನವಿ ಮಾಡಿದ್ದರಂತೆ. ಆದರೂ ಸಹ ಕಂಟೆಸ್ಟೆಂಟ್ಸ್ ಇಂಗ್ಲಿಷ್ ಭಾಷೆಯನ್ನ ಹೆಚ್ಚಾಗಿ ಬಳಸುತ್ತಿದ್ದಾರೆ.
ನರಕ ಕಾನ್ಸೆಪ್ಟ್ ಅಂದಾಗ ಅಲ್ಲಿ ಮಹಿಳೆಯರಿಗೆ ಟಾಯ್ಲೆಟ್ ವ್ಯವಸ್ಥೆ ಮಾಡಲು ಕಿಚ್ಚ ಸುದೀಪ್ ಹೇಳಿದ್ದರಂತೆ. ಕಿಚ್ಚನ ಮಾತಿಗೆ ಕ್ಯಾರೆ ಅನ್ನದ ಬಿಗ್ ಬಾಸ್ ಆಯೋಜಕರು ಅದಕ್ಕೆ ವ್ಯವಸ್ಥೆ ಕಲ್ಪಿಸಲಿಲ್ಲವಂತೆ.
ನರಕದಲ್ಲಿನ ಸ್ಪರ್ಧಿಗಳನ್ನು ವೀಕೆಂಡ್ ಎಪಿಸೋಡ್ ವೇಳೆ ಕೂರಿಸಿ ಮಾತನಾಡಿಸಲು ಸುದೀಪ್ ತಿಳಿಸಿದ್ದರಂತೆ. ಇದೂ ಕೂಡ ಕಿಚ್ಚನ ಮಾತಿಗೆ ವಿರುದ್ಧವಾಗಿಯೇ ನಡೆಯಿತು.
ಇದನ್ನೂ ಓದಿ: Kichcha Sudeep : ಬಿಗ್ ಬಾಸ್‌ಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್..! ಅಧಿಕೃತ ಹೇಳಿಕೆ ನೀಡಿ ಹೊರ ಬಂದ ಅಭಿನಯ ಚಕ್ರವರ್ತಿ..
ಸ್ಪರ್ಧಿಗಳಿಗೆ ಬರುವ ಲೀಗಲ್ ನೋಟಿಸ್ ಗಳ ಬಗ್ಗೆಯೂ ಸುದೀಪ್ ಗೆ ಅಸಮಾಧಾನ ಉಂಟಾಗಿದೆ. ಅದಕ್ಕೆ ಉತ್ತರ ನೀಡುವ ಲೀಗಲ್ ಟೀಮ್ ಸ್ಟ್ರಾಂಗ್ ಆಗಿಲ್ಲ ಎನ್ನಲಾಗ್ತಿದೆ. ಕ್ರಿಯೇಟಿವ್ ಪೋರ್ಷನ್ ಗಷ್ಟೇ ಕಲರ್ಸ್ ಕನ್ನಡ ಸೀಮಿತವಾಗಿದ್ದು, ಕಮರ್ಷಿಯಲ್ ನಿರ್ಧಾರಗಳನ್ನ ತೆಗೆದುಕೊಳ್ಳೋದು ಮುಂಬೈ ಮೂಲದ ಎಂಡಮಾಲ್ ಕಂಪನಿಗೆ ಬಿಟ್ಟಿದ್ದಂತೆ.
A23 ರಮ್ಮಿ ಬಿಗ್ ಬಾಸ್ ಶೋಗೆ ಕಮರ್ಷಿಯಲ್ ಪಾರ್ಟನರ್ ಆಗಿದ್ದು, ಶೋ ಆರಂಭದ ಮೊದಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನ ಡಿಸ್ಪ್ಲೇ ಬೋರ್ಡ್ ನಲ್ಲಿ ಕೆಳಗಡೆ ಬಳಸಲು ಕಿಚ್ಚ ಸಲಹೆ ನೀಡಿದ್ದರಂತೆ. ರಮ್ಮಿಯನ್ನ ಸುದೀಪ್ ಅವರೇ ಪದೇ ಪದೆ ಉಚ್ಚರಿಸೋ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶವೊಂದು ಹೋದ ಗಿಲ್ಟ್ ಕಾಡುತ್ತಿದೆಯಂತೆ. ಹಾಗಾಗಿ ಬದಲಾವಣೆಗೆ ಸುದೀಪ್ ಮನವಿ ಮಾಡಿದ್ದರಂತೆ. ಆದರೆ ಅದಕ್ಕೂ ಕ್ಯಾರೆ ಎನ್ನಲಿಲ್ಲ.
ಈ ಎಲ್ಲಾ ಬೆಳವಣಿಗೆಗಳ ನಂತರ ಇನ್ನು ಮುಂದೆ ಶೋ ನಡೆಸದಿರಲು ಸುದೀಪ್ ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಕನ್ನಡ ಶೋನಲ್ಲಿ ಪರಭಾಷಿಗರ ದರ್ಬಾರ್ ಸಹಿಸದೇ ಈ ಬಾರಿಯ ಸೀಸನ್ ಮುಗಿಸಿ, ಬಿಗ್ ಬಾಸ್ ನಿಂದ ಹೊರಬರಲು ಕಿಚ್ಚ ನಿರ್ಧಾರ ತೆಗೆದುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.