Kichcha Sudeep : ಬಿಗ್ ಬಾಸ್‌ಗೆ ಗುಡ್‌ ಬೈ ಹೇಳಿದ ಕಿಚ್ಚ ಸುದೀಪ್..! ಅಧಿಕೃತ ಹೇಳಿಕೆ ನೀಡಿ ಹೊರ ಬಂದ ಅಭಿನಯ ಚಕ್ರವರ್ತಿ.. 

Kichcha Sudeep : ‘ಬಿಗ್​ ಬಾಸ್​ ಕನ್ನಡ’ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಬಹುತೇಕ ಎಲ್ಲಾ ಭಾಷೆಯ ಕಿರಿತರೆಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಮನೆ ಮಂದಿಯಲ್ಲಾ ಕುಳಿತು ನೋಡುತ್ತಾರೆ.. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್​ ಅವರು ಈ ಶೋ ನಡೆಸಿಕೊಡುತ್ತಿರುವ ವಿಚಾರ ಎಲ್ಲಿರಿಗೂ ತಿಳಿದಿದೆ.. ಆದರೆ.. ಇದೀಗ ಕಿಚ್ಚ ಗಟ್ಟಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ... ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

Written by - Krishna N K | Last Updated : Oct 13, 2024, 11:42 PM IST
    • ‘ಬಿಗ್​ ಬಾಸ್​ ಕನ್ನಡ’ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು.
    • ಕನ್ನಡದಲ್ಲಿ ಕಿಚ್ಚ ಸುದೀಪ್​ ಅವರು ಈ ಶೋ ನಡೆಸಿಕೊಡುತ್ತಿರುವ ವಿಚಾರ ಎಲ್ಲಿರಿಗೂ ತಿಳಿದಿದೆ..
    • ಇದೀಗ ಕಿಚ್ಚಾ ಗಟ್ಟಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ..
Kichcha Sudeep : ಬಿಗ್ ಬಾಸ್‌ಗೆ ಗುಡ್‌ ಬೈ ಹೇಳಿದ ಕಿಚ್ಚ ಸುದೀಪ್..! ಅಧಿಕೃತ ಹೇಳಿಕೆ ನೀಡಿ ಹೊರ ಬಂದ ಅಭಿನಯ ಚಕ್ರವರ್ತಿ..  title=
Kichcha Sudeep

Kiccha Sudeep Quits Bigg Boss : ಕಳೆದ 11 ಸೀಸನ್‌ಗಳನ್ನು ನಡೆಸಿಕೊಟ್ಟ ಕಿಚ್ಚ ಸುದೀಪ್‌ ಇದೀಗ ತಮ್ಮ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.. ಇದೆ ನನ್ನ ಕೊನೆಯ ಸೀಸನ್​ ಅಂತ ಅಧಿಕೃತವಾಗಿ ಘೋಷಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ನಡುವೆ  ಸುದೀಪ್​ ಕೈಗೊಂಡ ಈ ನಿರ್ಧಾರ ಕುತೂಹಲ ಹುಟ್ಟಿಸುತ್ತಿದೆ.. 

ಈ ಕುರಿತು ತಮ್ಮ ಅಧಿಕೃತ ಟ್ಟಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಿಚ್ಚ ಸುದೀಪ್​.. BBK11 ಗೆ ತೋರುತ್ತಿರುವ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮದ ಟಿಆರ್‌ಪಿ (TRP) ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯ ಬಗ್ಗೆ ಹೇಳುತ್ತದೆ. ನಿಮ್ಮೊಂದಿಗೆ ಪಯಣ ಮಾಡಿದ್ದು ಅದ್ಭುತವಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ..

ಬಿಗ್‌ ಬಾಸ್‌ 11 ನಾನು ನಿರೂಪಕನಾಗಿ ನಡೆಸಿಕೊಡುತ್ತಿರುವ ಕೊನೆಯ ಕಾರ್ಯಕ್ರಮ​. ನನ್ನ ಈ ನಿರ್ಧಾರವನ್ನು ನೀವು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ನಿಮ್ಮೆಲ್ಲರನ್ನೂ ಮನರಂಜಿಸಲು ಪ್ರಯತ್ನಿಸುತ್ತೇನೆ’ ಎಂದು ಸುದೀಪ್​ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.. ಇದೀಗ ಕಿಚ್ಚನ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್‌ ನೀಡಿದೆ..

ಬಿಗ್ ಬಾಸ್‌ನ ಕನ್ನಡ ಸೀಸನ್ ಮೊದಲೇ ಶೋ 2013 ರಲ್ಲಿ ETV ಕನ್ನಡದಲ್ಲಿ ಪ್ರಸಾರ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸುದೀಪ್ ಅವರು ನಡೆಸಿಕೊಟ್ಟರು. ಅಂದಿನಿಂದ ಇಂದಿನ ವರೆಗೆ ತಮ್ಮ ಅದ್ಭುತ ಮಾತುಗಳು ಮತ್ತು ಸ್ಪೂರ್ತಿದಾಯಕ ನುಡಿಗಳಿಂದ 11 ಸೀಸನ್‌ಗಳು ಯಶಸ್ವಿಯಾಗುವಂತೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾಪಾಡಿಕೊಂಡು ಬಂದಿದ್ದಾರೆ.. ಇದೀಗ ಕಿಚ್ಚ ಬಿಗ್‌ಬಾಸ್‌ಗೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News