Hide And Seek Motion Poster: ಚಂದನವನದ ಪ್ರತಿಭಾನ್ವತ ನಟ ಅನೂಪ್‌ ರೇವಣ್ಣ ಹಾಗೂ ನಟಿ  ಧನ್ಯಾ ರಾಮ್​ಕುಮಾರ್​ ಅಭಿನಯದ ‘ಹೈಡ್​ ಆ್ಯಂಡ್​ ಸೀಕ್​’  ಸಿನಿಮಾ ಮೋಷನ್​ ಪೋಸ್ಟರ್​ ರಿಲೀಸ್‌ ಆಗಿದೆ.  ಈ ಚಿತ್ರ ಈಗಾಗಲೇ ಶೀರ್ಷಿಕೆಯಿಂದಲೇ  ಕೌತುಕ ಮೂಡಿಸಿದ್ದು, ಇದೀಗ ಮೋಷನ್​ ಪೋಸ್ಟರ್ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದೆ.  ಇದರಲ್ಲಿ ಇವರಿಬ್ಬರ ಗೆಟಪ್‌ ತುಂಬಾ ಚೆನ್ನಾಗಿಯೇ ಹೈಲೈಟ್‌ ಆಗಿದ್ದು. ಇದಕ್ಕಾಗಿ ಸಿನಿರಸಿಕರು ಬಹಳ ದಿನದಿಂದ ಕಾಯುತ್ತಿದ್ದರು.


COMMERCIAL BREAK
SCROLL TO CONTINUE READING

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳಿರುವುದರ ಜೊತೆಗೆ ಇದೊಂದಿಗೆ ರಿವರ್ಸ್​ ಸ್ಕ್ರೀನ್​ಪ್ಲೇ ಆಗಿದೆ ಎಂದು ಸಿನಿತಂಡದವರು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಅನೂಪ್‌ ರೇವಣ ಕಿಡ್ನಾಪರ್​ ರೋಲ್‌ ಪ್ಲೇ ಮಾಡಿದ್ದಾರೆ. ಇನ್ನು ಸಿನಿಮಾದಲ್ಲಿ ನಟಿ ಧನ್ಯಾ ರಾಮ್‌ಕುಮಾರ್‌  ಉದ್ಯಮಿಯ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರಿಂದ  ಅನೂಪ್​ ರೇವಣ್ಣ ಮತ್ತು ಧನ್ಯಾ ರಾಮ್​ಕುಮಾರ್​ ಈ ಸಿನಿಮಾದ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದಾರೆ.


ಇದನ್ನೂ ಓದಿ: Suhana Khan: ಕೃಷಿ ಭೂಮಿ ಖರೀದಿಸಿದ ಕಿಂಗ್‌ ಖಾನ್‌ ಪುತ್ರಿ! ಬೆಲೆ ಎಷ್ಟು ಗೊತ್ತೇ?


ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆಗೆ  ‘ಹೈಡ್​ ಆ್ಯಂಡ್​ ಸೀಕ್​’  ಚಿತ್ರದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್ ಅಂತ ದೊಡ್ಡ ತಾರಾಬಳಗವೇ ಇದೆ.  ಡೈರೆಕ್ಟರ್‌ ಪುನೀತ್​ ನಾಗರಾಜು ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಇದಕ್ಕೆ ವಸಂತ್​ ಎಂ. ರಾವ್​ ಕುಲಕರ್ಣಿ ಹಾಗೂ ಪುನೀತ್​ ನಾಗರಾಜು​ ಇನ್ನರು ಬಂಡವಾಳ ಹೂಡಿದ್ದಾರೆ.  ಈ ಸಿನಿಮಾ ‘ಸುನೇರಿ ಆರ್ಟ್​ ಕ್ರಿಯೇಷನ್ಸ್​’ ಬ್ಯಾನರ್ ಅಡಿಯಲಲಿ ನಿತ್ಮಾಣ ಮಾಡಲಾಗಿದ್ದು,  ಚಿತ್ರದ ದೃಶ್ಯಗಳನ್ನು ಪಿಜೋ ಪಿ. ಜಾನ್ ಸೆರೆಹಿಡಿದಿದ್ದಾರೆ. 


ಮ್ಯೂಸಿಕ್‌ ಕಂಪೋಸರ್ ಸ್ಯಾಂಡಿ ಅಡ್ಡಂಕಿ  ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ  ಸಂಗೀತ ನೀಡಿದ್ದಾರೆ ಮತ್ತು ಮಧು ತುಂಬೆಕೆರೆ ಸಂಕಲನ ಮಾಡಿದ್ದಾರೆ. ಈಗಾಗಲೇ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರ ರಾಜ್ಯದೆಲ್ಲೆಡೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಸಿನಿಮಾ ಇದೇ ವರ್ಷ  ಮಾರ್ಚ್​ 15ರಂದು ರಿಲೀಸ್‌ ಆಗಲಿದೆ. ಇನ್ನೂ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ  ಎಂಬುದಕ್ಕೆ ಸಿನಿಮಾ ರಿಲೀಸ್‌ ಆಗೊತನಕ ಕಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.