ಎಲ್ಲೆಲ್ಲೂ ಹೋಳಿ ಹಬ್ಬದ (Holi Festival) ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಇಂದು ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಾಲಿವುಡ್ (Bollywood) ಸೆಲೆಬ್ರಿಟಿಗಳು ಸಹ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Jaggesh Birthday:ಅಪ್ಪು ವಿಶ್​ ಮಾಡಿದ್ದ ವಿಡಿಯೋ ಮತ್ತೆ ವೈರಲ್.. ಭಾವುಕರಾದ ನಟ ಜಗ್ಗೇಶ್


ಬಾಲಿವುಡ್ ಸ್ಟಾರ್ ಕಪಲ್ ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ ಕೈಫ್ (Katrina Kaif) ಹೋಳಿಯನ್ನು ಒಟ್ಟಿಗೆ ಆಚರಿಸಿದರು. ಕತ್ರಿನಾ ತಮ್ಮ ಪತಿ ವಿಕ್ಕಿ ಮತ್ತು ಅತ್ತೆಯೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದಾರೆ. ಕತ್ರಿನಾ ಕೈಫ್, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ವಿವಾಹವಾದ ನಂತರ ಕತ್ರಿನಾ ಮತ್ತು ವಿಕ್ಕಿ ದಂಪತಿಯ ಮೊದಲ ಹೋಳಿ ಹಬ್ಬ ಇದಾಗಿದೆ.


ಕತ್ರಿನಾ ಸಾಮಾಜಿಕ ಜಾಲತಾಣದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಹ್ಯಾಪಿ ಹೋಳಿ ಎಂದು ಬರೆದಿದ್ದಾರೆ. ವಿಕ್ಕಿಯ ಪೋಷಕರಾದ ಶಾಮ್ ಮತ್ತು ವೀಣಾ ಕೌಶಲ್ ಹಾಗೂ ವಿಕ್ಕಿಯ ಕಿರಿಯ ಸಹೋದರ ಸನ್ನಿ ಕೌಶಲ್ ಕೂಡ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ವಿಕ್ಕಿ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ Y ಕೆಟಗರಿ ಭದ್ರತೆ


ಇಷ್ಟೇ ಅಲ್ಲ.. ಅಮಿತಾಭ್ ಬಚ್ಚನ್, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಮತ್ತು ಇತರ ಬಿ-ಟೌನ್ ಸೆಲೆಬ್ರಿಟಿಗಳು ಸಹ ಹೋಳಿ ಹಬ್ಬದ ದಿನ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಇನ್ನೂ ನಟಿ ವಿದ್ಯಾ ಬಾಲನ್ (Vidya Balan) ಬಣ್ಣಗಳ ತಟ್ಟೆಯನ್ನು ಹಿಡಿದು, ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಸಹ ಕುಟುಂಬ ಸಮೇತರಾಗಿ ಹೋಳಿ ಆಚರಿಸಿದ್ದಾರೆ. 


ಒಟ್ಟಿನಲ್ಲಿ ಹೋಳಿ ಹಬ್ಬವನ್ನು ಬಿ-ಟೌನ್ ನಲ್ಲಿ (B-town) ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಒಬ್ಬರಿಗೊಬ್ಬರು ಬಣ್ಣ ಎರೆಚಿಕೊಂಡು, ಶುಭಕೋರುವ ಮೂಲಕ ಹೋಳಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.