Holi 2021: ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ Lucky Colourನಿಂದ ಹೋಳಿ ಹಬ್ಬ ಆಚರಿಸಿ

Holi-2021: ಬನ್ನಿ ರಾಶಿಗಳಿಗೆ ಅನುಗುಣವಾಗಿ ಯಾವ ಬಣ್ಣ ನಿಮಗೆ ಶುಭ ತರಲಿದೆ.

Written by - Nitin Tabib | Last Updated : Mar 25, 2021, 09:50 PM IST

    ಈ ಬಾರಿ ಮಾರ್ಚ್ 29 ರಂದು ಸೋಮವಾರ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ.

    ಈ ದಿನ ಜನರು ವಿವಿಧ ಬಣ್ಣಗಳಿಂದ ಬಣ್ಣದೋಕುಳಿ ಆಡುತ್ತಾರೆ. ಈ ದಿನ ಬಣ್ಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ.

    ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರ ತನ್ನದೇ ಆದ ಅದೃಷ್ಟದ ಬಣ್ಣ ಹೊಂದಿರುತ್ತದೆ.

Holi 2021: ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ Lucky Colourನಿಂದ ಹೋಳಿ ಹಬ್ಬ ಆಚರಿಸಿ title=
Play Holi 2021 With Your Lucky Colour According To Zodiac Sign

Play Holi 2021 With Your Lucky Colour According To Zodiac Sign- ಈ ಬಾರಿ ಮಾರ್ಚ್ 29 ರಂದು ಸೋಮವಾರ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಜನರು ವಿವಿಧ ಬಣ್ಣಗಳಿಂದ ಬಣ್ಣದೋಕುಳಿ (Festival Of Colours)ಆಡುತ್ತಾರೆ. ಈ ದಿನ ಬಣ್ಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಜೋತಿಷ್ಯ ಶಾಸ್ತ್ರದ (Astrology)ಪ್ರಕಾರ ಪ್ರತಿಯೊಂದು ರಾಶಿಚಕ್ರ ತನ್ನದೇ ಆದ ಅದೃಷ್ಟದ ಬಣ್ಣ ಹೊಂದಿರುತ್ತದೆ. ಹಾಗಾಗರೇ ಬನ್ನಿ ನಿಮ್ಮ ರಾಶಿ ಯಾವುದು ಹಾಗೂ ಯಾವ ಬಣ್ಣ ನಿಮಗೆ ಅದೃಷ್ಟ ತರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

ಮೇಷ ಹಾಗೂ ವೃಶ್ಚಿಕ ರಾಶಿ
ಈ ಎರಡೂ ರಾಶಿಯ ಜಾತಕ ಹೊಂದಿದವರು ಸ್ನೇಹಿತ ರಾಶಿಚಕ್ರದ ಬಣ್ಣಗಳೊಂದಿಗೆ ಹೋಳಿಯನ್ನು ಆಡಬೇಕು, ಏಕೆಂದರೆ ಮಂಗಳ ಈ ರಾಶಿಚಕ್ರದ ಅಧಿಪತಿ. ಸ್ನೇಹಿತ ರಾಶಿಚಕ್ರದ ಬಣ್ಣಗಳಲ್ಲಿ ಹಳದಿ ಮತ್ತು ಗುಲಾಬಿ ಬಣ್ಣಗಳನ್ನು ಹೆಸರಿಸಲಾಗಿದೆ. ಹೀಗಾಗಿ ಈ ವರ್ಷದಲ್ಲಿ, ಹಳದಿ ಮತ್ತು ಗುಲಾಬಿ ಬಣ್ಣಗಳೊಂದಿಗೆ ಹೋಳಿ ಆಡುವುದು ನಿಮಗೆ ಶುಭವೆಂದು ಸಾಬೀತಾಗಲಿದೆ.

ವೃಷಭ ಹಾಗೂ ತುಲಾ ರಾಶಿ
ಈ ಎರಡೂ ರಾಶಿಗಳಿಗೆ ಶುಕ್ರ ಅಧಿಪತಿ. ಹೀಗಾಗಿ ಇವರಿಗೆ ಸಿಲ್ವರ್ ಬಣ್ಣ ತುಂಬಾ ಶುಭಕರ. ಆದರೆ ಸಿಲ್ವರ್ ಬಣ್ಣದಿಂದ ಹೋಳಿ ಹಬ್ಬವನ್ನು ಆಚರಿಸಲಾಗುವುದಿಲ್ಲ. ಹೀಗಾಗಿ ವೃಷಭ ಹಾಗೂ ತುಲಾ ರಾಶಿ ಜಾತಕದವರು ತಿಳಿ ನೀಲಿ ಹಾಗೂ ಆಕಾಶ ಬಣ್ಣದಿಂದ ಹೋಳಿ ಹಬ್ಬ ಆಚರಿಸುವ ಸಲಹೆ ನೀಡಲಾಗಿದೆ. 

ಕರ್ಕ ರಾಶಿ
ಚಂದ್ರ ಕರ್ಕರಾಶಿಯ ಅಧಿಪತಿ. ಚಂದ್ರನ ಬಣ್ಣ ಬಿಳಿ ಬಣ್ಣ ಆಗಿರುತ್ತದೆ. ಇತ್ತೀಚಿಗೆ ಬಿಳಿ ಬಣ್ಣದಿಂದಲೂ ಕೂಡ ಹೋಳಿ ಹಬ್ಬ (Holi 2021) ಆಚರಿಸಲಾಗುತ್ತದೆ. ಆದರೆ ಬಿಳಿ ಬಣ್ಣ ರಾಸಾಯನಿಕ ಬಣ್ಣವಾಗಿರುತ್ತದೆ. ಹೀಗಾಗಿ ಈ ರಾಶಿ ಜಾತಕ ಹೊಂದಿದವರು ಬಣ್ಣಗಳನ್ನು ಮೊಸರಿನಲ್ಲಿ ಬೆರೆಸಿ ಬಣ್ಣದೊಕುಳಿ ಆಡಿದರೆ, ಅವರ ಮನೋಕಾಮನೆಗಳು ಪ್ರಾಪ್ತಿಯಾಗುತ್ತವೆ. ಇನ್ನೊಂದೆಡೆ ಮೊಸರಿನಲ್ಲಿ ಬಣ್ಣ ಬೆರೆಸಿ ಹಚ್ಚುವುದರಿಂದ ತ್ವಚೆಗೆ ಹಾನಿ ಕೂಡ ಆಗುವುದಿಲ್ಲ.

ಮಿಥುನ ಹಾಗೂ ಕನ್ಯಾ ರಾಶಿ
ಈ ಎರಡೂ ರಾಶಿಗಳ ಅದ್ಧಿಪತಿ ಬುಧಗ್ರಹ. ಈ ಜಾತಕ ಹೊಂದಿದವರು ನಾರಂಗಿ, ನೀಲಿ, ಆಕಾಶ ಬಣ್ಣ ಹಾಗೂ ಗುಲಾಬಿ ಬಣ್ಣಗಳಿಂದ ಹಬ್ಬ ಆಚರಿಸುವುದು ಶುಭಕರ. ಇದಲ್ಲದೆ ಈ ಎರಡೂ ರಾಶಿಯ ಜಾತಕ ಹೊಂದಿದವರು ತಿಳಿ ಹಸಿರು ಬಣ್ಣದಿಂದ ಹೋಳಿ ಹಬ್ಬವನ್ನು ಆಚರಿಸಬಹುದು.

ಸಿಂಹ ರಾಶಿ
ಸಿಂಹ ರಾಶಿಯ ಜಾತಕ ಹೊಂದಿದವರು ಹಳದಿ, ನಾರಂಗಿ, ತಿಳಿ ಹಸಿರು ಇತ್ಯಾದಿ ರಂಗುಗಳ ಮೂಲಕ ಹೋಳಿ ಆಧರಿಸಬಹುದು. ಏಕೆಂದರೆ ಈ ರಾಶಿಯ ಅಧಿಪತಿ ಸೂರ್ಯ ಹಾಗೂ ಸೂರ್ಯನಿಗೆ ಸಂಬಂಧಿಸಿದ ಬಣ್ಣಗಳು ಬಂಗಾರದ ಬಣ್ಣಗಳಾಗಿವೆ. ಈ ಜಾತಕ ಹೊಂದಿದವರು ಸ್ವಭಾವ ತುಂಬಾ ಉತ್ಸಾಹದಿಂದ ಕೂಡಿರುತ್ತದೆ. ಅಷ್ಟೇ ಅಲ್ಲ ಇವರು ತುಂಬಾ ಉತ್ಸಾಹದಿಂದ ಹೋಳಿ ಹಬ್ಬ ಆಚರಿಸುತ್ತಾರೆ.

ಇದನ್ನೂ ಓದಿ-Holi precautions: ಗರ್ಭಿಣಿ ಮಹಿಳೆಯರೇ ಹೋಳಿ ಆಡುವಾಗ ಇರಲಿ ಎಚ್ಚರ

ಧನು ಹಾಗೂ ಮೀನ ರಾಶಿ
ಗುರುಗ್ರಹ ಈ ರಾಶಿಗಳ ಅಧಿಪತಿ. ಗುರು ಸರಳ ಹಾಗೂ ಸಂತ ಪ್ರವೃತ್ತಿಯ ಕಾರಕ ಕೂಡ ಹೌದು. ಸರಳ ಸ್ವಭಾವದ ಈ ಜಾತಕಗಳ ವ್ಯಕ್ತಿಗಳು ತುಂಬಾ ಸರಳ ರೀತಿಯಲ್ಲಿ ಹಬ್ಬ ಆಚರಿಸುತ್ತಾರೆ. ಹಳದಿ, ನಾರಂಗಿ ಹಾಗೂ ಹಣ್ಣಿನ ಬಣ್ಣಗಳ ಬಳಕೆ ಮಾಡಿ ಹೋಳಿ ಹಬ್ಬ ಆಚರಿಸಿದರೆ ಶುಭಕರ.

ಇದನ್ನೂ ಓದಿ-Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ

ಮಕರ ಹಾಗೂ ಕುಂಭ ರಾಶಿ
ಈ ರಾಶಿಯ ಜಾತಕದವರು ತುಂಬಾ ಉತ್ಸಾಹದಿಂದ ಹೋಳಿ ಹಬ್ಬ ಆಚರಿಸುತ್ತಾರೆ. ಏಕೆಂದರೆ ಈ ರಾಶಿಗಳ ಜಾತಕ ಸ್ವಾಮಿ ಶನಿ. ಹೀಗಾಗಿ ನೀಲಿ, ಹಸಿರು ಹಾಗೂ ಆಕಾಶದ ಬಣ್ಣಗಳಿಂದ ಇವರು ಹೋಳಿ ಆಚರಿಸಿದರೆ ಅದು ಶುಭಕರ.

ಇದನ್ನೂ ಓದಿ-Holi 2021: ಹೋಳಿ ದಹನದಲ್ಲಿ ಈ ಮರಗಳನ್ನು ಬಳಸುವುದು ಅಶುಭವೆಂದು ತಿಳಿದಿದೆಯೇ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News