Yo Yo Honey Singh: ಪಂಜಾಬಿ ಸಿಂಗರ್ ಹನಿ ಸಿಂಗ್ ಅವರು ಬಾಲಿವುಡ್ ಪ್ರವೇಶಿಸಿದಾಗಿನಿಂದಲೂ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಹನಿ ಸಿಂಗ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ, ಹನಿ ಸಿಂಗ್ ಕಳೆದ ಒಂದು ವರ್ಷದಿಂದ ಹೀರಾ ಸೋಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಹೀರಾ ಮತ್ತು ಹನಿ ಸಿಂಗ್ ಅನೇಕ ಪ್ರಮುಖ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹನಿ ಸಿಂಗ್ ಮತ್ತು ಹೀರಾ ಮೊದಲ ಬಾರಿಗೆ Music concertನಲ್ಲಿ ಭೇಟಿಯಾದರು. ಹನಿ ಸಿಂಗ್ ಮುಂಬೈನಲ್ಲಿ ಹೋಳಿಯಲ್ಲಿ ಮೊದಲ ಪ್ರದರ್ಶನ ನೀಡಿದರು. ಹೀರಾ ಕೂಡ ಅದರಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ-Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!


ಹೀರಾ ಸೋಹಲ್ ಅವರನ್ನು ಪಂಜಾಬಿಯ ಮಲೈಕಾ ಅರೋರಾ ಎಂದು ಕರೆಯಲಾಗುತ್ತದೆ. ಏಕೆಂದರೇ ಅವರಿಬ್ಬರ ಮುಖದ ಹೋಲಿಕೆ ಒಂದೇ ರೀತಿ ಇದೆ... ಹಾಗಾಗಿ ಹನಿ ಸಿಂಗ್ ಅವರ ಹೊಸ ಗೆಳತಿಯನ್ನು ಮಲೈಕಾ ಅರೋರಾ ಜೊತೆ ಹೋಲಿಸಲಾಗುತ್ತಿದೆ.


ಇದನ್ನೂ ಓದಿ-ಈ ವ್ಯಕ್ತಿಯ ಮಾತು ಕೇಳಿ ಸೈಫ್ ಅಲಿ ಖಾನ್ ಗೆ ರಾತ್ರಿ ನಿದ್ದೆ ಮಾತ್ರೆ ನೀಡುತ್ತಿದ್ದರಂತೆ ಪತ್ನಿ ! ವರ್ಷಗಳ ಬಳಿಕ ಹೊರ ಬಿದ್ದ ಶಾಕಿಂಗ್ ಸತ್ಯ


ಹೀರಾ ಸೋಹಲ್ ಪಂಜಾಬಿ ನಟಿ. ಇಲ್ಲಿಯವರೆಗೆ ಅವರು 'ಬುಹರತಮ್ ಹೀರೆ ದಿ', 'ಪ್ಯಾರ್ ಹೈ ಡ್ರಾಮಾ (ಪಿಎಚ್‌ಡಿ)', 'ವಿಕ್ಟೋರಿಯಾ ಏಕ್ ರಹಸ್ಯ' ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಥ್ಯಾಂಕ್ ಗಾಡ್ ಸಿನಿಮಾದಲ್ಲೂ ಹೀರಾ ಕೆಲಸ ಮಾಡಿದ್ದಾರೆ. ಅವರು ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.


ಹೀರಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಹನಿ ಸಿಂಗ್ ಅವರ ಫೋಟೋ ಆಗಾಗ್ಗೆ ಅವರ Instagram ಸ್ಟೋರಿಯಲ್ಲಿ ಕಂಡುಬರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.