ಈ ವ್ಯಕ್ತಿಯ ಮಾತು ಕೇಳಿ ಸೈಫ್ ಅಲಿ ಖಾನ್ ಗೆ ರಾತ್ರಿ ನಿದ್ದೆ ಮಾತ್ರೆ ನೀಡುತ್ತಿದ್ದರಂತೆ ಪತ್ನಿ ! ವರ್ಷಗಳ ಬಳಿಕ ಹೊರ ಬಿದ್ದ ಶಾಕಿಂಗ್ ಸತ್ಯ

ಈಗ ಸೈಫ್ ಗೆ ಸಂಬಂಧಪಟ್ಟಂತೆ ಇನ್ನೊಂದು ವಿಚಾರ ಮುನ್ನಲೆಗೆ ಬಂದಿದೆ. ಇದನ್ನು ಸೈಫ್ ಆಪ್ತರೇ ಬಿಚ್ಚಿಟ್ಟಿದ್ದಾರೆ. ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜಾತ್ಯಾ ಸೈಫ್ ಗೆ ಸಂಬಂಧ ಪಟ್ಟ ಮುಖ್ಯ ವಿಚಾರವನ್ನು ಹೊರ ಹಾಕಿದ್ದಾರೆ.  

Written by - Ranjitha R K | Last Updated : Jul 8, 2024, 11:48 AM IST
  • ಸೈಫ್ ಅಲಿಖಾನ್ ವಿಚ್ಛೇದನದ ವಿಚಾರ ಭಾರೀ ಸದ್ದು ಮಾಡಿತ್ತು.
  • ಕರೀನಾ ಕಪೂರ್ ಟ್ಯಾಟೂ ತೆಗೆದು ಹಾಕಿರುವ ಕಾರಣ ಈ ಸುದ್ದಿ ಹಬ್ಬಿತ್ತು
  • ಇದಕ್ಕೆ ಸ್ವತಃ ಕರೀನಾ ಕಪೂರ್ ಸ್ಪಷ್ಟನೆಯನ್ನು ಕೂಡಾ ನೀಡಿದ್ದರು.
ಈ ವ್ಯಕ್ತಿಯ ಮಾತು ಕೇಳಿ ಸೈಫ್ ಅಲಿ ಖಾನ್ ಗೆ ರಾತ್ರಿ ನಿದ್ದೆ ಮಾತ್ರೆ ನೀಡುತ್ತಿದ್ದರಂತೆ ಪತ್ನಿ ! ವರ್ಷಗಳ ಬಳಿಕ ಹೊರ ಬಿದ್ದ ಶಾಕಿಂಗ್ ಸತ್ಯ  title=

Sooraj Barjatya on Saif Ali Khan: ಇತ್ತೀಚೆಗೆ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ವಿಚ್ಛೇದನದ ವಿಚಾರ ಭಾರೀ ಸದ್ದು ಮಾಡಿತ್ತು.ತನ್ನ ಕೈ ಮೇಲಿದ್ದ ಕರೀನಾ  ಕಪೂರ್  ಟ್ಯಾಟೂ ತೆಗೆದು ಹಾಕಿರುವ ಕಾರಣ ಈ ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆ ಸ್ವತಃ ಕರೀನಾ ಕಪೂರ್ ಸ್ಪಷ್ಟನೆಯನ್ನು ಕೂಡಾ ನೀಡಿದ್ದರು. ಮುಂಬರುವ ಸಿನಿಮಾಗಾಗಿ ಸೈಫ್ ತನ್ನ ಕೈ ಮೇಲಿದ್ದ ಕರೀನಾ ಹೆಸರಿನ ಟ್ಯಾಟೂವನ್ನು ಮರೆ ಮಾಡಬೇಕಾಗಿದೆ.ಸಿನಿಮಾ ಸಲುವಾಗಿ ಕರೀನಾ ಹೆಸರಿನ ಮೇಲೆ ತ್ರಿಶೂಲದ  ಟ್ಯಾಟೂವನ್ನು ತಾತ್ಕಾಲಿಕವಾಗಿ  ಹಾಕಿಸಿಕೊಳ್ಳಬೇಕಾಗಿದೆ ಎಂದು ಹೇಳಿ ಹುಟ್ಟಿಕೊಂಡಿರುವ ಊಹಾ ಪೋಹಗಳಿಗೆ ತೆರೆ ಎಳೆದಿದ್ದರು. 

ಈಗ ಸೈಫ್ ಗೆ ಸಂಬಂಧಪಟ್ಟಂತೆ ಇನ್ನೊಂದು ವಿಚಾರ ಮುನ್ನಲೆಗೆ ಬಂದಿದೆ. ಇದನ್ನು ಸೈಫ್ ಆಪ್ತರೇ ಬಿಚ್ಚಿಟ್ಟಿದ್ದಾರೆ. ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜಾತ್ಯಾ ಸೈಫ್ ಗೆ ಸಂಬಂಧ ಪಟ್ಟ ಮುಖ್ಯ ವಿಚಾರವನ್ನು ಹೊರ ಹಾಕಿದ್ದಾರೆ.

ಇದನ್ನೂ ಓದಿ : Rashmika Mandanna: ಮೆಗಾ ಫ್ಯಾಮಿಲಿಗೆ ರಶ್ಮಿಕಾ ಎಂಟ್ರಿ..? ಏನಿದು ಹೊಸ ವಿಷಯ?!
   
ಸೈಫ್ ಗೆ ನಿದ್ದೆ ಮಾತ್ರೆ :  

ರಾಜಶ್ರೀ ಪ್ರೊಡಕ್ಷನ್ಸ್‌ನ ಯೂಟ್ಯೂಬ್ ಚಾನೆಲ್‌ಗಾಗಿ ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜತ್ಯಾ ಅವರನ್ನು ಕೆಲವು ಸಮಯದ ಹಿಂದೆ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಸೂರಜ್ ಬರ್ಜತ್ಯಾ ಈ ವಿಚಾರಗಳನ್ನು ಹೊರ ಹಾಕಿದ್ದಾರೆ. ಫ್ಯಾಮಿಲಿ ಡ್ರಾಮ ಕತೆಯನ್ನು ಹೊಂದಿದ್ದ ಹಮ್ ಸಾಥ್ ಸಾಥ್ ಹೈ ಹಾಯ್ ಚಿತ್ರದ ಚಿತ್ರೀಕರಣ ವೇಳೆ ಸೈಫ್ ಅಲಿ ಖಾನ್ ಪರಿಪೂರ್ಣ ಶಾಟ್ ಗಳನ್ನೂ ನೀಡಲು ಸಾಧ್ಯವಾಗುತ್ತಿರಲಿಲ್ಲವಂತೆ.ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇರುತ್ತಿದ್ದ ಕಾರಣ ಶೂಟಿಂಗ್ ನಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲವಂತೆ. ಹಾಗಾಗಿ ಪದೇ ಪದೇ ರಿಟೇಕ್ ಗಳನ್ನೂ ತೆಗೆದುಕೊಳ್ಳುತ್ತಿದ್ದರಂತೆ. ನಿಜವಾಗಿಯೂ ನೋಡುವುದಾದರೆ ಆ ಸಂದರ್ಭದಲ್ಲಿ ಸೈಫ್ ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸುತ್ತಿದ್ದರು.ಒತ್ತಡದಲ್ಲಿ ದಿನ ಕಳೆಯುತ್ತಿದ್ದರು.   

ಊಟದಲ್ಲಿ ನಿದ್ದೆ ಮಾತ್ರೆ :  
ನಿದ್ದೆಯ ಅಭಾವದಿಂದಲೇ ಸೈಫ್ ಈ ರೀತಿ ಮಾಡುತ್ತಿರುವುದನ್ನು ಗಮನಿಸಿದ ಸೂರಜ್ ಬರ್ಜಾತ್ಯಾ, ಊಟದ ಸಮಯದಲ್ಲಿ ನಿದ್ರೆ ಮಾತ್ರೆಗಳನ್ನು ನೀಡುವಂತೆ ಸೈಫ್ ಅವರ ಮೊದಲ ಪತ್ನಿ ಅಮೃತಾ (ಅಮೃತಾ ಸಿಂಗ್)ಗೆ ಸೂಚಿಸಿದ್ದರಂತೆ. ಸೂರಜ್ ಹೇಳಿದ ಮಾತಿನಂತೆಯೇ ಅಮೃತಾ ತನ್ನ ಪತಿ ಸೈಫ್ ಗೆ ನಿದ್ರೆ  ಮಾತ್ರೆಗಳನ್ನು ನೀಡಿದ್ದರಂತೆ. ಇದರಿಂದಾಗಿ ಸೈಫ್ ಪರಿಪೂರ್ಣ ನಿದ್ದೆ ಮಾಡುವುದು ಸಾಧ್ಯವಾಗಿತ್ತು ಎನ್ನುತ್ತಾರೆ ಸೂರಜ್.

ಇದನ್ನೂ ಓದಿ : ಕೋಟಿಗಟ್ಟಲೆ ಹಣ ಕಾಡಿನಲ್ಲಿ ಬಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ..! ವಿಡಿಯೋ ವೈರಲ್‌.. ಏನಿದು ಹೊಸ ಸುದ್ದಿ..

ಇದಾದ ಬಳಿಕ ಮಾರನೆ ದಿನ ಸೈಫ್ ಅಲಿ ಖಾನ್ ಅವರ ಅನೇಕ ಶಾಟ್ ಗಳನ್ನೂ ನಿಗದಿ ಪಡಿಸಲಾಗಿತ್ತಂತೆ. ಈ ಎಲ್ಲಾ ಶಾಟ್ ಗಳನ್ನು ಸೈಫ್ ಒಂದೇ ಟೇಕ್‌ನಲ್ಲಿ ಮಾಡಿ ಮುಗಿಸಿದ್ದರಂತೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News