Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!

Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. 
 

1 /5

ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ರಂಗಭೂಮಿಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದರು.. ಚಿಕ್ಕ ಪುಟ್ಟ ನಾಟಕದ ಪಾತ್ರಗಳನ್ನು ಮಾಡುತ್ತಿದ್ದ ಈ ನಟ ಸದ್ಯ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ..     

2 /5

ನಟ ಅಚ್ಯುತ್‌ ಕುಮಾರ್‌ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು..    

3 /5

ಅಚ್ಯುತ್‌ ಕುಮಾರ್‌ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.. ಹೀಗಾಗಿಯೇ ಇವರು ಪ್ರತಿಯೊಬ್ಬರಿಗೂ ಚಿರಪರಿಚಿತ..    

4 /5

ಇನ್ನು ನಟ ಅಚ್ಯುತ್‌ ಕುಮಾರ್‌ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರ ಪತ್ನಿ ಹೆಸರು ನಂದಿನಿ.. ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..   

5 /5

ನಟ ಅಚ್ಯುತ್‌ ಕುಮಾರ್‌ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ..