ಬೆಂಗಳೂರು: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ಕೆಜಿಎಫ್ 2 ಚಿತ್ರದ್ದೇ ಮಾತು, ಅಷ್ಟರ ಮಟ್ಟಿಗೆ ಈ ಸಿನಿಮಾ ಈಗ ಹವಾ ಮಾಡುತ್ತಿದೆ.ಬಾಲಿವುಡ್ ನಟ ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಉತ್ತರ ಭಾರತದ ಭಾಗಗಳಲ್ಲಿ ಕೆಜಿಎಫ್ 2 ಚಿತ್ರಕ್ಕೆ ಇರುವ ಹವಾ ನೋಡಿ ಒಂದು ವಾರದವರೆಗೆ ಚಿತ್ರದ ಬಿಡುಗಡೆಯನ್ನು ಮುಂದೂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!


ಅಷ್ಟೇ ಅಲ್ಲದೆ ಕೆಜಿಎಫ್ 2 ಚಿತ್ರಕ್ಕೆ ಸವಾಲಾಗಬಹುದು ಎಂದು ಹೇಳಲಾಗುತ್ತಿದ್ದ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಗ್ಗೆ ಕೂಡ ಚಿತ್ರದ ವಿಮರ್ಶೆಗಳು ಸಾಧಾರಣ ಸಿನಿಮಾ ಎಂದು ಹೇಳಿವೆ.ಹಾಗಾಗಿ ಈಗ ನಾಳೆಯಿಂದ ಬಿಡುಗಡೆಯಾಗಲಿರುವ ಕೆಜಿಎಫ್ 2 ಚಿತ್ರದ ಹವಾ ಕೇವಲ ಭಾರತವಷ್ಟೇ ಅಲ್ಲದೆ ಸಾಗರೋತ್ತರ ದೇಶಗಳಲ್ಲಿಯೂ ಮುಂದುವರೆಯಲಿದೆ. ಆ ಮೂಲಕ ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಜಾಗತಿಕವಾಗಿ ಸಾಕಷ್ಟು ಸದ್ದು ಮಾಡುವತ್ತ ದಿಟ್ಟ ಹೆಜ್ಜೆಯನ್ನು ಇರಿಸಿದೆ.


ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!


ಈಗ ಚಿತ್ರದ ಕುರಿತಾಗಿ ಹಲವಾರು ಕುತೂಹಲಕರ ಸಂಗತಿಗಳು ಹೊರಬರುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಕೆಜಿಎಫ್ 1 ಚಿತ್ರದ ಅಭಿಮಾನಿಯಾಗಿದ್ದ ಹುಡುಗನೊಬ್ಬ ಫ್ಯಾನ್ ವಿಡಿಯೋ ಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದ ಈ ವಿಡಿಯೋಗಳನ್ನು ಗಮನಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕೆಜಿಎಫ್ 2 ಚಿತ್ರದ ವಿಡಿಯೋ ಎಡಿಟರ್ ಆಗಿ ನೇಮಕ ಮಾಡಿಕೊಂಡಿದ್ದಾರೆ.ಅಷ್ಟಕ್ಕೂ ಈ ಹುಡುಗನ ವಯಸ್ಸು ಕೇವಲ 19 ವರ್ಷ..!


ಹೌದು. ಕಲಬುರ್ಗಿ ಮೂಲದ ಉಜ್ವಲ್ ಕುಲಕರ್ಣಿ ಎನ್ನುವ ಈ ಹುಡುಗ ಈಗ ಕೆಜಿಎಫ್ 2 ಚಿತ್ರದ ವಿಡಿಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸಿರುವ ಕುರಿತಾಗಿ ಸ್ವತಃ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ.ಈಗ ಈ ಹುಡುಗನ ಕೌಶಲ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.