Katrina Kaif: ಅತ್ತೆಯೊಂದಿಗೆ ನಟಿ ಕತ್ರಿನಾ ಕೈಫ್ ಬಾಂಧವ್ಯ ಹೇಗಿದೆ..?
ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ಅವರ ಅತ್ತೆಯ ಬಾಂಧವ್ಯ ಹೇಗಿದೆ ಎಂಬುದು ಚಿತ್ರವೊಂದರಿಂದ ಬಹಿರಂಗವಾಗಿದೆ. ವಿಶೇಷವೆಂದರೆ ವಿಕ್ಕಿ ಕೌಶಲ್ ಈ ಫೋಟೋವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ: ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್(Katrina Kaif)ಮತ್ತು ನಟ ವಿಕ್ಕಿ ಕೌಶಲ್(Vicky Kaushal) ಮದುವೆಯಾಗಿ 3 ತಿಂಗಳಾಗಿದೆ. ವಿಕ್ಕಿ ಮತ್ತು ಕತ್ರಿನಾ ಮದುವೆ ನಂತರ ಪ್ರತಿದಿನ ತಮ್ಮಿಬ್ಬರ ಫೋಟೋಗಳನ್ನು ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮದುವೆ ಬಳಿಕ ಅತ್ತೆಯೊಂದಿಗೆ ಕತ್ರಿನಾರ ಸಂಬಂಧ ಹೇಗಿದೆ ಅನ್ನೋ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಇತ್ತೀಚಿಗೆ ಹಂಚಿಕೊಂಡಿರುವ ಚಿತ್ರವು ಕತ್ರಿನಾ ಮತ್ತು ಅವರ ಅತ್ತೆಯೊಂದಿಗಿನ ಬಾಂಧವ್ಯವನ್ನು ಬಹಿರಂಗಪಡಿಸಿದೆ.
ಸೊಸೆಯನ್ನು ಪ್ರೀತಿಯಿಂದ ಮುದ್ದಿಸಿದ ವಿಕ್ಕಿಯ ತಾಯಿ
'ಜೇಮ್ಸ್'ಗಾಗಿ ಕಾಯುತ್ತಿದೆ ಜಗತ್ತು: ಎಲ್ಲೆಲ್ಲೂ ರಾರಾಜಿಸುತ್ತಿವೆ 'ಅಪ್ಪು' ಕಟೌಟ್ಸ್..!
ಅತ್ತೆ-ಸೊಸೆಯ ಉತ್ತಮ ಬಾಂಧವ್ಯ
ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ತಾಯಿ(Katrina Kaif Bonding With Vicky Kaushal Mother) ಒಟ್ಟಿಗೆ ಇರುವುದನ್ನು ನೋಡಿದರೆ ಸೊಸೆ ಮತ್ತು ಅತ್ತೆಯ ನಡುವಿನ ಬಾಂಧವ್ಯವು ಅದ್ಭುತವಾಗಿದೆ ಎಂದು ತೋರುತ್ತದೆ. ಈ ಚಿತ್ರದಲ್ಲಿ ಕತ್ರಿನಾ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದರೆ, ಅತ್ತೆ ನೀಲಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿದ ವಿಕ್ಕಿ ಕೌಶಲ್
ಈ ಫೋಟೋವನ್ನು ವಿಕ್ಕಿ ಕೌಶಲ್(Vicky Kaushal) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಶಕ್ತಿ ಮತ್ತು ನನ್ನ ಪ್ರಪಂಚ’ ಅಂತಾ ನಟ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ವಾಸ್ತವವಾಗಿ ಈ ಚಿತ್ರವನ್ನು ವಿಕ್ಕಿ ಕೌಶಲ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day)ಯ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಜೀವನದ ಇಬ್ಬರು ಪ್ರಮುಖ ಮಹಿಳೆಯರಿಗೆ ಸೆಲ್ಯೂಟ್ ಮಾಡಿದ್ದಾರೆ.
ಇದನ್ನೂ ಓದಿ: ನಿವೇದಿತಾ ಜೈನ್ ಸಾವಿನ ರಹಸ್ಯ! ಆಗಿನ ಸಿಎಂಗೂ ಈ ನಟಿಗೂ ಇದ್ದ ನಂಟೇನು?
ಡಿಸೆಂಬರ್ 9ರಂದು ವಿವಾಹವಾಗಿತ್ತು
Vicky Kaushal & Katrina Kaif) ಅವರು ಡಿಸೆಂಬರ್ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿವಾಹವಾದರು. ಈ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು. ಈ ಮದುವೆಯನ್ನು ರಾಯಲ್ ಆಗಿ ಮಾಡಲು ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.