BBK Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ (Bigg boss Kananda season 11) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಾರಿ ದೊಡ್ಮನೆ ಒಳಗೆ ಹೋಗಲಿರುವ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.. ಅಲ್ಲದೆ, ಕೆಲವೊಂದಿಷ್ಟು ಜನ ತಾವೂ ಸಹ ಸ್ಪರ್ಧಿಯಾಗಿ ಬಿಗ್‌ಹೌಸ್‌ ಮನೆ ಸೇರುವ ಕನಸು ಕಾಣುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇನ್ನೇನು ಶೀಘ್ರದಲ್ಲಿಯೇ ಆರಂಭವಾಗಲಿದೆ. ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿದ ಕಿಚ್ಚ ಸುದೀಪ್‌ ಅಂಡ ತಂಡ ಶೋ ಕುರಿತು ಹಲವಾರು ಇಂಟ್ರಸ್ಟಿಂಗ್‌ ಮಾಹಿತಿಗಳನ್ನು ನೀಡಿದೆ. ಅಲ್ಲದೆ, ಆದಷ್ಟು ಬೇಗ ಸ್ಪರ್ಧಿಗಳ ಹೆಸರನ್ನು ಅಂತೀಮಗೊಳಿಸುವುದಾಗಿ ತಿಳಿಸಿದೆ.


ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಮೇಲೆ ಹಲ್ಲೆ, ಅತ್ಯಾಚಾರ ಆರೋಪ..! ಹರ್ಷ ಸಾಯಿ ವಿರುದ್ಧ ದೂರು ದಾಖಲು


ಕಳೆದ ವರ್ಷದ ಸೀಸನ್‌ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಇದೀಗ 11ನೇ ಸೀಸನ್‌ ಪ್ರಾರಂಭವಾಗಲಿದೆ. ಅದಕ್ಕಾಗಿ ಕೆಲವು ನೆಟ್ಟಿಗರು ತಾವೂ ಸ್ಪರ್ಧಿಯಾಗಿ ದೊಡ್ಮನೆ ಸೇರಬೇಕು ಎಂದು ಕನಸು ಕಾಣುತ್ತಿದ್ದಾರೆ. ಅಲ್ಲದೆ, ವಿಡಿಯೋ ಮಾಡಿ ತಮಗೆ ಬೆಂಬಲ ನೀಡುವಂತೆ ನೆಟ್ಟಿಗರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 


ಇನ್ನೂ ಕೆಲವು ಸುದೀಪ್‌ ಸರ್‌ ನನಗೆ ಸಹಾಯ ಮಾಡಿ ನಾನೂ ಬಿಗ್‌ ಬಾಸ್‌ಗೆ ಬರುತ್ತೇನೆ ಅಂತ ಕಿಚ್ಚನಿಗೆ ರಿಕ್ವೇಸ್ಟ್‌ ಮಾಡುತ್ತಿದ್ದಾರೆ. ಅಲ್ಲದೆ, ಹಲವಾರು ಜನರು ಹೇಗಾದರೂ ಮಾಡಿ ವೈರಲ್‌ ಆಗಿ ದೊಡ್ಮನೆ ಸೇರಬೇಕು ಅಂತ ಸ್ಕೇಚ್‌ ಹಾಕಿಕೊಂಡು ವಿಡಿಯೋ, ರೀಲ್ಸ್‌ಗಳನ್ನ ಮಾಡಿ ವೈರಲ್‌ ಆಗುತ್ತಿದ್ದಾರೆ.


ಇದನ್ನೂ ಓದಿ:ಬಿಗ್ ​ಬಾಸ್ ಆರಂಭಕ್ಕೂ ಮೊದಲೇ ಸೆಟ್​ನಲ್ಲಿ ನಡೆಯಿತು ಅವಘಡ


ಆದ್ರೆ ಬಿಗ್‌ಬಾಸ್‌ ಮನೆ ಸೇರಬೇಕು ಅಂದ್ರೆ ಕೇವಲ ರೀಲ್ಸ್‌ ಮಾಡಿದರೆ ಮಾತ್ರ ಸಾಧ್ಯವಿಲ್ಲ ವೈರಲ್‌ ಆಗಬೇಕು, ಉತ್ತಮ ಕಂಟೇಂಟ್‌ ನೀಡುವುದಕ್ಕಿಂತ ವೈರಲ್‌ ಆಗುವ ರೀತಿ ರೀಲ್ಸ್‌ ಮಾಡಬೇಕು ಏಕೆಂದರೆ ಕಳೆದ ಸೀಸನ್‌ನಲ್ಲಿ ಸೋನು ಗೌಡ ಸದ್ದು ಮಾಡಿದ್ದಳು ಅವಳ ಹಿನ್ನಲೆ ನೋಡಿ ನೆಟ್ಟಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ.


ನಿಜಕ್ಕೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ್ರೆ ಬಿಗ್‌ಬಾಸ್‌ಗೆ ಹೋಗಬಹುದು ಅಂತ ತೋರಿಸಿಕೊಟ್ಟವರು ಸೋನು ಅಂದ್ರೆ ತಪ್ಪಾಗಲ್ಲ. ಈ ಬಾರಿ ಅಂತು ಚಿತ್ರ ವಿಚಿತ್ರವಾಗಿ ರೀಲ್ಸ್‌ ಮಾಡಿ ಹುಚ್ಚರೆನಿಸಿಕೊಂಡವರಿಗೆ ಬಿಗ್‌ಬಾಸ್‌ ಮಣೆ ಹಾಕುತ್ತಾ ಇಲ್ಲವೇ ನಿಜವಾಗಿಯೂ ಶ್ರಮವಹಿಸಿ ಸಮಾಜಕ್ಕೆ ಕೊಡುಗೆ ನೀಡಿದವರನರನ ದೊಡ್ಮನೆಗೆ ಕರೆತರುತ್ತಾ ಎನ್ನುವುದನ್ನ ಕಾಯ್ದು ನೋಡಬೇಕು..


ಇದನ್ನೂ ಓದಿ:'ಪುಷ್ಪ 2: ದಿ ರೂಲ್' ನಿಂದ 'ಕಂಗುವ'ವರೆಗೆ; ಬಾಕ್ಸ್‌ಆಫೀಸ್‌ ಧೂಳಿಪಟ ಮಾಡಲಿರುವ 5 ಆಕ್ಷನ್-ಕಾಮಿಡಿ ಸಿನಿಮಾಗಳು


ನೀವು ಸಹ ಸುಮ್ನೆ ಚಿತ್ರ ವಿಚಿತ್ರ ರೀಲ್ಸ್‌ ಮಾಡಿ ಕಂಡ ಕಂಡವರಿಂದ ಹುಚ್ಚರು ಎನಿಸಿಕೊಳ್ಳುವುದಕ್ಕಿಂತ ಉತ್ತಮ ವಿಚಾರ ಹಾಗೂ ಮಾಹಿತಿ ನೀಡುವ ವಿಡಿಯೋ ಮಾಡಿ ಕೊನೆ ಪಕ್ಷ ಬಿಗ್‌ಬಾಸ್‌ ಮನೆ ಸೇರಲಿಲ್ಲ ಅಂದ್ರೂ ಸಹ ನಿಮ್ಮ ಮನೆಯಲ್ಲಿರುವ ಅಪ್ಪ ಅಮ್ಮ ಮತ್ತು ಜನ ಖುಷಿ ಪಡ್ತಾರೆ.. ಇಷ್ಟು ಹೇಳಿ ನನ್ನ ಎರಡು ಮಾತು ಮುಗಿಸುತ್ತೇನೆ.. ಧನ್ಯವಾದಗಳು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.