ಕಳೆದ ಎರಡು ತಿಂಗಳಿನಿಂದ ಬಾಲಿವುಡ್ ಸೂಪರ್ ಹೀರೋ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ ಆಜಾದ್ ಅವರ ಸಂಬಂಧದ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ. ಇತ್ತಿಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಇಲ್ಲಿಯವರೆಗೆ ಇಬ್ಬರೂ ಈ ಸಂಬಂಧದ ಬಗ್ಗೆ ಮೌನ ಮುರಿದಿರಲಿಲ್ಲ. ಈಗ ಸ್ವತಃ ಹೃತಿಕ್ ರೋಷನ್ ಅವರೇ ತಮ್ಮ ಲವ್ ಸ್ಟೋರಿಯ ಸತ್ಯವನ್ನು ಬಹಿರಂಗವಾಗಿಸಿದ್ದಾರಂತೆ. ಅವರ ಇತ್ತೀಚಿನ ಇನ್‌ಸ್ಟಾ ಚಾಟ್ ಈ ಸುದ್ದಿಯನ್ನು ದೃಢೀಕರಿಸುವಂತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಮದುವೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ ಆಲಿಯಾ-ರಣಬೀರ್?


ಪುಣೆಯಲ್ಲಿನ ಮ್ಯಾಡ್‌ಬಾಯ್/ಮಿಂಕ್ ಕಾನ್ಸರ್ಟ್‌ಗಾಗಿ ತಯಾರಾಗುತ್ತಿರುವ ವಿಡಿಯೋವನ್ನು ಸಬಾ ಹಂಚಿಕೊಂಡಿದ್ದಾರೆ. ಸಬಾ (Saba Azad) ತನ್ನ 'ಧ್ವನಿ ತಪಾಸಣೆ' ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಅದು ಹೃತಿಕ್ ಅವರ ಗಮನವನ್ನು ಸೆಳೆದಿದೆ. ಹೃತಿಕ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 


ಇದನ್ನು ಕಂಡು ಸಬಾ ಸಹ ಪ್ರತಿಕ್ರಿಯಿಸಿದ್ದಾರೆ. ಹೃತಿಕ್‌ ಸ್ಟೋರಿಯನ್ನು ಅವರು ಶೇರ್‌ ಮಾಡಿದ್ದಾರೆ. 'ನೀವು ನನ್ನ ಪ್ರೀತಿಯ @Hrithikroshan' ಎಂದು ಬರೆದುಕೊಂಡಿದ್ದಾರೆ. ಈ ಒಂದೇ ಒಂದು ಸ್ಟೋರಿ ಇವರಿಬ್ಬರು ಒಳ್ಳೆಯ ಗೆಳೆಯರು ಎನ್ನುವುದಕ್ಕಿಂತಲೂ ಹೆಚ್ಚಿಗೆ ಇರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡಲು ಕಾರಣವಾಗಿದೆ.


ಇದನ್ನೂ ಓದಿ: ಉಪೇಂದ್ರ ನಟನೆಯ "ಹೋಮ್‌ ಮಿನಿಸ್ಟರ್‌" ಸಿನಿಮಾ ರಿಲೀಸ್‌ ಯಾವಾಗ?


ಡಿಜಿಟಲ್ ಮಾಧ್ಯಮದಲ್ಲಿ ಹೃತಿಕ್ ಸಬಾಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ.ಈ ಹಿಂದೆ ಮಾರ್ಚ್ 7 ರಂದು, ಫೆಮಿನಾ ಇಂಡಿಯಾಕ್ಕಾಗಿ (Femina India) ತನ್ನ ಇತ್ತೀಚಿನ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಸಬಾ  Instagram ನಲ್ಲಿ  ಪೋಸ್ಟ್ ಮಾಡಿದ್ದರು. ಅದರಲ್ಲಿ ಅವಳು ದಿವಂಗತ ಹಾಲಿವುಡ್ ನಟಿ ಆಡ್ರೆ ಹೆಪ್‌ಬರ್ನ್‌ನಂತೆ ಉಡುಗೆ ಧರಿಸಿದ್ದರು. ಇದಕ್ಕೆ ಕಾಮೆಂಟ್‌ ಮಾಡಿದ ಹೃತಿಕ್ ಅವರನ್ನು 'ಟೈಮ್‌ಲೆಸ್' ಎಂದು ಕರೆದಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.