Hrithik Roshan: ಮತ್ತೊಮ್ಮೆ ಸಬಾ ಜೊತೆ ಕಾಣಿಸಿಕೊಂಡ ಹೃತಿಕ್ ರೋಷನ್..!

ಶುಕ್ರವಾರ(ಫೆ.4) ರಾತ್ರಿ ಕೂಡ ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್(Dinner Date)​ಗೆ ತೆರಳಿದ್ದರಂತೆ. ಕೆಫೆಯಿಂದ ಹೊರಬರುತ್ತಿದ್ದಂತೆಯೇ ಇಬ್ಬರು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.

Written by - Puttaraj K Alur | Last Updated : Feb 5, 2022, 11:26 AM IST
  • ಮತೊಮ್ಮೆ ನಟಿ ಸಬಾ ಅಜಾದ್ ಜೊತೆ ಕಾಣಿಸಿಕೊಂಡ ಬಾಲಿವುಡ್ ಹ್ಯಾಂಡ್ಸಮ್‌ ಹಂಕ್ ಹೃತಿಕ್ ರೋಷನ್
  • ಮುಂಬೈನ ಕೆಫೆಯೊಂದರಲ್ಲಿ ಭರ್ಜರಿಯಾಗಿ ಡಿನ್ನರ್ ಡೇಟ್ ನಡೆಸಿದ ಬಾಲಿವುಡ್ ಜೋಡಿ
  • ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಜೊತೆಯಾಗಿರುವ ವಿಡಿಯೋ ವೈರಲ್
Hrithik Roshan: ಮತ್ತೊಮ್ಮೆ ಸಬಾ ಜೊತೆ ಕಾಣಿಸಿಕೊಂಡ ಹೃತಿಕ್ ರೋಷನ್..! title=
ಹೃತಿಕ್ ರೋಷನ್ ಮತ್ತು ಸಬಾ ಅಜಾದ್

ನವದೆಹಲಿ: ಬಾಲಿವುಡ್‌ನ ಸ್ಟಾರ್ ಹೀರೋ, ಹ್ಯಾಂಡ್ಸಮ್‌ ಹಂಕ್ ಹೃತಿಕ್ ರೋಷನ್(Hrithik Roshan) ಮತ್ತೊಮ್ಮೆ ಸಬಾ ಅಜಾದ್(Saba Azad) ಜೊತೆಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಒಟ್ಟಿಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ವೈರಲ್ ಆಗಿರುವ ಫೋಟೋಗಳನ್ನು ಕಂಡ ಅಭಿಮಾನಿಗಳ ಅನುಮಾನ ಮತ್ತಷ್ಟು ದಟ್ಟವಾಗಿದೆ.

ಹೃತಿಕ್ ಮತ್ತು ಸಬಾ(Saba Azad) ಒಟ್ಟಿಗೆ ಓಡಾಡುತ್ತಿರುವುದು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ಈ ಜೋಡಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ನಡೆಸುತ್ತಿದ್ದಾರೆಂಬ ಅನುಮಾನಕ್ಕೆ ಪುಷ್ಠಿ ನೀಡಿದ್ದಾರೆ. ಇವರಿಬ್ಬರು ಒಟ್ಟಿಗೆ ಇರುವ ಫೋಟೋ ಸೆರೆ ಹಿಡಿಯಲು ಮಾಧ್ಯಮಗಳು ಪ್ರಯತ್ನಿಸುತ್ತಿದ್ದಂತೆಯೇ ಸಬಾ ತಮ್ಮ ಗುರುತು ಮರೆಮಾಚಲು ಪ್ರಯತ್ನಿಸಿದ್ದಾರೆ. ತಮ್ಮ ಕೂದಲಿನಿಂದ ಅವರು ಮುಖವನ್ನು ಮುಚ್ಚಕೊಳ್ಳಲು ಯತ್ನಿಸಿದ್ದಾರೆ.  

ಇದನ್ನೂ ಓದಿ: Nora Fatehi ಇನ್ಸ್ಟಾಗ್ರಾಮ್ ಖಾತೆ Delete! ಆಕೆಯ ಕೊನೆಯ ಪೋಸ್ಟ್ ಯಾವ್ದಿತ್ತು ಗೊತ್ತಾ?

ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಸಬಾ ಆಜಾದ್ (Saba Azad) ಹೀಗೆ ಜೊತೆಜೊತೆಯಾಗಿ ಓಡಾಡುತ್ತಿರುವುದು ಅಭಿಮಾನಿಗಳಿಗೆ ಮತ್ತು ನೆಟಿಜನ್ಸ್ ಗಳಿಗೆ ಕುತೂಹಲ ಮೂಡಿದೆ. ಇವರಿಬ್ಬರು ತಮ್ಮ ಡೇಟಿಂಗ್ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಈ ಜೋಡಿ ಬಗ್ಗೆ ಸಾಕಷ್ಟು ಗಾಳಿಸುದ್ದಿ ಹರಿದಾಡುತ್ತಿವೆ. ಹೃತಿಕ್ ಈ ಬಾರಿ ಸಬಾ ಕೈಹಿಡಿದುಕೊಂಡೇ ಹೆಜ್ಜೆ ಹಾಕಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನಟ-ನಟಿಯ ಡೇಟಿಂಗ್ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

ಸಬಾ ಮತ್ತು ಹೃತಿಕ್ ಜೊತೆಯಾಗಿ ಸುತ್ತುತ್ತಿರುವುದು ನಿಜವಾದರೂ ತಮ್ಮ ಸಂಬಂಧದ ಬಗ್ಗೆ ಇಬ್ಬರಿಂದಲೂ ಇದುವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಈ ಬಗ್ಗೆ ಇಬ್ಬರೂ ಮೌನವಾಗಿಯೇ ಇದ್ದು, ಗುಟ್ಟುಗುಟ್ಟಾಗಿಯೇ ‘ಲವ್ ಬರ್ಡ್ಸ್’ ತರ ಡೇಟಿಂಗ್(Hrithik Roshan and Saba Azad Dating) ಮಾಡುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಜೋಡಿ ಜೊತೆ ಜೊತೆಯಾಗಿಯೇ ಸುತ್ತಾಡುತ್ತಿದೆ ಅಂತಾ ಬಾಲುವುಡ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘ಕೆಜಿಎಫ್‌-2ʼ ನಟಿಯಿಂದ ಬಿಗ್‌ ಅಪ್‌ಡೇಟ್..! ಕನ್ನಡದ ಸಿನಿಮಾಗಾಗಿ ಕಾಯುತ್ತಿದೆ ಜಗತ್ತು..!

ಶುಕ್ರವಾರ(ಫೆ.4) ರಾತ್ರಿ ಕೂಡ ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್(Dinner Date)​ಗೆ ತೆರಳಿದ್ದರಂತೆ. ಕೆಫೆಯಿಂದ ಹೊರಬರುತ್ತಿದ್ದಂತೆಯೇ ಇಬ್ಬರು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಇದರಿಂದ ಸಬಾ ಮತ್ತು ಹೃತಿಕ್ ಕೊಂಚ ಕಸಿವಿಸಿಯನ್ನು ಅನುಭವಿಸಿದ್ದಾರೆ. ಸಬಾ ತಲೆತಗ್ಗಿಸಿ ಕೂದಲಿನಿಂದ ತಮ್ಮ ಮುಖವನ್ನು ಮರೆಮಾಚಿದರೆ, ಹೃತಿಕ್ ಆಕೆಯ ಕೈ ಹಿಡಿದು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News