ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ ಎನ್.ಕುಮಾರ್ ‌ಮತ್ತು ನಟ ಸುದೀಪ್ ನಡುವಿನ ಅಡ್ವಾನ್ಸ್ ಜಟಾಪಟಿಗೆ ಇದೀಗ ನಯಾ ಟ್ವಿಸ್ಟ್‌ ಸಿಕ್ಕಿದೆ. ಹುಚ್ಚ ಸಿನಿಮಾ ನಿರ್ಮಾಪಕರಾದ ಎಚ್.ಎ.ರೆಹಮಾನ್ ಈಗ ಸುದ್ದಿಗೋಷ್ಠಿ ನಡೆಸಿ, ಸುದೀಪ್‌ ವಿರುದ್ಧ ಬಿಗ್‌ ಬಾಂಬ್‌ ಸಿಡಿಸಿದ್ದಾರೆ. ಹುಚ್ಚ ಸಿನಿಮಾ ನಿರ್ಮಾಪಕರಿಗೂ ಸುದೀಪ್‌ ಅಡ್ವಾನ್ಸ್ ಹಿಂದಿರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. 


COMMERCIAL BREAK
SCROLL TO CONTINUE READING

ಹುಚ್ಚ ಸಿನಿಮಾ‌ ಟೈಮ್‌ನಲ್ಲಿ ನೀಡಿದ್ದ ಅಡ್ವಾನ್ಸ್ ‌ಹಾಗೂ ಕೆಲವು ಸಿನಿಮಾಗಳ ರೈಟ್ಸ್ ನ ತರಿಸಿದ್ದ ಸುದೀಪ್, ಆ ನಂತರ ಸಿನಿಮಾ ಮಾಡಲಿಲ್ಲ‌ವೆಂದು ನಿರ್ಮಾಪಕ ಎಚ್.ಎ.ರೆಹಮಾನ್ ಆರೋಪ ಮಾಡಿದ್ದಾರೆ. ಇದರಿಂದ ಲಕ್ಷ ಲಕ್ಷ ನಷ್ಟವಾಗಿದೆ ಎಂದಿದ್ದಾರೆ. 


ಹುಚ್ಚ ಸಿನಿಮಾದ ನಿರ್ಮಾಪಕ ರೆಹಮಾನ್ ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದರು. ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ನಾನು 20 ಸಿನಿಮಾ ಮಾಡಿದ್ದೀನಿ. ಯಜಮಾನ ಮತ್ತು ಹುಚ್ಚ ಸಿನಿಮಾ ನಿರ್ಮಾಣ ಮಾಡಿದ್ದೀನಿ. ನನಗೆ ನ್ಯಾಯ ಕೇಳೋಕೆ ಸುದ್ದಿಗೋಷ್ಠಿ ಕರೆದಿರುವೆ. ಸುದೀಪ್ ಮೇಲೆ ಆರೋಪ ಮಾಡ್ತಿಲ್ಲ, ನ್ಯಾಯ ಕೇಳ್ತಿದ್ದೀನಿ ಎಂದು ನಿರ್ಮಾಪಕ ರೆಹಮಾನ್ ಹೇಳಿದ್ದಾರೆ. 


ಸುದೀಪ್‌ ಈಗ ದೊಡ್ಡ ಹೀರೋ. ಅವರ ಮೇಲೆ ಆಪಾದನೆ ಮಾಡೋದು ಚೆನ್ನಾಗಿರುವುದಿಲ್ಲ. ಹುಚ್ಚ ಸಿನಿಮಾ ಮಾಡಿದೆ, ಯಜಮಾನ ಆದಮೇಲೆ ಉಪೇಂದ್ರ ಅವರ ಹತ್ತಿರ ಹೋಗಿದ್ದೆ. ಅವರು ಟೈಟಲ್ ಕೇಳಿ ಬೇಡ ಅಂದರು. ನಂತರ ಮಗಳು ಹೇಳಿದ ಮೇಲೆ ಸುದೀಪ್ ಅವರನ್ನು ಹಾಕೊಂಡು ಹುಚ್ಚ ಸಿನಿಮಾ ಮಾಡಿದೆ. ಯಜಮಾನ ಸಿನಿಮಾ ಮಾಡಿ, ಹುಚ್ಚ ಅಂತ ಸಿನಿಮಾ ಮಾಡ್ತಿಯಾ ಎಂದು ಗಾಂಧಿನಗರದಲ್ಲಿ ಬೈದರು. ನಾಲ್ಕುವರೆ ಲಕ್ಷಕ್ಕೆ ಶಿವಮೊಗ್ಗ ಏರಿಯಾದ ವಿತರಣೆ ಸುದೀಪ್‌ಗೆ ಕೊಟ್ಟೆ. ನಮ್ಮ ಊರು, ನನಗೇ ಬೇಕು ಅಂತ ಅವರೇ ಕೇಳಿದ್ರು ಎಂದು ನಿರ್ಮಾಪಕ ರೆಹಮಾನ್ ತಿಳಿಸಿದ್ದಾರೆ. 


ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್‌ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರ 


ಹುಚ್ಚ ಸಿನಿಮಾ‌ ರಿಲೀಸ್ ‌ಆಗಿ 100 ದಿನ ಆಯ್ತು. ಸುದೀಪ್ ಅವರನ್ನು ಕರೆಸಿ ಲಾಡು ಹಂಚಿದ್ವಿ. ಅಣ್ಣಾವ್ರು ಹುಚ್ಚ ನೋಡಬೇಕು ಅಂತ ಕೇಳಿದ್ರು, ಲಾಸ್ಟ್ ಸೀನ್ ನಲ್ಲಿ ಅಣ್ಣಾವ್ರು ಕಣ್ಣೀರು ಹಾಕಿದ್ರು. ವಾಲಿ ಸಿನಿಮಾ‌ ಶೂಟಿಂಗ್‌ನಲ್ಲಿದ್ದ ಸುದೀಪ್ ಬಂದ್ರು. ಅಣ್ಣಾವ್ರು ಸುದೀಪ್ ಗೆ ಹೊಗಳಿದ್ರು ಎಂದಿದ್ದಾರೆ.


ಅವರು ಹೇಳಿದಂಗೆ ಬೆಳೆದರು ಸುದೀಪ್. ಆದರೆ ಬೆಳೆದ  ಮೇಲೆ ಹತ್ತಿದ ಏಣಿ ಒದೆಯಬಾರದು. ಯಾರಾದರು ಡೇಟ್ ಕೇಳಿದ್ರೆ ನನ್ ಹೆಸರು ಹೇಳೋರು. ಅದಕ್ಕೆ ನಾನು ಹೋಗಿ‌ ಕೇಳಿದೆ, ಆವಾಗ ರಿಮೇಕ್ ಸಿನಿಮಾ ಮಾಡೋಣ ಅಂದರು. ಸ್ವರ್ಗ್ ಸಿನಿಮಾ‌ ಮಾಡೋಣ, ವಿಷ್ಣು ಅವರನ್ನ ಗೆಸ್ಟ್ ಅಪಿಯರೆನ್ಸ್ ಮಾಡೋಣ ಅಂದರು. ಅದಕ್ಕೆ ಹತ್ತು ಲಕ್ಷ ಕೊಟ್ಟು ಆ ಸಿನಿಮಾ ರೈಟ್ಸ್ ತಂದೆ ಎಂದು ನಿರ್ಮಾಪಕ ರೆಹಮಾನ್ ತಿಳಿಸಿದ್ದಾರೆ.  


ನಾನು ಬಾಂಬೆಗೆ ಹೋಗಿ ರೈಟ್ಸ್ ತಗೊಂಡು ಬಂದು, ಸ್ವರ್ಗ್ ಟೈಟಲ್ ‌ಲಾಂಚ್ ಅಂತ ಪೂಜೆ ಮಾಡಿಸಿದ್ವಿ. ವಿಷ್ಣು ಹಿಂದೇ ಮುಂದೇ ನೋಡಿದ್ರು ಆಗ ಸುಮ್ನೆ ಆದ್ವಿ. ಅಂದಾಜ್ ಅಪ್ನಾ ಅಪ್ನಾ ಮಾಡೋಣ ಅಂದ್ರು, ರವಿ ಶ್ರೀವತ್ಸ ಮಾತ ಮಾಡಿದ್ರು. ರಾಜೇಂದ್ರಸಿಂಗ್ ಬಾಬು ಮಗ ಆದಿತ್ಯ ಅಂತ ಸಲ್ಮಾನ್ ಪಾತ್ರ ನಾನು ‌ಮಾಡ್ತಿನಿ, ಅಮೀರ್ ಪಾತ್ರ ನೀನು ‌ಮಾಡು ಅಂತ ಕಿತ್ತಾಡಿಕೊಂಡರು. ಆ ನಂತರ ಅದನ್ನೂ ಅಲ್ಲಿಗೇ ಬಿಟ್ಟು ಸುಮ್ಮನಾದ್ವಿ. ನಂತರ ಲಾವಾರೀಸ್ ರಿಮೇಕ್ ರೈಟ್ಸ್ ತಂದೆ. ಕೈ ಕಾಲು ಹಿಡಿದು ತಂದೆ. ಆಮೇಲೆ ಅಮ್ಜದ್ ಖಾನ್ ಕ್ಯಾರೆಕ್ಟರ್ ಮಾಡೋರಿಲ್ಲ ಅಂತ ಕ್ಯಾನ್ಸಲ್ ಮಾಡಿದ್ರು ಎಂದು ನಿರ್ಮಾಪಕ ರೆಹಮಾನ್ ಹೇಳಿದ್ದಾರೆ. 


ಇದನ್ನೂ ಓದಿ: "ಸುದೀಪ್‌ ಸಿನಿಮಾ ಮಾಡ್ತಿನಿ ಅಂತ ಹಣ ಪಡೆದು, ಈಗ ಕೈಗೆ ಸಿಕ್ತಿಲ್ಲ" : ನಿರ್ಮಾಪಕ ಕುಮಾರ್ 


ಎಂಟು ವರ್ಷದ ಹಿಂದೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದೆ. ಇಲ್ಲಿ ಸೂರಪ್ಪ ಬಾಬು ಇದ್ರು.   ಸೂರಪ್ಪ ಬಾಬು ಆಗ ಸುದೀಪ್‌ಗೆ ಸಿನಿಮಾ ಮಾಡ್ತಿದ್ರು. ನನ್ನ ದೂರನ್ನ ಮುಚ್ಚಾಕಿ ಬಿಟ್ರು. ನಾಲ್ಕೂವರೆ ಲಕ್ಷ ಅಡ್ವಾನ್ಸ್ ಕೋಟ್ಟಿದ್ದೇ ಅದು ವಾಪಸ್ ಕೊಡಲಿ. ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ವಾಪಸ್ ಕೊಡಲಿ ಅಂತ ನಿರ್ಮಾಪಕ ರೆಹಮಾನ್ ಆಗ್ರಹಿಸಿದ್ದಾರೆ. 


1 ಲಕ್ಷ 80 ಸಾವಿರ ಅಸಿಸ್ಟೆಂಟ್ ಹತ್ರ ಕಳಿಸಿದ್ರು. ಅದಕ್ಕೆ ಕಂಪ್ಲೆಂಟ್‌ ಮಾಡಿದೆ. ಆದರೆ ಇವರು ತಗೋಳಿಲ್ಲ ಆಮೇಲೆ ಸುಮ್ಮನಾದೆ. ನಾನು ಮನೆ ಹತ್ರ ಹೋಗೋಕೆ ಶುರು ಮಾಡಿದೆ. ನೂರೈವತ್ತು ಸಾರಿ ಹೋಗಿದ್ದೀನಿ. ಯಾವಾಗ ಹೋದ್ರು ಅವರು ಇಲ್ಲ ಅಂತ ಹೇಳಿಬಿಡೋರು. ಒಂದು ದಿನ ಆಗಲೇ ಸುದೀಪ್‌ ಒಳಗೆ ಹೋದರು. ಆದರೂ ಇಲ್ಲ ಅಂತ ಹೇಳಿದ್ರು ಎಂದು ನಿರ್ಮಾಪಕ ರೆಹಮಾನ್ ಆರೋಪಿಸಿದ್ದಾರೆ. 


ಬರ್ತಡೇ ದಿನ‌ ಸಿಗಬಹುದು ಅಂತ ಹೋದೆ. ನಾನು ಒಳಗೆ ಹೋದ್ರೆ ಮೇಲಗಡೆ ಎಲ್ಲಾ ನಿರ್ಮಾಪಕರು ಕೂತಿದ್ರು. ನನ್ನ ಫ್ಯಾನ್ಸ್ ಕೂತಿರೋ ಲೈನ್ ನಲ್ಲಿ ಲಾಸ್ಟ್ ನಲ್ಲಿ ಕೂರಿಸಿದ್ರು. ಆಮೇಲೆ ಬೇರೆಯವರು ಅಲ್ಲಿ ಕರೆಸಿ ಕೂರಿಸಿದರು. ಶುಭಾಶಯ ಹೇಳಿದೆ ಕುತ್ಕೋಳಿ ಅಂದ್ರು ನಾನು ಬೇಜಾರು ಆಗಿ ಬಂದೆ. ಜಾಕ್ ಮಂಜು ಮಾತಾನಾಡಿ ನಿಮಗೆ ಹೇಳೋಕೆ ಹೇಳಿದ್ದಾರೆ ಕೊಡ್ತಿವಿ ಸರ್ ಅಂತ ಹೇಳಿದ್ರು ಎಂದು ನಿರ್ಮಾಪಕ ರೆಹಮಾನ್ ಹೇಳಿದ್ದಾರೆ.


ಇದನ್ನೂ ಓದಿ: Kiccha Sudeep: ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!


1350 ಕಾಲ್ ಮಾಡಿದ್ದೀನಿ, ಕಾಲ್ ಕಟ್ ಮಾಡ್ತಿದ್ರು. ನೂರು ಸುಳ್ಳು ಹೇಳಿದ್ದಾರೆ. ಆಮೇಲೆ ಅವರು ಕಷ್ಟದಲ್ಲಿದ್ದೀನಿ ಅಂತ ಕೇಳಿ ಸರ್ ಕೋಡ್ತಾರೆ ಎಂದರು. ನಾನು ಸಹ ಹಾಗೆಯೇ ಕೇಳಿದೆ. ಆಯ್ತು ಸರ್ ಜಾಕ್ ಹೇಳಿದಿನಿ ಅಂದ್ರು. ಶೂಟಿಂಗ್ ಎಲ್ಲಾ ಸುತ್ತಾಡಿ ಬಂದೇ ಕೊಡಲಿಲ್ಲ. ಅವ್ರು ಇದ್ದಲ್ಲಿಗೆ ಹೋದ್ರೆ ಕ್ಯಾರವಾನ್ ಇಂದ ಇಳಿದು ಬರಲಿಲ್ಲ. ಈ ಮನುಷ್ಯ ಗೌರವ ಕೊಡಲ್ಲ ನಿಮಗೆ, ಬರಬೇಡಿ ಅಂದ್ರು. ನಾನು ಸುಮ್ಮನಾಗಿ ಬಿಟ್ಟೆ ಎಂದು ಆರೋಪಿಸಿದ್ದಾರೆ. ಕಡೆಗೆ ಒಂದು ದಿನ ಜಾಕ್ ಮಂಜು ಫೋನ್ ಮಾಡಿದ್ದರು. ವಿಕ್ರಾಂತ್ ರೋಣ ಆದಮೇಲೆ ಕಾಲ್ ಮಾಡಿದ್ದರು. ಸಿನಿಮಾ ಮಾಡಿ ದೊಡ್ಡ ತಪ್ಪು ಮಾಡಿದೆ ಸರ್ ಅಂದ್ರು. ಈಗ ಅರ್ಥ ಆಯ್ತೆನಪ್ಪ ಅಂದೇ ಎಂದು ರೆಹಮಾನ್‌ ಹೇಳಿದ್ದಾರೆ. 


ನನ್ನ ಮನವಿ ಇಷ್ಟೇನೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಎಷ್ಟು ಜನದ‌ ಮೇಲೆ ಇವರು ಕೇಸ್ ಹಾಕ್ತಾರೆ. ಕಿಚ್ಚ ಕ್ರಿಯೇಷನ್ ಅಂತ ಇಡ್ಕೋಂಡಿದ್ದಾರಲ್ಲ ಅದು ನನ್ನ ಸಿನಿಮಾದಲ್ಲಿ ಬರೋದು. ಇವರು ನನ್ನ ಬಳಿ ಯಾವ ಪರ್ಮಿಷನ್ ತಗೊಂಡಿಲ್ಲ‌. ನಾನು ಮಾನನಷ್ಟ ಮೊಕದ್ದಮೆ ಹಾಕಬಹುದಲ್ವಾ ಎಂದಿದ್ದಾರೆ. ನಾನು ಖರ್ಚು ಮಾಡಿದ್ದು, 22 ವರ್ಷದ ಹಿಂದೆ ರೈಟ್ಸ್ ತಂದಿರೋದು ಎಲ್ಲಾ ವಾಪಸ್ ಕೊಡಲಿ. ನಾವು ಸಾಲ ಮಾಡಿದ್ದೀವಿ ಬಡ್ಡಿ ಕಟ್ತಿದ್ದೀನಿ ಅದಕ್ಕೆ ಕೊಡಲಿ. ದಯಮಾಡಿ ಸುದೀಪ್ ಗೆ ಕೈ ಮುಗಿದು ಕೇಳಿ ಕೊಳ್ತಿನಿ ನಾನು ಹಾಕಿರೋದು ಕೊಟ್ಟು ಉಪಾಕಾರ ಮಾಡಿ ಅಷ್ಟೇ ಎಂದು ರೆಹಮಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.