"ಸುದೀಪ್‌ ಸಿನಿಮಾ ಮಾಡ್ತಿನಿ ಅಂತ ಹಣ ಪಡೆದು, ಈಗ ಕೈಗೆ ಸಿಕ್ತಿಲ್ಲ" : ನಿರ್ಮಾಪಕ ಕುಮಾರ್

Producer Kumar On Sudeep : ಸುದೀಪ್‌ ಮುಂದಿನ ಸಿನಿಮಾ ಅನೌನ್ಸ್‌ ಬೆನ್ನಲ್ಲೇ ನಿರ್ಮಾಪಕ ಎನ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಬಳಿ ಹಣ ಪಡೆದು ಸಿನಿಮಾ ಮಾಡ್ತಿಲ್ಲ ಎಂದು ಆರೋಪಿಸಿದ್ದಾರೆ.   

Written by - Chetana Devarmani | Last Updated : Jul 3, 2023, 01:45 PM IST
  • ಸಿನಿಮಾ ಮಾಡ್ತಿನಿ ಅಂತ ಹಣ ಪಡೆದು, ಈಗ ಕೈಗೆ ಸಿಕ್ತಿಲ್ಲ
  • ಗಂಭೀರ ಆರೋಪ ಮಾಡಿದ ನಿರ್ಮಾಪಕ ಎನ್‌ ಕುಮಾರ್‌
  • ಕಿಚ್ಚ ಸುದೀಪ್‌ ವಿರುದ್ಧ ನಿರ್ಮಾಪಕರ ಆರೋಪ
"ಸುದೀಪ್‌ ಸಿನಿಮಾ ಮಾಡ್ತಿನಿ ಅಂತ ಹಣ ಪಡೆದು, ಈಗ ಕೈಗೆ ಸಿಕ್ತಿಲ್ಲ" : ನಿರ್ಮಾಪಕ ಕುಮಾರ್ title=

ಬೆಂಗಳೂರು: ನಿನ್ನೆಯಷ್ಟೇ ಕಿಚ್ಚ ಸುದೀಪ್‌ ಹೊಸ ಸಿನಿಮಾದ ಫಸ್ಟ್‌ ಟೀಸರ್‌ ರಿಲೀಸ್‌ ಆಗಿದೆ. ಇದರಲ್ಲಿ ಸುದೀಪ್‌ ಅವರ ಲುಕ್‌ ಕೂಡ ರಿವೀಲ್‌ ಆಗಿದೆ. ಸುದೀಪ್‌ ಮುಂದಿನ ಸಿನಿಮಾ ಅನೌನ್ಸ್‌ ಬೆನ್ನಲ್ಲೇ ನಿರ್ಮಾಪಕ ಎನ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಬಳಿ ಹಣ ಪಡೆದು ಸಿನಿಮಾ ಮಾಡ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಎನ್ ಕುಮಾರ್, ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಸಾಕಷ್ಟು ನೋವು ಆಗಿದೆ. ನಾನು ಸುದೀಪ್ ಅವರ ಜೊತೆಗೆ ಹಲವಾರು ಸಿನಿಮಾ‌ ಮಾಡಿದ್ದೀನಿ. ಅವರ ಅನೇಕ ಸಿನಿಮಾಗಳ ವಿತರಣೆ ಮಾಡಿದ್ದೇನೆ. ನಮ್ಮ ಅವರ ಬಾಂಧವ್ಯ ಚೆನ್ನಾಗಿತ್ತು. ಸುಮಾರು ಎಂಟು ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ಇವತ್ತು ನಾಳೆ ಅಂತ ಹೆಳಿಕೊಂಡು ಬಂದಿದ್ದಾರೆ. ನಿಮ್ಮದೆ ಮುಂದಿನ ಸಿನಿಮಾ ಅಂತ ಹೇಳ್ತಾರೆ. ಅದ್ರೆ ಇಲ್ಲಿಯವರೆಗು ಮಾಡಿಲ್ಲ ಎಂದರು. 

ಸಖತ್ ಗೊಂದಲ ಮಾಡ್ತಿದ್ದಾರೆ ಕೈಗೆ ಸಿಗ್ತಿಲ್ಲ. ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೊಟ್ಟಿದ್ದೀನಿ. ಮತ್ತೆ ಅವ್ರು ಕೈಗೆ ಸಿಗ್ತಿಲ್ಲ ಅಂದಮೇಲೆ ನಾವು ಯಾರತ್ರ ಹೋಗಿ ಹೇಳಬೇಕು. ಚಿತ್ರರಂಗ ಉಳಿಬೇಕು ಅಂದ್ರೆ ನಿರ್ಮಾಪಕರು ಇರಬೇಕು. ಆದರೆ ಅವರಿಗೆ ಹೀಗಾದ್ರೆ ಹೇಗೆ? ನಾನು ಸುದೀಪ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೀನಿ. ಸಿನಿಮಾ ಮಾಡ್ತಿನಿ ಅಂತ ಹೇಳಿ ಮಾತಾಡ್ತಿಲ್ಲ. ಫುಲ್ ಸೆಟಿಲ್‌ಮೆಂಟ್ ಆಗಿದೆ. ನನ್ನಿಂದ ಬೇರೆ ಅವರಿಗೆ ದುಡ್ಡು ಕೊಡಿಸಿದ್ದಾರೆ. ಅವರು ಬಂದು ಹೇಳೋಕೆ ರೆಡಿ ಎಂದು ಆರೋಪಿಸಿದರು. 

ಇದನ್ನೂ ಓದಿ: ಪವನ್‌ ಕುಮಾರ್‌ 'ಧೂಮಂ' ಒಟಿಟಿ ರಿಲೀಸ್‌ಗೆ ರೆಡಿ..! ಯಾವಾಗ, ಎಲ್ಲಿ..? ಇಲ್ಲಿದೆ ಮಾಹಿತಿ 

ನಂಬಿಕೆ ಮೇಲೆ ಕೊಟ್ಟಿದ್ದೀನಿ ಆದರೆ ಇವತ್ತು ಕೈಗೆ ಸಿಗ್ತಿಲ್ಲ. ನಾನು ಯಾಕೆ ವಾಪಸ್ ಕೇಳಬೇಕು ಹೇಳಿದಂತೆ ಸಿನಿಮಾ ಮಾಡಿಕೊಡಲಿ‌. ಮುತ್ತತ್ತಿ ಸತ್ಯರಾಜ್ ಎಂಬ ಟೈಟಲ್ ಆಗಿ ನಂದಕಿಶೋರ್ ಸ್ಕ್ರಿಪ್ಟ್ ರೆಡಿ ಮಾಡಿದ್ರು, ಇಲ್ಲಿಯವರೆಗು ಆ ಬಗ್ಗೆ ಮಾತೇ ಇಲ್ಲ. ವಾಣಿಜ್ಯ ಮಂಡಳಿಗೆ ಬರಲಿ ಎದುರಿಗೆ ಬಂದು ಮಾತಡಲಿ. ದುಡ್ಡು ಕೊಟ್ಟು ನಾವು ಅವರ ಹತ್ತಿರ ಬೇಡಬೇಕು ಎಂದು ಹೇಳಿದರು.

ಆರು ಲೆಟರ್ ಬರೆದಿದ್ದಾರೆ. ಚೇಂಬರ್ ನಿಂದ ಒಂದು ಪತ್ರಕ್ಕೆ ರಿಪ್ಲೈ ಮಾಡಿದ್ದಾರೆ. ಸಾಕ್ಷಿ ಇದ್ಯಾ ಅವರತ್ರ ಅಂತ ಕೇಳಿದ್ದಾರೆ. ದುಟ್ಡು ಕೊಟ್ಟು ಎಂಟು ವರ್ಷ ಕಂಪ್ಲೀಟ್ ಆಗಿದೆ. ಮುಕುಂದ ಮುರಾರಿಗಿಂತ ಮುಂಚೇನೆ ಕೊಟ್ಟಿದ್ದು. ಪೈಲ್ವಾನ್, ಕೋಟಿಗೊಬ್ಬ ಆದಮೇಲೆ ಮಾಡ್ತಿನಿ ಅಂತ ಹೇಳಿದರು. ವಿಕ್ರಾಂತ್ ರೋಣ ಆದಮೇಲೆ ನಿಮ್ಮದೆ ಮಾಡೋದು ಅಂತ ಹೇಳಿದ್ರು. ಈಗ ಮದ್ರಾಸ್ ನಲ್ಲಿ ಸಿನಿಮಾ ಮಾಡೋಕೆ ಹೊರಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. 

ಬುಧವಾರದವರೆಗೂ ಕಾಯುತ್ತೀನಿ. ಚೇಂಬರ್ ಎಲ್ಲಾ ಸಂಘಗಳು ಏನು ತಿರ್ಮಾನ ಮಾಡ್ತಾರೆ ಅಂತ ನೋಡ್ತಿನಿ. ಆಮೇಲೆ ಧರಣಿ ಕುಳಿತುಕೊಳ್ಳುತ್ತೇನೆ. ನನಗೆ ನ್ಯಾಯ ಸಿಗೋವರೆಗು ಧರಣಿ ಬಿಡಲ್ಲ. ಪ್ರಿಯಾ ಮೇಡಮ್ ಗೆ ಕಳಿಸಿದ್ದೀನಿ. ಅವರು ಏನು ರಿಪ್ಲೈ ಮಾಡಿಲ್ಲ. ಅವರು ಅಡುಗೆ ಮನೆ ರಿಪೇರಿಗೆ ಹತ್ತು ಲಕ್ಷ ಇಸ್ಕೋಂಡಿದಾರೆ ಯಾರತ್ರ ಇಸ್ಕೋಂಡ್ರು ಕೇಳಿ. ನಾನು ತಪ್ಪು ಮಾಡಿದ್ರೆ ನಿಮ್ಮ ಎದುರಿಗೆ ಅವರ ಕಾಲಿಗೆ ಬೀಳುತ್ತೇನೆ ಎಂದರು.

ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಪ್ರಕರಣದ ಪ್ರಮುಖ ಸಾಕ್ಷಿ ಬಹಿರಂಗ..! 

ಆರ್.ಆರ್ ನಗರದಲ್ಲಿ ಸುದೀಪ್ ‌ಮನೆ ತಗೋಂಡಿದಾರೆ, ಅದು ನಾನು ದುಡ್ಡು ಕೊಟ್ಟಿರೋದು. ನಾನು ಇವತ್ತು ಮನೆ ಮಾರಿದೀನಿ. ನಂದಕಿಶೋರ್ ಗೆ 46 ಸಾವಿರ ಅಡ್ವಾನ್ಸ್ ಕೊಟ್ಟಿದ್ದೀನಿ. ಸುದೀಪ್‌ಗೆ ಕ್ಯಾಷ್‌ನಲ್ಲಿ ಕೊಟ್ಟಿದ್ದೀನಿ. ಬೇರೆ ಅವರಿಗೆ ಕೊಡಿಸಿದ್ದಾರೆ. ನನಗೆ ಆಗಿರೋ ಅನ್ಯಾಯಗಳು ಇನ್ನೋಬ್ಬರಿಗೆ ಆಗಬಾರದು. ರನ್ನ ಪ್ರಾಬ್ಲಮ್ ಅದಾಗ ಇದೇ ಫಿಲ್ಮ್ ಚೇಂಬರ್‌ಗೆ ಸುದೀಪ್ ಬಂದಿದ್ರು. ಇವಾಗಲೂ ಬರಲಿ. ಇಲ್ಲಿ ಇತ್ಯರ್ಥ ಮಾಡಿಕೊಳ್ಳಲಿ. ಅವರಿಂದ ನಮಗೆ ಏಳು ವರ್ಷ ನಷ್ಟ ಆಗಿದೆ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News