ಕಬ್ಜ ಸಾಂಗ್ ರಿಲೀಸ್: ಕಬ್ಜ ಹವಾ ಡೇ ಬೈ ಡೇ ಜಾಸ್ತಿಯಾಗುತ್ತಲೇ ಇದೆ. ಇದೀಗ ‘ಚುಂ ಚುಂ ಚಳಿ..’ಅನ್ನೋ ಮತ್ತೊಂದು ಹಾಡು ರಿಲೀಸ್ ಆಗಿ ಟ್ರೆಂಡಿಂಗ್ ನಲ್ಲಿದೆ. ಕಬ್ಜ ಸಿನಿಮಾದ ಟೈಟಲ್ ಮತ್ತು ನಮಾಮಿ ಹಾಡಿಗೆ ಜನ ಫುಲ್ ಫಿದಾ ಆಗಿದ್ರು. ಇದೀಗ ‘ಚುಂ ಚುಂ ಚಳಿ..’ ಹಾಡು ಕೂಡ ಅಷ್ಟೇ ಕಿಕ್ ಕೊಟ್ಟಿದೆ.


COMMERCIAL BREAK
SCROLL TO CONTINUE READING

ಆರ್​. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡುತ್ತಲೇ ಇದೆ.. ಶಿಡ್ಲಘಟ್ಟದಲ್ಲಿ ಈ ಚಿತ್ರದ ಹೊಸ ಹಾಡು ಬಿಡುಗಡೆ ಆಗಿದ್ದು, ಸಚಿವ ಡಾ. ಕೆ. ಸುಧಾಕರ್​, ಶಿವರಾಜ್​ಕುಮಾರ್​  ಕೂಡ ಪಾಲ್ಗೊಂಡು ಖುಷಿ ಹಂಚಿದರು. ಶಿವರಾಜ್​ಕುಮಾರ್​ ಮತ್ತು ಉಪೇಂದ್ರ ಅವರ ಸ್ನೇಹ ಹಲವು ವರ್ಷಗಳದ್ದು. ಉಪ್ಪಿ ನಟನೆಯ ‘ಕಬ್ಜ’ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ ಬಳಿಕ ಶಿವಣ್ಣ ಇಡೀ ತಂಡಕ್ಕೆ ಶುಭ ಹಾರೈಸಿದರು. 


ಇದೇ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್​. ಚಂದ್ರು ಜೊತೆ ತಮಗೆ ಇರುವ ಸ್ನೇಹದ ಬಗ್ಗೆ ಮಾತನಾಡಿದ ಶಿವಣ್ಣ, ಉಪೇಂದ್ರಗೆ ನಾನು ದೊಡ್ಡ ಫ್ಯಾನ್ ಎಂದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಹಾಡಿ ಕುಣಿಯುವ ಮೂಲಕ ಶಿಡ್ಲಘಟ್ಟ ಜನತೆಗೆ ಮಸ್ತ್​ ಮನರಂಜನೆ ನೀಡಿದರು.  ನಾನು ರಾಜ್ಯ ಕಟ್ಟೋದು ಕತ್ತಿಗಳಿಂದಲ್ಲ ಕಣ್ರೋ.. ಅದನ್ನು ಹಿಡಿಯೋ ಕೈಗಳಿಂದ ಅಂತ ಉಪೇಂದ್ರ ಕೂಗಿದ್ದು ಯಾಕೆ...?


ಆರ್​. ಚಂದ್ರು ಅವರನ್ನೇ ಹೀರೋಯಿನ್​ ಜಾಗದಲ್ಲಿ ನಿಲ್ಲಿಸಿ, ‘ಓಂ’ ಸಿನಿಮಾದ ಫೇಮಸ್​ ಡೈಲಾಗ್​ ಹೇಳುವ ಮೂಲಕ ಶಿವಣ್ಣ ಖುಷಿ ಹಂಚಿದರು.  ಆರ್​. ಚಂದ್ರು ಅವರು ಪರಿಶ್ರಮದ ಬಗ್ಗೆ ಶಿವಣ್ಣ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. 


ಶ್ರೀಯಾ ಶರಣ್​ ಅವರು ‘ಕಬ್ಜ’ ಚಿತ್ರದಲ್ಲಿ ಹೀರೋಯಿನ್​ ಆಗಿ ನಟಿಸಿದ್ದಾರೆ. ಅವರು ಕಾಣಿಸಿಕೊಂಡಿರುವ ‘ನಮಾಮಿ..’ ಹಾಡು ಈಗಾಗಲೇ ಸೂಪರ್​ ಹಿಟ್​ ಆಗಿದೆ. ಈಗ ಬಿಡುಗಡೆ ಆಗಿರುವ ‘ಚುಂ ಚುಂ ಚಳಿ..’ ಹಾಡಿನಲ್ಲಿ ತಾನ್ಯಾ ಹೋಪ್​ ಹೆಜ್ಜೆ ಹಾಕಿದ್ದಾರೆ.


ಇದನ್ನೂ ಓದಿ- "ಕಬ್ಜ" ಸಿನಿಮಾದ ಮಾಸ್ ಸಾಂಗ್ ಮೇಕಿಂಗ್ ವಿಡಿಯೋಗೆ ಫ್ಯಾನ್ಸ್ ಫುಲ್ ಫಿದಾ..!


ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್  ನಟನಟಿಯರು ಕೂಡ ಕಾದುಕುಳಿತಿದ್ದಾರೆ.ರವಿ ಬಸ್ರೂರ್ ಸಂಗೀತದ ಮೂಲಕ ದೊಡ್ಡ ಮಟ್ಟದಲ್ಲಿ  ಕಮಾಲ್ ಮಾಡ್ತಿದೆ ಕಬ್ಜ ಹಾಡು.


ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.