"ಕಬ್ಜ" ಸಿನಿಮಾದ ಮಾಸ್ ಸಾಂಗ್ ಮೇಕಿಂಗ್ ವಿಡಿಯೋಗೆ ಫ್ಯಾನ್ಸ್ ಫುಲ್ ಫಿದಾ..!

ಬಿಗ್ ಬಜೆಟ್ ಸಿನಿಮಾದ ಅದ್ದೂರಿ ಸಾಂಗ್ ಮೇಕಿಂಗ್ ಝಲಕ್ ನೋಡಿದ್ರೆ ನೀವು ಕೂಡ ಥ್ರಿಲ್ ಆಗಬೋದು. ಉಪೇಂದ್ರ ಸ್ಟೆಪ್ಸ್ ಹಾಕಿರೋ ಹಾಡಿನ ಮೇಕಿಂಗ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಅದ್ದೂರಿ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ.

Written by - YASHODHA POOJARI | Last Updated : Feb 15, 2023, 02:46 PM IST
  • ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.
  • 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
  • ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.
"ಕಬ್ಜ" ಸಿನಿಮಾದ ಮಾಸ್ ಸಾಂಗ್ ಮೇಕಿಂಗ್ ವಿಡಿಯೋಗೆ ಫ್ಯಾನ್ಸ್ ಫುಲ್ ಫಿದಾ..! title=
Kabza

ಕಬ್ಜ ಸಿನಿಮಾದ ಮಾಸ್ ಸಾಂಗ್ ಫ್ಯಾನ್ಸ್ ಫಿಧಾ  ಆಗೋದು ಫುಲ್ ಪಕ್ಕಾ ಆಗೋಗಿದೆ. ಕಬ್ಜ ಸಿನಿಮಾದ ಸಿಗ್ನೇಚರ್ ಸ್ಟೆಪ್ ಟ್ರೆಂಡ್ ಆಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಆರ್ ಚಂದ್ರು ಬತ್ತಳಿಕೆಯ  ಕಬ್ಜ ಮಾಸ್ಟರ್ ಪೀಸ್ ಸೂಚನೆ ಸಿಕ್ಕಿದೆ. ಈ ಹಾಡಿಗೆ ಬರೋಬ್ಬರಿ 500 ಕ್ಕೂ ಹೆಚ್ಚು ಡ್ಯಾನ್ಸರ್ ಗಳಿಂದ ಹೆಜ್ಜೆ ಹಾಕಿಸಲಾಗಿದೆ.

ಹಿಂದೆಂದೂ ನೋಡದ ರೀತಿಯಲ್ಲಿ ರೆಡಿಯಾಗಿದೆ ಕಬ್ಜ ಹಾಡು. ಜಾನಿ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ಅದ್ದೂರಿ ಸಾಂಗ್ ಸಿದ್ಧವಾಗಿದೆ. ಈಗಾಗಲೇ ಹಲವು ಸೂಪರ್ ಹಿಟ್ ಹಾಡುಗಳನ್ನ ಕೋರಿಯೋಗ್ರಫಿ ಮಾಡಿರೋ ಜಾನಿ ಮಾಸ್ಟರ್  ಇಲ್ಲಿ ಕಂಪ್ಲೀಟ್ ಡಿಫರೆಂಟ್ ಆಗಿ ಕೊರಿಯೋಗ್ರಫಿ ಮಾಡಿದ್ದಾರೆ. 

ಇದನ್ನೂ ಓದಿ- ಅಬ್ಬರಿಸಲು ಸಜ್ಜಾದ "ಕಬ್ಜ"....

ಬಿಗ್ ಬಜೆಟ್ ಸಿನಿಮಾದ ಅದ್ದೂರಿ ಸಾಂಗ್ ಮೇಕಿಂಗ್ ಝಲಕ್ ನೋಡಿದ್ರೆ ನೀವು ಕೂಡ ಥ್ರಿಲ್ ಆಗಬೋದು. ಉಪೇಂದ್ರ ಸ್ಟೆಪ್ಸ್ ಹಾಕಿರೋ ಹಾಡಿನ ಮೇಕಿಂಗ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಅದ್ದೂರಿ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ರವಿ ಬಸ್ರೂರ್ ಸಂಗೀತದ ಮೂಲಕ ದೊಡ್ಡ ಮಟ್ಟದಲ್ಲಿ  ಕಮಾಲ್ ಮಾಡ್ತಿದೆ ಕಬ್ಜ ಹಾಡು.

ಇದನ್ನೂ ಓದಿ- Kabza: ಎಲ್ಲೆಲ್ಲೂ ‘ಕಬ್ಬ’ ಸಿನಿಮಾದ್ದೇ ಹವಾ, ಹೊಸ ಸುದ್ದಿ ಏನ್ ಗೊತ್ತಾ?

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ ಇದು ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News