IIFA 2022 Winners: ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಶೆರ್‌ಶಾ ಸಿನಿಮಾಗೆ ಬೆಸ್ಟ್‌ ಸಿನಿಮಾ ಪ್ರಶಸ್ತಿಯನ್ನು ಗೆದ್ದಿತು. ಅಬುಧಾಬಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಕ್ಕಿ ಕೌಶಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ  ಪ್ರಶಸ್ತಿಯನ್ನುಕೃತಿ ಸನೋನ್ ಮುಡಿಗೇರಿಸಿಕೊಂಡರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಲೆಗೆ ಹುಳ ಬಿಡ್ತಿದೆ ಉಪೇಂದ್ರ ನಿರ್ದೇಶನದ "UI" ಚಿತ್ರದ ಹೊಸ ಪೋಸ್ಟರ್


ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಸ್ಟಾರ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಮಾತ್ರವಲ್ಲ ಎಲ್ಲರ ಗಮನ ಸೆಳೆಯುತ್ತಿವೆ. ನಟಿ ಐಶ್ವರ್ಯಾ ರೈ, ಅನನ್ಯಾ ಪಾಂಡೆ, ಜಾಕ್ವೆಲಿನ್ ಫರ್ನಾಂಡಿಸ್, ಸಾರಾ ಅಲಿ ಖಾನ್, ತಮನ್ನಾ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ.


ಯಾರಿಗೆ ಯಾವ ಪ್ರಶಸ್ತಿ, ಇಲ್ಲಿದೆ ಕಂಪ್ಲೀಟ್‌ ಲಿಸ್ಟ್:


ಅತ್ಯುತ್ತಮ ನಟ - ವಿಕ್ಕಿ ಕೌಶಲ್ (ಸರ್ದಾರ್ ಉಧಮ್ ಸಿಂಗ್)


ಅತ್ಯುತ್ತಮ ನಟಿ - ಕೃತಿ ಸನೂನ್ (ಮಿಮಿ)


ಅತ್ಯುತ್ತಮ ನಿರ್ದೇಶಕ ವಿಷ್ಣುವರ್ಧನ್ (ಶೇರ್‌ಶಾ)


ಅತ್ಯುತ್ತಮ ಸಿನಿಮಾ - ಶೇರ್‌ಶಾ


ಉದಯೋನ್ಮುಖ ನಟಿ - ಶರ್ವರಿ ವಾಗ್ (ಬಂಟಿ ಔರ್ ಬಬ್ಲಿ2)


ಉದಯೋನ್ಮುಖ ನಟ- ಅಹನ್ ಶೆಟ್ಟಿ (ತಡಪ್)


ಅತ್ಯುತ್ತಮ ಗಾಯಕ - ಜುಬಿನ್ ನೌಟಿಯಾಲ್ (ಶೇರ್‌ಶಾ)


ಅತ್ಯುತ್ತಮ ಗಾಯಕಿ - ಅನೀಸ್ ಕೌರ್ ( ಶೇರ್‌ಶಾ)


ಅತ್ಯುತ್ತಮ ಪೋಷಕ ನಟಿ - ಸಾಯಿ ತಮಂಕರ್ (ಮಿಮಿ)


ಅತ್ಯುತ್ತಮ ಪೋಷಕ ನಟ - ಪಂಕಜ್ ತ್ರಿಪಾಠಿ (ಲೂಡೊ)


ಇದನ್ನೂ ಓದಿ: Johnny Depp: ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್


ವಿಕ್ಕಿ ಕೌಶಲ್ ಅಭಿನಯದ ಶೇರ್‌ಶಾ, ಸರ್ದಾರ್ ಉಧಮ್ ಸಿಂಗ್, ಮಿಮಿ ಸಿನಿಮಾಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದಿವೆ. ಉಧಮ್ ಸಿಂಗ್ ಸಿನಿಮಾ ಅತ್ಯುತ್ತಮ ನಟ, ಛಾಯಾಗ್ರಹಣ, ಸಂಕಲನ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದಿದೆ. ಇನ್ನು ಆನಂದ್ ಎಲ್ ರೈ ಅವರ ಅತ್ರಂಗಿ ರೇ ಸಿನಿಮಾ ಕೂಡ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.