ತಲೆಗೆ ಹುಳ ಬಿಡ್ತಿದೆ ಉಪೇಂದ್ರ ನಿರ್ದೇಶನದ "UI" ಚಿತ್ರದ ಹೊಸ ಪೋಸ್ಟರ್

Upendra New Movie: ಪೋಸ್ಟರ್ ಒಳಗೊಂದು ಪೋಸ್ಟರ್‌ನಂತೆ ಗೋಚರಿಸುತ್ತಿರುವ ಉಪೇಂದ್ರ ನಿರ್ದೇಶನದ "UI" ಸಿನಿಮಾದ ಹೊಸ ಪೋಸ್ಟರ್‌ ಇದೀಗ ಕುತೂಹಲದ ಗಣಿಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ "UI" ಚಿತ್ರದ ಹೊಸ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. 

Written by - Chetana Devarmani | Last Updated : Jun 2, 2022, 07:03 PM IST
  • ಪೋಸ್ಟರ್ ಒಳಗೊಂದು ಪೋಸ್ಟರ್‌
  • ಉಪೇಂದ್ರ ನಿರ್ದೇಶನದ "UI" ಸಿನಿಮಾ
  • "UI" ಚಿತ್ರದ ಹೊಸ ಪೋಸ್ಟರ್ ರಿಲೀಸ್‌
ತಲೆಗೆ ಹುಳ ಬಿಡ್ತಿದೆ ಉಪೇಂದ್ರ ನಿರ್ದೇಶನದ "UI" ಚಿತ್ರದ ಹೊಸ ಪೋಸ್ಟರ್  title=
"UI" ಚಿತ್ರದ ಹೊಸ ಪೋಸ್ಟರ್

Upendra New Movie:  ಪೋಸ್ಟರ್ ಒಳಗೊಂದು ಪೋಸ್ಟರ್‌ನಂತೆ ಗೋಚರಿಸುತ್ತಿರುವ ಉಪೇಂದ್ರ ನಿರ್ದೇಶನದ "UI" ಸಿನಿಮಾದ ಹೊಸ ಪೋಸ್ಟರ್‌ ಇದೀಗ ಕುತೂಹಲದ ಗಣಿಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ "UI" ಚಿತ್ರದ ಹೊಸ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಆದರೆ ಉಪ್ಪಿ ಎಲ್ಲರ ತಲೆ ಸಖತ್‌ ಹುಳ ಬಿಟ್ಟಿದ್ದಾರೆ. ಈ ಪೋಸ್ಟರ್‌ ನೋಡಿದವರಿಗೆಲ್ಲ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಾಗುತ್ತಲೇ ಇದೆ.  

ಇದನ್ನೂ ಓದಿ: ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್‌ ಸ್ಟಾರ್‌ ಯಶ್‌! ವೈರಲ್‌ ಆಗ್ತಿರುವ ಪೋಸ್ಟರ್‌ ಅಸಲಿಯತ್ತೇನು?

6 ವರ್ಷಗಳ ಹಿಂದೆ ಉಪ್ಪಿ 2 ಚಿತ್ರದ ಬಳಿಕ ಉಪೇಂದ್ರ ನಿರ್ದೇಶನದಿಂದ ದೂರ ಉಳಿದಿದ್ದರು. ಇದೀಗ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಇದೊಂದು  ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಈ ಹಿಂದೆ ಕೇವಲ ಚಿಹ್ನೆಯಿಂದ ಸಿನಿಮಾಗೆ ಉಪ್ಪಿ ಟೈಟಲ್‌ ಇಟ್ಟಿದ್ದರು. ಅದನ್ನು ಅಭಿಮಾನಿಗಳು ಸೂಪರ್ ಎಂದು ಕರೆದರು. ಈ ಬಾರಿಯೂ ತಮ್ಮ ಸಿನಿಮಾಕ್ಕೆ ಕೇವಲ ಒಂದು ಚಿಹ್ನೆಯನ್ನು ಹೆಸರಾಗಿ ಇಟ್ಟಿದ್ದಾರೆ. 

 

 

ಈ ಚಿತ್ರದ ಟೈಟಲ್‌ ಏನು ಎಂಬುದು ಜನರ ಆಲೋಚನೆಗೆ ಬಿಟ್ಟಿದ್ದು. 'ಯು' 'ಐ' ಎಂದುಕೊಳ್ಳಬಹುದು, ಮೂರು ನಾಮ ಎಂದುಕೊಳ್ಳಬಹುದು ನೀನು ಮತ್ತು ನಾನು ಎಂದು ಬೇಕಾದರು ಅಂದುಕೊಳ್ಳಿ ಎಂದು ಉಪೇಂದ್ರ ಈ ಹಿಂದೆ ಹೇಳಿದ್ದರು. ಈ ಹಿಂದೆ ತನ್ನ ಫಸ್ಟ್‌ ಲುಕ್‌ನಿಂದ ಜನರ ತಲೆಗೆ ಹುಳ ಬಿಟ್ಟಿದ್ದ ಈ ಚಿತ್ರದ ಹೊಸ ಪೋಸ್ಟರ್‌ ಇಂದು ರಿಲೀಸ್‌ ಆಗಿದೆ. ಇದು ನೋಡುಗರ ಮೆದುಳಿಗೆ ಕೈ ಹಾಕುವಂತಿದೆ. 

ಹೌದು, ಈ ಹೊಸ ಪೋಸ್ಟರ್‌ನ್ನು ನೋಡಿದವರಿಗೆ ಅರೆ ಘಳಿಗೆ ನಿಬ್ಬೆರಗಾಗುವುದು ಪಕ್ಕಾ. ಇದನ್ನು ನೋಡಿದ ತಕ್ಷಣ ಪೋಸ್ಟರ್‌ ಒಳಗೊಂದು ಪೋಸ್ಟರ್‌ ಇರುವಂತೆ ಕಾಣುತ್ತದೆ. ಸದ್ಯ ಉಪೇಂದ್ರ ನಿರ್ದೇಶನದ  "UI" ಚಿತ್ರದ ಈ ಹೊಸ ಪೋಸ್ಟರ್‌ ಜನರಲ್ಲಿ ಸಿನಿಮಾ ಬಗ್ಗೆ ಇದ್ದ ಕುತೂಹಲವನ್ನು ಇಮ್ಮಡಿಗೊಳಿಸಿದೆ. 

ಇದನ್ನೂ ಓದಿ: Johnny Depp: ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್

ಕಳೆದ 3 ವರ್ಷದ ಅವಧಿಯಲ್ಲಿಉಪೇಂದ್ರ  ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ  ತ್ರಿಶೂಲಂ, ಬುದ್ಧಿವಂತ 2 ಹಾಗೂ ಲಗಾಮ್ ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆರ್.ಚಂದ್ರು ನಿರ್ದೇಶನದ ಬಿಗ್‌ ಬಜೆಟ್ ಸಿನಿಮಾ ಕಬ್ಜದಲ್ಲಿಯೂ ಉಪೇಂದ್ರ ನಟಿಸುತ್ತಿದ್ದಾರೆ. ಇದು ಕೂಡ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News