Johnny Depp: ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್

ಜಗತ್ತಿನ ಜನರ ಗಮನಸೆಳೆದಿದ್ದ ನಟ ಜಾನಿ ಡೆಪ್ ಹಾಗೂ ಅವರ ಮಾಜಿ ಪತ್ನಿ ಅಂಬರ್ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಈ ಕೇಸ್‌ನಲ್ಲಿ ಜಾನಿ ಡೆಪ್‌ ಪರವಾಗಿ ತೀರ್ಪು ಬಂದಿದೆ.

Written by - Chetana Devarmani | Last Updated : Jun 2, 2022, 03:53 PM IST
  • ನಟ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣ
  • ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್
  • ಈ ಪ್ರಕರಣದ ವಿಚಾರಣೆಯನ್ನು ಏಳು ಜ್ಯೂರಿಗಳ ಬೆಂಚ್ ಆಲಿಸಿದೆ
Johnny Depp: ಮಾಜಿ ಪತ್ನಿ ವಿರುದ್ಧ ಕೇಸ್ ಗೆದ್ದ ಹಾಲಿವುಡ್ ನಟ ಜಾನಿ ಡೆಪ್  title=
ಜಾನಿ ಡೆಪ್

ಜಗತ್ತಿನ ಜನರ ಗಮನಸೆಳೆದಿದ್ದ ನಟ ಜಾನಿ ಡೆಪ್ ಹಾಗೂ ಅವರ ಮಾಜಿ ಪತ್ನಿ ಅಂಬರ್ ಹರ್ಡ್‌ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಈ ಕೇಸ್‌ನಲ್ಲಿ ಜಾನಿ ಡೆಪ್‌ ಪರವಾಗಿ ತೀರ್ಪು ಬಂದಿದೆ.  

ಇದನ್ನೂ ಓದಿ: Gajanana and Gang Movie : ಬೆಳ್ಳಿತೆರೆ ಮೇಲೆ 'ಗಜಾನನ & ಗ್ಯಾಂಗ್' ಅಬ್ಬರಕ್ಕೆ ಕೌಂಟ್‌ಡೌನ್‌..!

ಈ ಪ್ರಕರಣದ ವಿಚಾರಣೆಯನ್ನು ಏಳು ಜ್ಯೂರಿಗಳ ಬೆಂಚ್ ಆಲಿಸಿದೆ. ಮಾನ ನಷ್ಟ, ಆಸ್ತಿ ನಷ್ಟ ಹಾಗೂ ದೈಹಿಕ ಹಿಂಸೆ ಅನುಭವಿಸಿರುವ ಜಾನಿ ಡೆಪ್‌ಗೆ 15 ಮಿಲಿಯನ್ ಡಾಲರ್ ನೀಡುವಂತೆ ಅವರ ಮಾಜಿ ಪತ್ನಿ ಅಂಬರ್‌ಗೆ ಸೂಚಿಸಿದೆ. ಇದಲ್ಲದೇ ಜಾನಿ ಡೆಪ್ ಕೂಡ ಅಂಬರ್‌ಗೆ 2 ಮಿಲಿಯನ್ ಡಾಲರ್ ನೀಡುವಂತೆ ಸೂಚನೆ ಜ್ಯೂರಿ ತಿಳಿಸಿದೆ.

2016ರಲ್ಲಿ ಜಾನಿ ಡೆಪ್ ಹಾಗೂ ಮಾಜಿ ಪತ್ನಿ ಅಂಬರ್ ಹರ್ಡ್ ವಿಚ್ಛೇಧನ ಪಡೆದುಕೊಂಡಿದ್ದರು. ಆದರೆ 2018 ರಲ್ಲಿ ಅಂಬರ್ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಬರೆದ ಲೇಖನವೊಂದರಲ್ಲಿ ತಾವು ಜಾನಿ ಡೆಪ್‌ನಿಂದ ಗೃಹ ಹಿಂಸೆಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಮಾಜಿ ಪತಿ ಜಾನಿ ಡೆಪ್ 50 ಮಿಲಿಯನ್ ಡಾಲರ್‌ ಮೊತ್ತದ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. 

ಇದನ್ನೂ ಓದಿ: KK Last Video: 'ಹಮ್ ರಹೇ ಯಾ ನಾ ರಹೇ ಕಲ್' - ಕೆಕೆ ಹಾಡಿದ ಕೊನೆಯ ಹಾಡು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News