Actor Sonu Sood ಮನೆಗೆ ಆದಾಯ ತೆರಿಗೆ ಸಮೀಕ್ಷೆಗಾಗಿ ತಲುಪಿದ ಅಧಿಕಾರಿಗಳ ತಂಡ
Income Tax Survey In Sonu Sood Residence - ಬಾಲಿವುಡ್ ನ ದಿಗ್ಗಜ ನಟ ಸೋನು ಸೂದ್ ಮನೆಯಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ (Sonu Sood Income Tax) ನಡೆಸಲಾಗುತ್ತಿದೆ. ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯ (Sonu sood Income Tax Survey) ಅನೇಕ ಹಿರಿಯ ಅಧಿಕಾರಿಗಳು ಸೋನು ನಿವಾಸದಲ್ಲಿದ್ದಾರೆ ಎನ್ನಲಾಗಿದೆ.
ನವದೆಹಲಿ: Income Tax Survey In Sonu Sood Residence - ಬಾಲಿವುಡ್ ನಟ (Bollywood Actor)ಸೋನು ಸೂದ್ (Sonu Sood) ಮನೆಯಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ಸಮೀಕ್ಷೆ (Survey) ನಡೆಯುತ್ತಿದೆ. ಮಾಹಿತಿಯ ಪ್ರಕಾರ, ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ಹಲವು ಅಧಿಕಾರಿಗಳು ಸೋನು ಸೂದ್ ಅವರ ಮನೆಯಲ್ಲಿ ಇದ್ದಾರೆ. ಮಾಹಿತಿಯ ಪ್ರಕಾರ, ಮುಂಬೈನಲ್ಲಿರುವ ಸೋನು ಸೂದ್ಗೆ ಸಂಬಂಧಿಸಿದ ಒಟ್ಟು 6 ಸ್ಥಳಗಳಲ್ಲಿ ಆದಾಯ ತೆರಿಗೆ (Income Tax Raid) ಸಮೀಕ್ಷೆ ನಡೆಯುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ದೆಹಲಿ ಸರ್ಕಾರವು (Delhi Government) ಸೋನು ಸೂದ್ ಅವರನ್ನು ಮೆಂಟರ್ ಶಿಪ್ ಪ್ರೊಗ್ರಾಮ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ ನಂತರ ಈ ಸಮೀಕ್ಷೆ ಆರಂಭವಾಗಿದೆ.
ಸಿದ್ದರಾಮಯ್ಯ ಮತ್ತು ಎಚ್ಡಿಕೆ ಹುಸಿ ಜ್ಯಾತ್ಯತೀತ ನಾಯಕರು: ನಟ ಚೇತನ್ ಅಹಿಂಸಾ
ಲಾಕ್ಡೌನ್ (Lockdown) ಅವಧಿಯಲ್ಲಿ ಲಕ್ಷಾಂತರ ಜನರನ್ನು ಅವರವರ ಮನೆಗಳನ್ನು ತಲುಪಲು ಸಹಾಯ ಮಾಡಿದ ಸೋನು ಸೂದ್ ಅವರನ್ನು ನಿಜ ಜೀವನದ ಹಿರೋ ಎಂದು ಕರೆಯಲಾಗುತ್ತದೆ. ಮೊದಲ ಲಾಕ್ಡೌನ್ನಿಂದ ಇಲ್ಲಿಯವರೆಗೆ, ಸೋನು ಸೂದ್ ನಿರಂತರವಾಗಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಟನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರತಿದಿನವೂ ಅಸಂಖ್ಯಾತ ಸಂದೇಶಗಳು ಬರುತ್ತಿವೆ. ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಕೋವಿಡ್ ನಂತರದ ದಿನಗಳಲ್ಲಿ ಸೋನು ಸೂದ್ ಡಿಮಾಂಡ್ ಹಾಗೂ ಗುಡ್ ವಿಲ್ ನಲ್ಲಿ ಭಾರಿ ಏರಿಕೆಯಾಗಿದೆ.
ಇದನ್ನೂ ಓದಿ-‘ಕ್ರೇಜಿಸ್ಟಾರ್’ ರವಿಚಂದ್ರನ್ ಜೊತೆ ಮತ್ತೆ ನಟಿಸಲು ಇಷ್ಟಪಡುತ್ತೇನೆಂದ ನಟಿ ಯಾರು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.