Naseeruddin Shah On Yogi Adityanath: ಉತ್ತರ ಪ್ರದೇಶ ಮುಖ್ಯಮಂತ್ರಿ (UP CM Yogi Adityanath) ಯೋಗಿ ಆದಿತ್ಯನಾಥ್ ನೀಡಿರುವ 'ಅಬ್ಬಾ ಜಾನ್' ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ (Bollywood) ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ಇಂತಹ ಹೇಳಿಕೆಗಳು "ಆಕ್ರಮಣಕಾರಿಯಾಗಿವೆ" ಎಂದು ಹೇಳಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಾಸಿರುದ್ದೀನ್ ಷಾ, "ಯುಪಿ ಸಿಎಂ ಅವರ ಅಬ್ಬಾ ಜಾನ್ ಹೇಳಿಕೆಯು ಅವಮಾನಕಾರಿಯಾಗಿದೆ ಮತ್ತು ಪ್ರತಿಕ್ರಿಯೆಗೆ ಅರ್ಹವಲ್ಲ" ಎಂದು ಹೇಳಿದ್ದಾರೆ.
"ಇದಕ್ಕೆ ಪ್ರತಿಕ್ರಿಯೆ ನೀಡುವಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಈ ಅಬ್ಬಾ ಜಾನ್ ಹೇಳಿಕೆ (Abba Jaan Statement) ಯೋಗಿ ಆದಿತ್ಯನಾಥ್ ಅವರ ದ್ವೇಷಕಾರುವ ಹೇಳಿಕೆಗಳ ಸರಣಿಯ ಒಂದು ಭಾಗವಾಗಿದೆ" ಎಂದು ನಸೀರ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ 2017 ರ ಮೊದಲು 'ಅಬ್ಬಾ ಜಾನ್' ಹೇಳುವವರಿಗೆ ಮಾತ್ರ ರಾಜ್ಯದಲ್ಲಿ ಪಡಿತರ ಸಿಗುತ್ತಿತ್ತು ಎಂದು ಅವರು ಹೇಳುವುದನ್ನು ಕೇಳಬಹುದು. ಭಾನುವಾರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಆಡಳಿತಾವಧಿಯಲ್ಲಿ (Yogi Government Rule In UP) ಉತ್ತರ ಪ್ರದೇಶದಲ್ಲಿ 'ಓಲೈಕೆಯ ರಾಜಕೀಯ' (Appeasement Politics) ಕೊನೆಗೊಂಡಿದೆ ಎಂದೂ ಕೂಡ ಹೇಳಿದ್ದರು.
ಇತ್ತೀಚೆಗಷ್ಟೇ ನಸೀರುದ್ದೀನ್ ಷಾ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ಹಿಂದಿರುಗಿದ ಬಳಿಕ ಸಂಭ್ರಮಾಚರನೆಯಲ್ಲಿ ತೊಡಗಿರುವ ಭಾರತೀಯ ಮುಸ್ಲಿಮರ ಖಂಡಿಸುವ ತಮ್ಮ ಹೇಳಿಕೆಯಿಂದ ಚರ್ಚೆಯಲ್ಲಿದ್ದಾರೆ.
ಇದನ್ನೂ ಓದಿ-Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!
ಷಾ ಹೇಳಿಕೆಗೆ ಹಿಂದೂ ಬಲಪಂಥೀಗಳಿಂದ ಸಿಕ್ಕ ಬೆಂಬಲದ ಕುರಿತು ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ್ದ ನಸೀರುದ್ದೀನ್ ಶಾಹ್, "ಭಾರತದಲ್ಲಿ ಬೆಳೆಯುತ್ತಿರುವ ಬಲಪಂಥೀಯ ಧರ್ಮಾಂಧತೆಯ ವಿರುದ್ಧ ಹಿಂದೂಗಳು ಧ್ವನಿ ಎತ್ತಬೇಕು. ಉದಾರವಾದಿ ಹಿಂದುಗಳು ಇದರ ವಿರುದ್ಧ ಮಾತನಾಡುವ ಸಮಯ ಬಂದಿದೆ, ಏಕೆಂದರೆ ಇದು ಕೇವಲ ಹೆಚ್ಚಾಗುತ್ತಿದೆ" ಎಂದಿದ್ದರು.
ಇದನ್ನೂ ಓದಿ-Upendra: ರಿಯಲ್ ಸ್ಟಾರ್ ಉಪೇಂದ್ರ ಯಾವಾಗ ನಿರ್ದೇಶನ ಶುರು ಮಾಡ್ತಾರೆ ಗೊತ್ತಾ..?
'ಲವ್ ಜಿಹಾದ್' ಮತ್ತು 'ಮಾದಕವಸ್ತು ಜಿಹಾದ್' ನಂತಹ ತಂತ್ರಗಳನ್ನು ಬಳಸಿ "ಮುಸ್ಲಿಮೇತರರನ್ನು ಮುಗಿಸಲು" ಪ್ರಯತ್ನಿಸಲಾಗುತ್ತಿದೆ ಎಂಬ ಕೇರಳದ ಕ್ಯಾಥೋಲಿಕ್ ಚರ್ಚ್ ವೊಂದರ ಬಿಷಪ್ ನೀಡಿರುವ ಹೇಳಿಕೆಯನ್ನು ಸಹ ಖಂಡಿಸಿದ್ದ ನಾಸಿರುದ್ದೀನ್ ಶಾ, 'ಯಾರ ಪ್ರಭಾವದಿಂದ ಅವರು ಇದನ್ನು ಹೇಳಿದ್ದಾರೋ ನನಗೆ ಗೊತ್ತಿಲ್ಲ, ಆದರೆ ಸಮಾಜವನ್ನು ಒಡೆಯಲು ಇಂತಹ ಹೇಳಿಕೆಗಳನ್ನು ನೀಡಲಾಗಿದೆ' ಎಂದಿದ್ದಾರೆ.
ಇದನ್ನೂ ಓದಿ-55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.