ND vs SL 3rd ODI : ಇಂದು ಭಾರತ ಕ್ರಿಕೆಟ್‌ ತಂಡ ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಇತಿಹಾಸ ನಿರ್ಮಿಸಿದೆ. 50-ಓವರ್‌ಗಳ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವಿನ ಅಂತರವನ್ನು (ರನ್‌ಗಳಿಂದ) ಸಾಧಿಸುವ ಮೂಲಕ ದಾಖಲೆ ಬರೆದಿದೆ. ಶ್ರೀಲಂಕಾ ವಿರುದ್ಧದ ಮೂರನೇ ODI ಪಂದ್ಯದಲ್ಲಿ ಟೀಂ ಇಂಡಿಯಾ ಗಮನಾರ್ಹ ಸಾಧನೆ ಮಾಡಿದ್ದು, ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೊಸ ಮುನ್ನುಡಿ ಬರೆದಿದೆ.


COMMERCIAL BREAK
SCROLL TO CONTINUE READING

ಜುಲೈ 2008 ರಲ್ಲಿ ಅಬರ್ಡೀನ್‌ನಲ್ಲಿ ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ನ 290 ರನ್‌ಗಳ ಜಯಗಳಿಸಿತ್ತು. ಇಂದು ಭಾರತವು 317 ರನ್‌ ಗಳಿಸುವ ಮೂಲಕ ನ್ಯೂಜಿಲೆಂಡ್‌ ದಾಖಲೆಯನ್ನು ಧೂಳಿಪಟ ಮಾಡಿದೆ. ಇದಕ್ಕೂ ಮೊದಲು, ಸ್ಪೇನ್‌ನ ಪೋರ್ಟ್ ಆಫ್‌ನಲ್ಲಿ ನಡೆದ 2007 ರ ವಿಶ್ವಕಪ್‌ನಲ್ಲಿ ಬರ್ಮುಡಾ ವಿರುದ್ಧ ಭಾರತ 257 ರನ್‌ಗಳನ್ನು ಭಾರಿಸುವ ಮೂಲಕ ರೋಚಕ ವಿಜಯ ಗಳಿಸಿತ್ತು.


ಜನವರಿ 15ನ್ನು ʼವಿರಾಟ್ ಕೊಹ್ಲಿ ದಿನʼ ಎಂದು ಘೋಷಣೆ...!


ಭಾರತ ನೀಡಿದ 391 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಕೇವಲ 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲೌಟ್ ಆಯಿತು. ಅಶೆನ್ ಬಂಡಾರ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬೌಂಡರಿಯಲ್ಲಿ ಬಾಲ್‌ ಹಿಡಿಯಲು ಹೋದಾಗ ಜೆಫ್ರಿ ವಾಂಡರ್ಸೆ ಮತ್ತು ಅಶೇನ್‌ ಪರಸ್ಪರ ಗುದ್ದಿಕೊಂಡಿದ್ದರು. ಇದರಿಂದ ಅವರು ಗಾಯಗೊಂಡಿದ್ದರು. ನಂತರ ಅಶೆನ್‌ ಬದಲಿಗೆ ದುನಿತ್ ವೆಲ್ಲಲೇಜ್ ಪೀಲ್ಡ್‌ಗೆ ಬಂದರು. ಮೊಹಮ್ಮದ್ ಸಿರಾಜ್ 10 ಓವರ್‌ಗಳಲ್ಲಿ 4/32 ರನ್‌ ಕೊಟ್ಟರೆ, ಮೊಹಮ್ಮದ್ ಶಮಿ (2/20) ಮತ್ತು ಕುಲದೀಪ್ ಯಾದವ್ (2/16) ನೀಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.