Rajinikanth spiritual journey : ಸೂಪರ್ ಸ್ಟಾರ್ ರಜನಿಕಾಂತ್ ಕಾಲಿವುಡ್‌ ಮಾತ್ರವಲ್ಲ.. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ರಜನಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು. 73ರ ಹರೆಯದಲ್ಲೂ ಸೂಪರ್ ಸ್ಟಾರ್ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ.


COMMERCIAL BREAK
SCROLL TO CONTINUE READING

ಹೌದು.. ಈ ವಯಸ್ಸಿನಲ್ಲೂ ರಜನಿ ಅದೇ ಶೈಲಿಯಲ್ಲಿ ಅಭಿಮಾನಿಗಳಿಗೆ ದಿಲ್ ಖುಷ್ ಮಾಡುತ್ತಿದ್ದಾರೆ. ರಜನಿಯವರನ್ನು ಬಾಕ್ಸ್ ಆಫೀಸ್ ಕಿಂಗ್ ಮತ್ತು ದಾಖಲೆಗಳ ಸರದಾರ ಅಂತ ಕರೀತಾರೆ.. ಹೊಸ ದಾಖಲೆಗಳನ್ನು ಸೃಷ್ಟಿಸುವುದು, ತಮ್ಮ ದಾಖಲೆಗಳನ್ನು ತಾವೇ ಮುರಿಯುವುದು ನಟ ರಜನಿಕಾಂತ್ ಅವರಿಗೆ ಹೊಸದೇನಲ್ಲ. ಅಲ್ಲದೆ ಹೊಸ ನಟ ಹಾವಳಿ ಮಧ್ಯ ರಜನಿಕಾಂತ್‌ಗೆ ಹೆಚ್ಚಿನ ಸಂಭಾವನೆ ನೀಡಲು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. 


ಇದನ್ನೂ ಓದಿ:ಪತ್ನಿಗೆ 2.5 ಕೋಟಿ ಐಶಾರಾಮಿ ಕಾರು ಗಿಫ್ಟ್‌ ನೀಡಿದ ಅಲ್ಲು ಅರ್ಜುನ್‌..!


ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್‌ ಅವರು ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಸ್ವತಃ ಈ ಕುರಿತು ಅವರೇ ಹೇಳಿಕೊಂಡಿದ್ದಾರೆ. ಹೌದು.. ಇದು ಸತ್ಯ.. ಬಸ್ ಕಂಡಕ್ಟರ್‌ನಿಂದ ನಟನಾಗಿ ಹೊರಹೊಮ್ಮಿದ ರಜನಿಕಾಂತ್ ತಮ್ಮ ಜೀವನದಲ್ಲಿ ಜರುಗಿದ ಘಟನೆಗಳ ಕುರಿತು ಮೆಲುಕು ಹಾಕಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


1992ರಲ್ಲಿ ತಮ್ಮ ಪತ್ನಿ ಲತಾ ರಜನಿಕಾಂತ್ ಅವರು ಸಿಂಗಾಪುರದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಜನಿಕಾಂತ್ ಅವರು ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗಿನ ತಮ್ಮ ಜೀವನದ ಕುರಿತು ಮಾತನಾಡುತ್ತಾ, ತಾವು ಆಫೀಸ್‌ ಬಾಯ್‌, ಕೂಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ:ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??


ಜೀವನದಲ್ಲಿ ಯಾವುದಕ್ಕೂ ಹೆದರದ ರಜನಿಯವರು, ಒಂದು ಹಂತದಲ್ಲಿ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು ಅಂತ ಶಾಕಿಂಗ್‌ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. "ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ ದಿನ ನನಗೆ ಒಂದು ಕನಸು ಬಿದ್ದಿತ್ತು. ನನ್ನ ಕನಸಿನಲ್ಲಿ ಬಿಳಿ ಗಡ್ಡದ ಸಂತನು ನದಿಯ ಆಚೆ ಕಾಣಿಸಿಕೊಂಡು ನನ್ನನ್ನು ಹತ್ತಿರಕ್ಕೆ ಬರುವಂತೆ ಸನ್ನೆ ಮಾಡಿದ. ನಾನು ಈಜುವ ಬದಲು ಅವನ ಕಡೆಗೆ ಓಡಿದೆ. ಮರುದಿನ ನಾನು ದೇವರ ಬಗ್ಗೆ ವಿಚಾರಿಸಿದೆ ಮತ್ತು ಅದು ಶ್ರೀ ರಾಘವೇಂದ್ರ ಸ್ವಾಮಿ ಅಂತ ತಿಳಿದುಬಂತು, ತಕ್ಷಣವೇ ಮಠಕ್ಕೆ ಹೋದೆ.. ಇಂದಿಗೂ ನಾನು ಪ್ರತಿ ಗುರುವಾರ ಉಪವಾಸ ದೀಕ್ಷೆ ಮಾಡುತ್ತೇನೆ ಅಂತ ಗುರು ರಾಯರ ಮಹಿಮೆಯನ್ನು ಕೊಂಡಾಡಿದರು.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.