Allu Arjun : ಪತ್ನಿಗೆ 2.5 ಕೋಟಿ ಐಶಾರಾಮಿ ಕಾರು ಗಿಫ್ಟ್‌ ನೀಡಿದ ಅಲ್ಲು ಅರ್ಜುನ್‌..!

Allu Sneha Reddy : ಸಮಯ ಸಿಕ್ಕಾಗೆಲ್ಲ ಅಲ್ಲು ಅರ್ಜುನ್ ತಮ್ಮ ಪತ್ನಿ ಅಲ್ಲು ಸ್ನೇಹಾರೆಡ್ಡಿ ಅವರನ್ನು ಎಷ್ಟು ಪ್ರೀತಿ ಮಾಡ್ತಾರೆ ಅಂತ ಹೇಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬನ್ನಿ ಈ ಐಶಾರಾಮಿ ಕಾರನ್ನು ಬುಕ್ ಮಾಡಿದ್ದರು. ಈಗಷ್ಟೇ ಕಾರು ಮನೆಗೆ ಬಂದಿದೆ. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Written by - Krishna N K | Last Updated : May 11, 2024, 12:06 PM IST
    • ಇಂಡಿಯನ್‌ ಸಿನಿರಂಗದ ಕ್ಯೂಟ್‌ ಕಪಲ್‌ಗಳಲ್ಲಿ ಅಲ್ಲು ಅರ್ಜುನ್‌ ದಂಪತಿಯೂ ಒಂದು.
    • ಮಕ್ಕಳ ಜೊತೆ ಹೆಚ್ಚಾಗಿ ಕಾಲ ಕಳೆಯುವ ದಂಪತಿ ತಮ್ಮ ಪ್ಯಾನ್ಸ್‌ಗಳಿಗಾಗಿ ವಿಡಿಯೋ ಶೇರ್‌ ಮಾಡುತ್ತಿರುತ್ತಾರೆ.
    • ಸಧ್ಯ ಬನ್ನಿ ತಮ್ಮ ಪತ್ನಿಗೆ ಬಿಗ್‌ ಸರ್ಪ್ರೈಸ್ ನೀಡಿದ್ದಾರೆ.
Allu Arjun : ಪತ್ನಿಗೆ 2.5 ಕೋಟಿ ಐಶಾರಾಮಿ ಕಾರು ಗಿಫ್ಟ್‌ ನೀಡಿದ ಅಲ್ಲು ಅರ್ಜುನ್‌..! title=

Allu Arjun gift to Sneha Reddy : ಅಲ್ಲು ಅರ್ಜುನ್ - ಸ್ನೇಹಾರೆಡ್ಡಿ ಇಂಡಿಯನ್‌ ಸಿನಿರಂಗದ ಕ್ಯೂಟ್‌ ಕಪಲ್‌ಗಳಲ್ಲಿ ಒಂದು. ಇಬ್ಬರು ಎಷ್ಟು ಅನ್ಯೋನ್ಯವಾಗಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಈ ಜೋಡಿಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಅಲ್ಲದೆ, ಮಕ್ಕಳ ಜೊತೆ ಹೆಚ್ಚಾಗಿ ಕಾಲ ಕಳೆಯುವ ದಂಪತಿ ತಮ್ಮ ಪ್ಯಾನ್ಸ್‌ಗಳಿಗಾಗಿ ವಿಡಿಯೋ ಶೇರ್‌ ಮಾಡುತ್ತಿರುತ್ತಾರೆ.

ಹೌದು.. ಸಮಯ ಸಿಕ್ಕಾಗೆಲ್ಲ ಅಲ್ಲು ಅರ್ಜುನ್ ತಮ್ಮ ಪತ್ನಿ ಅಲ್ಲು ಸ್ನೇಹಾರೆಡ್ಡಿ ಅವರನ್ನು ಎಷ್ಟು ಪ್ರೀತಿ ಮಾಡ್ತಾರೆ ಅಂತ ಹೇಳುತ್ತಿರುತ್ತಾರೆ. ಅಲ್ಲದೆ, ಇದ್ದರಮ್ಮಾಯಿಲತೋ ಸಿನಿಮಾದ ಸಂದರ್ಶವೊಂದರಲ್ಲಿ, ʼಸ್ನೇಹಾ ನನ್ನ ಹೃದಯ, ಹೃದಯವಿಲ್ಲದೇ ಜೀವನವಿಲ್ಲʼ ಅಂತ ಅರ್ಜುನ್‌ ತಮ್ಮ ಪತ್ನಿ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??

ಸಧ್ಯ ಬನ್ನಿ ತಮ್ಮ ಪತ್ನಿಗೆ ಬಿಗ್‌ ಸರ್ಪ್ರೈಸ್ ನೀಡಿದ್ದಾರೆ. ಕಾಸ್ಟ್ಲಿ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇತ್ತೀಚೆಗಷ್ಟೇ ಬನ್ನಿ ಈ ಐಶಾರಾಮಿ ಕಾರನ್ನು ಬುಕ್ ಮಾಡಿದ್ದರು. ಈಗಷ್ಟೇ ಕಾರು ಮನೆಗೆ ಬಂದಿದೆ. ಅಲ್ಲು ಅರ್ಜುನ್ ಕಾರನ್ನು ಬುಕ್ ಮಾಡಿರುವ ಫೋಟೋ ಜೊತೆಗೆ ಕಾರು ಮನೆಗೆ ಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸದ್ಯ ಅಲ್ಲು ಅರ್ಜುನ್ `ಪುಷ್ಪ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾ ಪುಷ್ಪಾ ಸಾಂಗ್‌ ಸಖತ್‌ ಹಿಟ್‌ ಆಗಿದೆ. ಸುಕುಮಾರ್ ನಿರ್ದೇಶನದ ʼಪುಷ್ಪ 2' ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿಲು ಬನ್ನಿ ರೆಡಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News