ಬೆಂಗಳೂರು: ಕೆಜಿಎಫ್‌-2 ಸಿನಿಮಾಗೆ ದೇಶ ಸೇರಿದಂತೆ ವಿದೇಶಗಳಿಂದಲೂ ಸಕ್ಕತ್‌ ರೆಸ್ಪಾನ್ಸ್‌ ಸಿಗುತ್ತಿದೆ.ಸಿನಿಮಾದ ತಾಂತ್ರಿಕ ಅಂಶಗಳಿಂದ ಹಿಡಿದು, ಪಾತ್ರವರ್ಗ, ನಟನೆ, ಕತೆ, ಉಪಕತೆ ಎಲ್ಲಾ ವಿಷಯಗಳ ಬಗ್ಗೆಯೂ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಕೆಜಿಎಫ್‌ ಸಿನಿಮಾ ನೋಡಿದ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಸಿನಿಮಾ ಅಂದ್ರೆ ಈ ರೇಂಜಿಗೆ ಇರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸಿನಿಮಾ ಪ್ರೇಕ್ಷಕರು 'ಕೆಜಿಎಫ್ 2' ಸಿನಿಮಾಗೆ ಜೈಕಾರ ಹಾಕ್ತಿದಾರೆ.ಎಲ್ಲಾ ಭಾಷೆಗಳಲ್ಲೂ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಪ್ರೇಕ್ಷಕರು ಮಾತ್ರ ಅಲ್ಲ, ಈ ಚಿತ್ರಕ್ಕೆ ಪರಭಾಷೆಯ ಕಲಾವಿದರು ಕೂಡ ಫಿದಾ ಆಗಿದ್ದಾರೆ. 


ಕೆಜಿಎಫ್‌-2 ಸಿನಿಮಾವನ್ನ ನಮ್ಮ ದೇಶದಲ್ಲಷ್ಟೇ ಅಲ್ಲದೇ ಹೊರ ದೇಶಗಳಲ್ಲೂ ಜನ ಮೆಚ್ಚಿದ್ದಾರೆ, ಹಾಡಿ ಹೊಗಳಿದ್ದಾರೆ. ಸಿನಿಮಾ ನೋಡಿದ ಖುಷಿಯಲ್ಲಿ ಕಣ್ಣೀರು ಕೂಡ ಹಾಕಿದ್ದಾರೆ.ಪ್ರತಿಯೊಬ್ಬರೂ ಕೂಡ ಕೆಜಿಎಫ್ ಯಶಸ್ಸನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಸದ್ಯ ಸೂಪರ್ ಸ್ಟಾರ್‌ ರಜನಿಕಾಂತ್ ಕೂಡ 'ಕೆಜಿಎಫ್ 2' ಚಿತ್ರವನ್ನು ನೋಡಿದ್ದು, ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ನೋಡಿ ತಲೈವಾ ಫುಲ್ ದಿಲ್ ಖುಷ್ ಆಗಿದ್ದಾರಂತೆ.


'ಕೆಜಿಎಫ್‌-2' ಹಾಡಿಗೆ ಫ್ಯಾನ್ಸ್‌ ಫಿದಾ..! ಎಷ್ಟಾಯ್ತು ಗೊತ್ತಾ ವೀವ್ಸ್..?


ಕನ್ನಡದ ಹಿರಿಯ ನಟಿ ಶೃತಿ ಕೂಡ ಸಿನಿಮಾವನ್ನ ನೋಡಿ ಯಶ್‌ ಸಾಧನೆಯನ್ನ ಕಂಡು ಕೊಂಡಾಡಿದ್ದಾರೆ. ಡೀಯರ್‌ ತಮ್ಮ what an actinģ̧ what an attitude you made us proud ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶೃತಿ. ಈ ಸಿನಿಮಾದಲ್ಲಿ ಶೃತಿ ತಂದೆ ಕೂಡ ಪಾತ್ರ ಮಾಡಿದ್ದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಯಶ್‌ ತಂದೆಯ ಪಾತ್ರದಲ್ಲಿ 77 ವರ್ಷದ ತಮ್ಮ ತಂದೆ ನಟನೆ ಮಾಡಿರೋದನ್ನೂ ಕೂಡ ಪ್ರಸ್ತಾಪ ಮಾಡಿದ್ದಾರೆ ನಟಿ ಶೃತಿ. ಜೊತೆಗೆ ಈಶ್ವರಿ ಪಾತ್ರಕ್ಕೆ ಶೃತಿ ಡಬ್‌ ಮಾಡಿರೋದನ್ನೂ ಹೇಳಿಕೊಂಡಿದ್ದಾರೆ. ರಜನಿಕಾಂತ್ 'ಕೆಜಿಎಫ್ 2' ವೀಕ್ಷಿಸಿದ್ದಾರೆ. ತಲೈವಾ ಕನ್ನಡದಲ್ಲಿಯೇ ಸಿನಿಮಾವನ್ನು ನೋಡಿರುವುದು ವಿಶೇಷ. ಸಿನಿಮಾ ನೋಡಿದ ಬಳಿಕ ಚಿತ್ರತಂಡದ ಜೊತೆಗೆ ರಜನಿಕಾಂತ್ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆಗೆ ಮಾತನಾಡಿ, ಉತ್ತಮ ಚಿತ್ರ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ.


ಇನ್ನು 'ಕೆಜಿಎಫ್ 2' ಚಿತ್ರದ ಬಗ್ಗೆ ಜಗಪತಿ ಬಾಬು ಟ್ವೀಟ್ ಮಾಡಿದ್ದಾರೆ. "ಕೆಜಿಎಫ್ 2 ಚಿತ್ರ ಗಳಿಕೆ ಖುಷಿ ಕೊಟ್ಟಿದೆ. ಈ ಯಶಸ್ಸನ್ನು ಚಿತ್ರತಂಡದ ಜೊತೆಗೆ ನಾನು ಹಂಚಿಕೊಳ್ಳುತ್ತೇನೆ. ಭಾರತೀಯ ಚಿತ್ರರಂಗದ ಬಾವುಟವನ್ನು ಮತ್ತಷ್ಟು ಮೇಲೆ ಕೊಂಡೊಯ್ದ ಕೀರ್ತಿ ಸಲ್ಲುತ್ತದೆ." ಎಂದು ಬರೆದುಕೊಂಡಿದ್ದಾರೆ.ರಾಮ್ ಗೋಪಾಲ್ ವರ್ಮಾ ಕೂಡ 'ಕೆಜಿಎಫ್ 2' ಚಿತ್ರವನ್ನು ಮೆಚ್ಚಿಕೊಂಡು ಸರಣಿ ಟ್ವೀಟ್ ಮಾಡಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಮಾತ್ರವೇ ಬರೆಯದೆ, ಸಿನಿಮಾ ತಂದ ಬದಲಾವಣೆಗಳ ಬಗ್ಗೆಯೂ ಟ್ವೀಟ್‌ಗಳ ಮೂಲಕ ಬೆಳಕು ಚೆಲ್ಲಿದ್ದಾರೆ.


KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!


ಹಿಂದಿ ಚಿತ್ರರಂಗವನ್ನು ಬಿಡಿ, ತೆಲುಗು, ತಮಿಳು ಚಿತ್ರರಂಗ ಸಹ 'ಕೆಜಿಎಫ್' ಸಿನಿಮಾ ಬರುವವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ತಂದುಕೊಟ್ಟಿದ್ದಾರೆ ಎಂದಿದ್ದಾರೆ ವರ್ಮಾ. ರಾಕಿ ಭಾಯ್ ಮುಂಬೈಗೆ ಬಂದು ಮಷಿನ್ ಗನ್‌ನಿಂದ ವಿಲನ್‌ಗಳನ್ನು ಹೊಡೆದು ಹಾಕಿದ್ದು ನನಗೆ ಇಷ್ಟವಾಯಿತು. ಅದೇ ರೀತಿ ನಟ ಯಶ್, ಮುಂಬೈನ ಸ್ಟಾರ್ ನಟರನ್ನು ಸಹ ಹೊಡೆದು ಹಾಕುತ್ತಿದ್ದಾರೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡುವ ಮೂಲಕ ಅವರು ಬಾಲಿವುಡ್‌ನ ಸ್ಟಾರ್ ನಟರನ್ನು ಉಡೀಸ್ ಮಾಡಿದ್ದಾರೆ ಎಂದಿದ್ದಾರೆ ವರ್ಮಾ.


ಏನೇ ಇರಲಿ, ಯಶ್‌ ಯಶಸ್ಸಿನ ಉತ್ತುಂಗಕ್ಕೇರಿದ್ದಾಗಿದೆ. ಯಶ್‌ ಇನ್ನು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಇದೀಗ ಯಶ್‌ ಗುಣಗಾನ ಮಾಡುತ್ತಿದ್ದಾರೆ. ಯಶ್‌ಗೆ ಸಿಕ್ಕಿರೋ ಯಶಸ್ಸು ತುಂಬಾ ಈಸಿಯಾಗಿ ಸಿಕ್ಕಿಲ್ಲ. ಬದಲಾಗಿ ಪರಿಶ್ರಮದ ಫಲವಾಗಿ ದೊರೆತಿದ್ದು ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.